ಜಿಲ್ಲಾ ಮಟ್ಟದ ಮ್ಯಾರಥಾನ್ ಗೆ ಎಸ್‌ಎಂಎಸ್ ಪಿಯು ಕಾಲೇಜು ವಿದ್ಯಾರ್ಥಿಗಳ ಆಯ್ಕೆ
admincoorgdaily

ವಿರಾಜಪೇಟೆ: ವಿರಾಜಪೇಟೆ ತಾಲ್ಲೂಕು ಪಿಯು ಕಾಲೇಜುಗಳ ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ಅರಮೇರಿ-ವಿರಾಜಪೇಟೆಯ ಎಸ್‌ಎಂಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕಿಯರ 3 ಕಿ.ಮೀ ವಿಭಾಗದಲ್ಲಿ
ಎಸ್‌ಎಂಎಸ್ ಪಿಯು ಕಾಲೇಜಿನ ವಿದ್ಯಾರ್ಥಿನಿಯರಾದ ಬೃಂದಾ ಹಾಗೂ ಗಂಗೋತ್ರಿ ಎಂ. ಅವರು ಮೊದಲ ಆರು ಸ್ಥಾನಗಳೊಳಗೆ ಸ್ಥಾನ ಪಡೆದು, ಕುಶಾಲನಗರದ ಕೂಡಿಗೆಯಲ್ಲಿ ನಡೆಯಲಿರುವ ಕೊಡಗು ಜಿಲ್ಲಾ ಮಟ್ಟದ ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ವಿರಾಜಪೇಟೆ ತಾಲ್ಲೂಕನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಬಾಲಕರ 5 ಕಿ.ಮೀ ವಿಭಾಗದಲ್ಲಿ
ಎಸ್‌ಎಂಎಸ್ ಪಿಯು ಕಾಲೇಜಿನ ಉಮರ್ ಸುಲ್ತಾನ್* ಅವರು ಮೊದಲ ಆರು ಸ್ಥಾನಗಳೊಳಗೆ ಸ್ಥಾನ ಪಡೆದು, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿರಾಜಪೇಟೆ ತಾಲ್ಲೂಕನ್ನು ಪ್ರತಿನಿಧಿಸಲು ಅರ್ಹತೆ ಪಡೆದಿದ್ದಾರೆ.