ಎಸ್.ಐ.ಆರ್ ವಿರುದ್ಧ ಕೊಡಗಿನಲ್ಲಿ ನಾಳೆ ಎಸ್.ಕೆ.ಎಸ್.ಎಸ್.ಎಫ್ ಬೃಹತ್ ಪ್ರತಿಭಟನೆ
admincoorgdaily

ಮಡಿಕೇರಿ;ಎಸ್.ಐ.ಆರ್ ವಿರುದ್ಧ ಎಸ್.ಕೆ.ಎಸ್.ಎಸ್.ಎಫ್ ಕರ್ನಾಟಕ ರಾಜ್ಯ ಸಮಿತಿಯ ನಿರ್ದೇಶನದ ಮೇರೆಗೆ ಕೊಡಗಿನ ಎಸ್.ಕೆ.ಎಸ್.ಎಸ್.ಎಫ್ ವಲಯಗಳಲ್ಲಿ ನವೆಂಬರ್ 13 ಶುಕ್ರವಾರ ಬೃಹತ್ ಪ್ರತಿಭಟನೆ ನಡೆಯಲಿದೆ,
ಅದನ್ನು ಯಶಸ್ವಿಗೊಳಿಸಲು ಎಸ್.ಕೆ.ಎಸ್.ಎಸ್.ಎಫ್ ರಾಜ್ಯ ಸಮಿತಿ ಉಪಾಧ್ಯಕ್ಷ ಸಅದ್ ಫೈಝಿ ಚೋಕಂಡಳ್ಳಿ ಕರೆ ನೀಡಿದ್ದಾರೆ.
ವಿರಾಜಪೇಟೆಶಾಫಿ ಜುಮಾ ಮಸೀದಿ ಹತ್ತಿರ ಸಂಜೆ 4 ಗಂಟೆಗೆ - ಎಸ್.ಕೆ.ಎಸ್.ಎಸ್.ಎಫ್ ಕೇಂದ್ರ ಸಮಿತಿ ಸದಸ್ಯ ಶುಹೈಬ್ ಫೈಝಿ ವಿಷಯ ಮಂಡನೆ ಮಾಡಲಿದ್ದಾರೆ.
ನೆಲ್ಲಿಹುದಿಕೇರಿ ಬಸ್ ನಿಲ್ದಾಣ ಹತ್ತಿರ ರಾಜ್ಯ ಸಮಿತಿ ಖಜಾಂಜಿ ತಮ್ಲೀಕ್ ದಾರಿಮಿ ವಿಷಯ ಮಂಡನೆ ಮಾಡಲಿದ್ದಾರೆ.
ಪ್ರತಿಭಟನೆಯಲ್ಲಿ ಎಸ್.ಕೆ.ಎಸ್.ಎಸ್.ಎಫ್ ಜಿಲ್ಲಾ ಸಮಿತಿ ಅಧ್ಯಕ್ಷ ರಫೀಕ್ ಬಾಖವಿ, ಕಾರ್ಯದರ್ಶಿ ಅಬ್ದುಲ್ ಕರೀಂ ಮುಸ್ಲಿಯಾರ್, ನಿರ್ವಾಹಕ ಕಾರ್ಯದರ್ಶಿ ಹಕೀಮ್ ಹಿಶಾಮಿ, ವಲಯ ಅಧ್ಯಕ್ಷರಾದ ಅಶ್ರಫ್ ಫೈಝಿ, ಶರ್ಫುದೀನ್ ವಿರಾಜಪೇಟೆ, ನೌಶಾದ್ ದಾರಿಮಿ, ಮನ್ಸೂರ್ ಹಸನಿ, ಶರ್ಫದೀನ್ ಸಿದ್ದಾಪುರ ಮತ್ತಿತರ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಸಹದ್ ಫೈಝಿ ತಿಳಿಸಿದ್ದಾರೆ.