SIR KARNATAKA

ಎಸ್ಐಆರ್ :ಕೊಡಗಿನಲ್ಲಿ 58,883 ಮತದಾರರಿಗೆ ನೋಟಿಸ್ ಜನರೇಟ್ ; ಹಾಜರಾಗದಿದ್ದರೆ ಹೆಸರು ಡಿಲೀಟ್, ದಾಖಲೆ ಇದ್ದರೆ ಮಾತ್ರ ಉಳಿವು: ನೋಟಿಸ್ ಬಗ್ಗೆ ಮತದಾರರಿಗೆ ಮಾಹಿತಿಯೇ ಇಲ್ಲ

admincoorgdaily

ಎಸ್ಐಆರ್ :ಕೊಡಗಿನಲ್ಲಿ 58,883 ಮತದಾರರಿಗೆ ನೋಟಿಸ್ ಜನರೇಟ್ ; ಹಾಜರಾಗದಿದ್ದರೆ ಹೆಸರು ಡಿಲೀಟ್, ದಾಖಲೆ ಇದ್ದರೆ ಮಾತ್ರ ಉಳಿವು: ನೋಟಿಸ್ ಬಗ್ಗೆ ಮತದಾರರಿಗೆ ಮಾಹಿತಿಯೇ ಇಲ್ಲ
ಕೆ.ಎಂ‌ ಇಸ್ಮಾಯಿಲ್ ಕಂಡಕರೆ

ಮಡಿಕೇರಿ: ಎಸ್ಐಆರ್ ಪ್ರಕ್ರಿಯೆ ಎರಡನೇ ಹಂತ ಆಗಸ್ಟ್ 31ರಂದು ಆರಂಭಗೊಂಡಿದ್ದು,ಕರಡು ಮತದಾರರ ಪಟ್ಟಿ ಪ್ರಕಟಗೊಂಡ ಬಳಿಕ ನೋ ಮ್ಯಾಪಿಂಗ್ ಹಾಗೂ ಲಾಜಿಕಲ್ ಡಿಸ್ಕ್ರಿಪೆನ್ಸಿ ಅಡಿಯಲ್ಲಿ ಗುರುತಿಸಲಾಗಿರುವ ಮತದಾರರಿಗೆ ನೋಟಿಸ್ ನೀಡಲಾಗುತ್ತಿದೆ.ಜಿಲ್ಲೆಯಲ್ಲಿ ಮಂಗಳವಾರ ಸಂಜೆ ವರೆಗೆ ಬಿಎಲ್ಒ ಮೂಲಕ‌ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 937 ಹಾಗೂ ವಿರಾಜಪೇಟೆ ಕ್ಷೇತ್ರದಲ್ಲಿ 305 ಮತದಾರರು ಸೇರಿ ಒಟ್ಟು 1242 ಮತದಾರರಿಗೆ ನೋಟಿಸ್ ನೀಡಲಾಗಿದೆ.57,641 ಮತದಾರರಿಗೆ ನೋಟಿಸ್ ನೀಡಲು ಬಾಕಿ ಇದೆ.ಮಡಿಕೇರಿ ಕ್ಷೇತ್ರದಲ್ಲಿ ಲಾಜಿಕಲ್ ಡಿಸ್ಕ್ರಿಪೆನ್ಸಿ 9,252 ಹಾಗೂ 9,533 ಮತದಾರರನ್ನು ನೋ ಮ್ಯಾಪಿಂಗ್ ಅಡಿಯಲ್ಲಿ ಗುರುತಿಸಲಾಗಿತ್ತು.ಮಡಿಕೇರಿ ಕ್ಷೇತ್ರದಲ್ಲಿ 18,785 ಮತದಾರರ ನೋಟಿಸ್ ಜನರೇಟ್ ಆಗಿದ್ದು,17,842 ಮತದಾರರಿಗೆ ನೋಟಿಸ್ ವಿತರಣೆ ಬಾಕಿ ಇದೆ.
ವಿರಾಜಪೇಟೆ ಕ್ಷೇತ್ರದಲ್ಲಿ 26,558 ಮತದಾರರನ್ನು ಲಾಜಿಕಲ್ ಡಿಸ್ಕ್ರಿಪೆನ್ಸಿ ಹಾಗೂ 13,550 ಮತದಾರರನ್ನು ನೋ ಮ್ಯಾಪಿಂಗ್ ಎಂದು ಗುರುತಿಸಲಾಗಿದೆ.ಕ್ಷೇತ್ರದಲ್ಲಿ 40,108 ಮತದಾರರ ನೋಟಿಸ್ ಜನರೇಟ್ ಆಗಿದ್ದು,305 ಮಂದಿ ಮತದಾರರಿಗೆ ಮಾತ್ರ ಮಂಗಳವಾರದವರೆಗೆ ಬಿಎಲ್ಒ ಮೂಲಕ ನೋಟಿಸ್ ವಿತರಣೆ ಮಾಡಲಾಗಿದೆ.
ವಿರಾಜಪೇಟೆ ಕ್ಷೇತ್ರದಲ್ಲಿ 39,799 ಮತದಾರರ ನೋಟಿಸ್ ವಿತರಣೆ ಬಾಕಿ ಇದೆ.

ನೋಟಿಸ್ ನಲ್ಲಿ ದಿನಾಂಕ,ಸಮಯ ಉಲ್ಲೇಖ:

ಲಾಜಿಕಲ್ ಡಿಸ್ಕ್ರಿಪೆನ್ಸಿ ಹಾಗೂ ನೋ‌ ಮ್ಯಾಪಿಂಗ್ ಅಡಿಯಲ್ಲಿ ಗುರುತಿಸಲಾಗಿರುವ ಮತದಾರರಿಗೆ ನೀಡುವ ನೋಟಿಸ್ ನಲ್ಲಿ ತಮಗೆ ಯಾವ ಕಾರಣಕ್ಕೆ ನೋಟಿಸ್ ನೀಡಲಾಗುತ್ತಿದೆ ಎಂಬ ಮಾಹಿತಿ ಇರಲಿದೆ.
ಮತದಾರರ ಹೆಸರು, ಎಪಿಕ್ ನಂಬರ್,ಬೂತ್ ಹೆಸರು ಹಾಗೂ ಯಾವುದೇ ಗೊಂದಲ ಇದ್ದರೆ ಬಿಎಲ್ಒ ಅವರನ್ನು ಸಂಪರ್ಕಿಸಲು ಬಿಎಲ್ಒ ಮೊಬೈಲ್ ಸಂಖ್ಯೆ ಕೂಡ ನೋಟಿಸ್ ನಲ್ಲಿ ನೀಡಲಾಗಿದೆ.
ದಿನಾಂಕ,ಸಮಯ ಮತ್ತು ಸ್ಥಳವನ್ನು ಕೂಡ ಉಲ್ಲೇಖಿಸಲಾಗಿದೆ.
ನೋಟಿಸ್ ಪಡೆದ ಮತದಾರ ತಮಗೆ ನೀಡಿರುವ ದಿನಾಂಕದಂದು ನೋಟಿಸ್ ಹಿಂಭಾಗದಲ್ಲಿ ನೀಡಿರುವ ದಾಖಲೆಯೊಂದಿಗೆ ಇಆರ್.ಒ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ.
ಒಂದು ವೇಳೆ ಇಆರ್.ಒ ಸೂಚಿಸಿರುವ  ದಿನಾಂಕದಂದು ಹಾಜರಾಗಲು ಸಾಧ್ಯವಾಗದಿದ್ದಲ್ಲಿ‌ ಒಂದು ಬಾರಿ ಮಾತ್ರ ವಿನಾಯಿತಿ ನೀಡಲಾಗುತ್ತದೆ.ಎರಡನೇ ಬಾರಿ ಕೂಡ ಗೈರು ಹಾಜರಾದಲ್ಲಿ ಅಂತಿಮ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲಾಗುತ್ತದೆ.

ಕೊಡಗು ಜಿಲ್ಲೆಯಲ್ಲಿ 58,883 ಮತದಾರರಿಗೆ ನೋಟಿಸ್ ಜನರೇಟ್ ಆಗಿದ್ದು,ಇವರೆಲ್ಲರೂ ಚುನಾವಣಾ ಆಯೋಗ ಸೂಚಿಸಿರುವ ಸೂಕ್ತ ದಾಖಲೆಗಳು ನೀಡಿದಲ್ಲಿ ಮಾತ್ರ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಅವಕಾಶ.ಒಂದು ವೇಳೆ ನೋಟಿಸ್ ಪಡೆದ ಮತದಾರರ ವಿಚಾರಣೆಗೆ ಹಾಜರಾಗಿ ಸೂಕ್ತ ದಾಖಲೆಗಳನ್ನು ಸಲ್ಲಿಸಿದರು ಕೂಡ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳ್ಳದಿದ್ದರೆ ಇಆರ್.ಒ‌ ಹಾಗೂ ಎಇಆರ್.ಒ ನಿರ್ಧಾರವನ್ನು ಪ್ರಶ್ನಿಸಿ ಜಿಲ್ಲಾ ಚುನಾವಣಾಧಿಕಾರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ.
ನೋಟಿಸ್ ವಿಲೇವಾರಿ ಪ್ರಕ್ರಿಯೆ ಅಕ್ಟೋಬರ್ 22ರವರೆಗೆ ನಡೆಯಲಿದ್ದು,ಅ.27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ.

ನೋಟಿಸ್ ಬಗ್ಗೆ ಮತದಾರರಿಗೆ ಮಾಹಿತಿಯೇ ಇಲ್ಲ!

ಲಾಜಿಕಲ್ ಡಿಸ್ಕ್ರೆಪೆನ್ಸಿ ಮತ್ತು ನೋ ಮ್ಯಾಪಿಂಗ್ ಅಡಿಯಲ್ಲಿ ಗುರುತಿಸಲಾಗಿರುವ ಮತದಾರರಿಗೆ ನೋಟಿಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ.ಆದರೆ ಮತದಾರರಿಗೆ ನೋಟಿಸ್ ಬಗ್ಗೆ ಮಾಹಿತಿಯೇ ಇಲ್ಲ.
ನೋಟಿಸ್ ಜನರೇಟ್ ಆಗಿರುವ ಮತದಾರರ ಮಾಹಿತಿ ಚುನಾವಣಾ ಆಯೋಗ ಇದುವರೆಗೆ ಪ್ರಕಟಿಸಿಲ್ಲ.
ಲಾಜಿಕಲ್ ಡಿಸ್ಕ್ರಿಪೆನ್ಸಿ ಮತ್ತು ನೋ ಮ್ಯಾಪಿಂಗ್ ಅಡಿಯಲ್ಲಿ ಗುರುತಿಸಲಾಗಿರುವ ಮತದಾರರ ವಿವರ ಬಿಎಲ್ಒ ಆ್ಯಪ್ ನಲ್ಲಿ ಮೊದಲೇ ಮಾಹಿತಿ ಇರಲಿದೆ.ಆದರೆ ಇದರ ಬಗ್ಗೆ ಬಿಎಲ್ಒ ಕೂಡ ಮತದಾರರಿಗೆ ಮಾಹಿತಿ ನೀಡದೆ ಮತದಾರರು ಸಂಕಷ್ಟಕ್ಕೀಡಾಗಿದ್ದಾರೆ.ನೋಟಿಸ್ ಬಗ್ಗೆ ಮಾಹಿತಿಯಿಲ್ಲದೆ,
ಇದು ಯಾವ ಫಾರ್ಮ್! ಮತ್ತೆ ಅರ್ಜಿ ತುಂಬಿ ಕೊಡಬೇಕು!  ಎಂದು ನೋಟಿಸ್ ಪಡೆದ ಮತದಾರರು ಬಿಎಲ್ಒ ಅವರನ್ನು ಪ್ರಶ್ನಿಸಿದ್ದಾರೆ.ಇದರ ಬಗ್ಗೆ ಮತದಾರರಿಗೆ ಮಾಹಿತಿ ನೀಡಬೇಕಿದ್ದ ರಾಜಕೀಯ ಪಕ್ಷಗಳ ಏಜೆಂಟ್ ರುಗಳ ಕೂಡ ಮೌನಕ್ಕೆ ಜಾರಿದ್ದಾರೆ.ಎಸ್ಐಆರ್ ಮೊದಲ ಹಂತದ ಆರಂಭದಲ್ಲಿ ಫಾರ್ಮ್ ಭರ್ತಿ ಮಾಡಿಕೊಡಲು ಆಸಕ್ತಿ ನಂತರ ದಿನಗಳಲ್ಲಿ ರಾಜಕೀಯ ಪಕ್ಷಗಳ ಏಜೆಂಟ್ ರುಗಳ ಮೌನಕ್ಕೆ ಶರಣಾಗಿದ್ದಾರೆ.ನೋಟೀಸ್ ಪಡೆದ ಮತದಾರರು ದಿಕ್ಕು ದೋಚದೆ ದಾಖಲೆಗಳನ್ನು ಒದಗಿಸಲು ಪರದಾಡುವಂತಾಗಿದೆ.ನೋಟಿಸ್ ಪಡೆದ ಅನಕ್ಷರಸ್ಥ ಮತದಾರರು ಮತ್ತು ಚುನಾವಣಾ ಆಯೋಗ ಸೂಚಿಸಿರುವ ದಾಖಲೆಗಳಿಲ್ಲದ ಮತದಾರರು ಸಂಕಷ್ಟಕ್ಕೆ ಸಿಲುಕುವುದು ಗ್ಯಾರಂಟಿ.