Kodagu

SKSSF ಜಿಸಿಸಿ ಕೊಡಗು ವತಿಯಿಂದ ಪ್ರವಾದಿ ಪ್ರೀತಿಯ ಸಂದೇಶದೊಂದಿಗೆ ‘ರಹ್ಮತ್‌ನ ಪ್ರತಿಧ್ವನಿ’ ಮೀಲಾದ್ ಕಾರ್ಯಕ್ರಮ ಯಶಸ್ವಿ

admincoorgdaily

SKSSF ಜಿಸಿಸಿ ಕೊಡಗು ವತಿಯಿಂದ  ಪ್ರವಾದಿ ಪ್ರೀತಿಯ ಸಂದೇಶದೊಂದಿಗೆ ‘ರಹ್ಮತ್‌ನ ಪ್ರತಿಧ್ವನಿ’ ಮೀಲಾದ್ ಕಾರ್ಯಕ್ರಮ ಯಶಸ್ವಿ
ದುಬೈ: ಪ್ರವಾದಿ ಮುಹಮ್ಮದ್ ಅವರ ಪವಿತ್ರ ಜೀವನ, ಸಂದೇಶ ಮತ್ತು ಆದರ್ಶಗಳನ್ನು ಸ್ಮರಿಸುವ “ರಹ್ಮತ್‌ನ ಪ್ರತಿಧ್ವನಿ ಬದುಕಿನ ಬೆಳಕಿನ ಹಾದಿಯಲ್ಲಿ…” ಎಂಬ ಧ್ಯೇಯವಾಕ್ಯದೊಂದಿಗೆ SKSSF GCC ಕೊಡಗು ವತಿಯಿಂದ ಆಯೋಜಿಸಲಾಗಿದ್ದ ಮೀಲಾದ್ ಕಾರ್ಯಕ್ರಮವು ಭಕ್ತಿಭಾವ ಹಾಗೂ ಆತ್ಮೀಯ ವಾತಾವರಣದಲ್ಲಿ ಯಶಸ್ವಿಯಾಗಿ ನಡೆಯಿತು.

ದುಬೈನ ತಮ್ರ್ ಇನ್ ಹೋಟೆಲ್, ದೇರಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುಎಇಯ ವಿವಿಧ ಭಾಗಗಳಿಂದ SKSSF GCC ಕೊಡಗು ಸದಸ್ಯರು, ಕಾರ್ಯಕರ್ತರು ಹಾಗೂ ಮೀಲಾದ್ ಪ್ರೇಮಿಗಳು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು SKSSF ಕರ್ನಾಟಕ ಯುಎಇ ಅಧ್ಯಕ್ಷ ಸಯ್ಯಿದ್ ಅಶ್ಕರ್ ಅಲಿ ತಂಙಳ್ ಉದ್ಘಾಟಿಸಿದರು. ಶಾರ್ಜಾ SKSSF ಅಧ್ಯಕ್ಷ ಶಂಸುದ್ದೀನ್ ಸುರಲ್ಪಾಡಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು SKSSF GCC ಅಧ್ಯಕ್ಷ ಹುಸೈನ್ ಫೈಝ್ ಬಜೆಗುಂಡಿ ವಹಿಸಿದ್ದರು.

ಮೌಲಿದ್ ಕಾರ್ಯಕ್ರಮಕ್ಕೆ ಯಾಸರ್ ಅರಫಾತ್ ಉಸ್ತಾದ್ ನೇತೃತ್ವ ನೀಡಿದರು. ಸ್ವಲಾತ್, ಮೌಲಿದ್ ಪಠಣ ಹಾಗೂ ಪ್ರವಾದಿ ಅವರ ಮೇಲಿನ ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸುವ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.

SKSSF ಮುಖಂಡರಾದ ಶರೀಫ್ ಕೊಡಿನೇರ್, ಅಶ್ರಫ್ ಅಝ್ಹರಿ ಕೊಂಗೇರಿ, SKSSF GCC ಮುಖಂಡರು ಹಾಗೂ ಸದಸ್ಯರಾದ ಸಫ್ವಾನ್ ಚಾಮೆ, ಲತೀಫ್ ಕಡಂಗ, ನಿಝಾಮ್ ಎಡಪಾಲಂ, ನವಾಝ್ ಎಡಪಾಲಂ, ಸಿರಾಜ್ ಎಡಪಾಲಂ, ಶಫೀಕ್ ಕಡಂಗ, ನಿಶಾಬ್ ನೆಲ್ಲಿಹುದಿಕೇರಿ ಹಾಗೂ ನೌಶೀರ್ ಎಡಪಾಲಂ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಯಹ್ಯಾ ಕೊಡ್ಲಿಪೇಟೆ ನಿರ್ವಹಿಸಿದರು. SKSSF GCC ಪ್ರಧಾನ ಕಾರ್ಯದರ್ಶಿ ಬಶೀರ್ ಚೇರಂಬಾಣೆ ಸ್ವಾಗತ ಭಾಷಣ ಮಾಡಿದರು. SKSSF GCC ಜಂಟಿ ಕಾರ್ಯದರ್ಶಿ ರಹೀಂ ಕುಶಾಲನಗರ ವಂದನಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಪ್ರವಾದಿ ಅವರ ಕರುಣೆ, ಮಾನವೀಯತೆ, ಸಹೋದರತ್ವ, ಸೌಹಾರ್ದತೆ ಹಾಗೂ ಉತ್ತಮ ಚಾರಿತ್ರ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಲಾಯಿತು. ಪ್ರವಾದಿ  ಅವರ ಜೀವನವು ಮಾನವಕುಲಕ್ಕೆ ಶಾಶ್ವತ ಮಾರ್ಗದರ್ಶನ ನೀಡುವ ಬೆಳಕಾಗಿದ್ದು, ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಪ್ರವಾದಿ ಪ್ರೀತಿ ಎಂಬ ಸಂದೇಶವನ್ನು ನೀಡಲಾಯಿತು.

ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲಾ ಅತಿಥಿಗಳು, ಉಸ್ತಾದರು, ಸದಸ್ಯರು, ಕಾರ್ಯಕರ್ತರು, ಮಾಧ್ಯಮ ತಂಡ ಹಾಗೂ ಹಿತೈಷಿಗಳಿಗೆ SKSSF GCC ಕೊಡಗು ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.