SKSSF ಕೊಡಗು ಜಿಲ್ಲಾ ನೂತನ ಸಮಿತಿ ರಚನೆ:ಅಧ್ಯಕ್ಷರಾಗಿ ರಫೀಕ್ ಬಾಖವಿ ಆಯ್ಕೆ
admincoorgdaily

ಸಿದ್ದಾಪುರ: SKSSF ಕೊಡಗು ಜಿಲ್ಲಾ ಸಮಿತಿಯ 2026-29ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯು ಸಿದ್ದಾಪುರದ ವರಕ್ಕಲ್ ಸ್ಮಾರಕ ಸೌಧದಲ್ಲಿ ಜಿಲ್ಲಾ ಅಧ್ಯಕ್ಷ ಶುಹೈಬ್ ಫೈಝಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಮಸ್ತ ಕೇಂದ್ರ ಮುಷಾವರ ಸದಸ್ಯ ಎಂ.ಎಂ.ಅಬ್ದುಲ್ಲಾ ಫೈಝಿ ಉಸ್ತಾದ್ ಅವರು SKSSF ನ ಪ್ರಾಧಾನ್ಯತೆ ಕುರಿತು ಮಾತನಾಡಿ, ಎಲ್ಲಾ ಸಮಸ್ತ ಕಾರ್ಯಕರ್ತರು ಅಹ್ಲುಸ್ಸುನ್ನತ್ ವಲ್ ಜಮಾಅತ್ ನ ಆದರ್ಶದಡಿಯಲ್ಲಿ ಜೀವಿಸಬೇಕು ಹಾಗೂ ಸುನ್ನಿ ಆದರ್ಶದ ವಿರುದ್ಧ ನಡೆಯುವವರ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಕರೆ ನೀಡಿ ಸಭೆಯನ್ನು ಉದ್ಘಾಟಿಸಿದರು.
SKSSF ಸಮುದಾಯಕ್ಕೆ ನೀಡಿದ ಕೊಡುಗೆ ಕುರಿತು ಜಿಲ್ಲಾ ಅಧ್ಯಕ್ಷ ಶುಹೈಬ್ ಫೈಝಿ ಅವರು ಅಧ್ಯಕ್ಷ ಭಾಷಣ ಮಾಡಿದರು. ಸಮಸ್ತ ವಿದ್ಯಾಭ್ಯಾಸ ಸಂಸ್ಥೆಗಳ ಉಪಯೋಗವನ್ನು ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಸದುಪಯೋಗಪಡಿಸಿಕೊಳ್ಳಬೇಕೆಂದು ರಾಜ್ಯ ಕಾರ್ಯದರ್ಶಿ ಅನೀಸ್ ಕೌಸರಿ ಮನವಿ ಮಾಡಿದರು.
ಸಭೆಯಲ್ಲಿ ಆರಿಫ್ ಫೈಝಿ, ಇಕ್ಬಾಲ್ ಮೌಲವಿ, ಸಿದ್ದೀಕ್ ಹಾಜಿ, ಹಕೀಮ್ ಹಿಶಾಮಿ ಮತ್ತಿತರರು ಉಪಸ್ಥಿತರಿದ್ದರು. SKSSF ಕೇಂದ್ರ ಸಮಿತಿ ಸದಸ್ಯ ಫಾರೂಕ್ ಫೈಝಿ ಅವರು ನೂತನ ಸಮಿತಿ ಆಯ್ಕೆಗೆ ನೇತೃತ್ವ ನೀಡಿದರು.
ನೂತನ ಪದಾಧಿಕಾರಿಗಳ ವಿವರ:
ಅಧ್ಯಕ್ಷರು - ರಫೀಕ್ ಬಾಖವಿ ಕೊಡಗರಹಳ್ಳಿ, ಪ್ರಧಾನ ಕಾರ್ಯದರ್ಶಿ - ಅಬ್ದುಲ್ ಕರೀಂ ಮುಸ್ಲಿಯಾರ್, ಖಜಾಂಚಿ - ಶಮೀರ್ ನೆಲ್ಲಿಹುದಿಕೇರಿ, ವರ್ಕಿಂಗ್ ಸೆಕ್ರೆಟರಿ - ಅಬ್ದುಲ್ ಹಕೀಮ್ ಹಿಶಾಮಿ ವಿರಾಜಪೇಟೆ.
ಉಪಾಧ್ಯಕ್ಷರು:ಹನೀಫ್ ಫೈಝಿ ಎಡಪಾಲ, ಜಂಶೀರ್ (ಇಣ್ಣಿ) ನೆಲ್ಲಿಹುದಿಕೇರಿ, ಆಸಿಫ್ ಅಝ್ಹರಿ, ರಶೀದ್ ದಾರಿಮಿ ಚೋಕಂಡಳ್ಳಿ, ಹಮೀದ್ ಕೆ.ಎ ಕುಶಾಲನಗರ.
ಜೊತೆ ಕಾರ್ಯದರ್ಶಿಗಳು: ಮನ್ಸೂರ್ ಅಲಿ ಹಸನಿ, ಅಯಾಸ್ ಸಿದ್ದಾಪುರ, ಹನೀಫ್ ಫೈಝಿ ಗುಂಡಿಗೆರೆ.
ಸೆಕ್ರೆಟರಿಯೇಟ್ ಸದಸ್ಯರು: ಶುಹೈಬ್ ಫೈಝಿ ಕೊಳಕೇರಿ, ಅಬೂಬಕರ್ ಸಿದ್ದೀಕ್ ಹಾಜಿ.
ಎಕ್ಸಿಕ್ಯೂಟಿವ್ ಸದಸ್ಯರು: ಜಂಶೀರ್ ವಾಫಿ, ಅಶ್ರಫ್ ಫೈಝಿ ಗುಂಡಿಗೆರೆ, ಅಹ್ಮದ್ ಮುಸ್ಲಿಯಾರ್, ಶರಫು ಸಿದ್ದಾಪುರ, ಶೌಕತ್ ಒಂಟಿಅಂಗಡಿ, ನೌಶಾದ್ ದಾರಿಮಿ, ಇಸ್ಮಾಯಿಲ್ ನೆಲ್ಲಿಹುದಿಕೇರಿ, ಸಹದ್ ಫೈಝಿ, ಸಲಾಂ ಅರಕ್ಕಾಡ್, ಜುನೈದ್ ಕಡಂಗ, ಯಹ್ಯಾ ಕೊಡ್ಲಿಪೇಟೆ, ಹುಸೈನ್ ಫೈಝಿ ಬಜಗುಂಡಿ.
ಆರ್ಗನೈಸಿಂಗ್ ಸೆಕ್ರೆಟರಿಗಳು:
ಶಾಜಹಾನ್, ಶರಫುದ್ದೀನ್ ವಿರಾಜಪೇಟೆ, ಶರೀಫ್ ಎಂ.ಐ.
ಜಿಲ್ಲಾ ಕಾರ್ಯದರ್ಶಿ ರಫೀಕ್ ಬಾಖವಿ ಸ್ವಾಗತಿಸಿ, ನೂತನ ಕಾರ್ಯದರ್ಶಿ ಕರೀಂ ಮುಸ್ಲಿಯಾರ್ ವಂದಿಸಿದರು.