Kodagu

ಮೂರ್ನಾಡು ಗಣೇಶೋತ್ಸವದ ಅಂಗವಾಗಿ ಗಜೇಂದ್ರ ಯುವಶಕ್ತಿ ಸಂಘದಿಂದ ಸಮಾಜಮುಖಿ ಕಾರ್ಯಕ್ರಮ

admincoorgdaily

ಮೂರ್ನಾಡು ಗಣೇಶೋತ್ಸವದ ಅಂಗವಾಗಿ ಗಜೇಂದ್ರ ಯುವಶಕ್ತಿ ಸಂಘದಿಂದ ಸಮಾಜಮುಖಿ ಕಾರ್ಯಕ್ರಮ
ವರದಿ :ಝಕರಿಯ ನಾಪೋಕ್ಲು 

ನಾಪೋಕ್ಲು:ಮೂರ್ನಾಡುವಿನ ಗಜೇಂದ್ರ ಯುವಶಕ್ತಿ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶೋತ್ಸವ ಮೂರ್ತಿ ವಿಸರ್ಜನಾ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.      

ಉತ್ಸವದ ಅಂಗವಾಗಿ ಆಯೋಜಿಸರಾದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ, ಸಮಾಜಸೇವೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದವರನ್ನು ಗೌರವಿಸುವುದು ಸೇರಿದಂತೆ ವಿಕಲಚೇತನ ಕುಟುಂಬಕ್ಕೆ ಗೃಹಬಳಕೆ ವಸ್ತುಗಳ ಕಿಟ್ ವಿತರಿಸುವ ಕಾರ್ಯಕ್ರಮ ನಡೆಯಿತು.

ನಾಪೋಕ್ಲು ರಸ್ತೆಯಲ್ಲಿರುವ ಹನುಮಾನ್ ಟ್ರೇಡರ್ಸ್ ಸಭಾಂಗಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗೆ ಏಳು ದಿನಗಳ ಕಾಲ ಪೂಜೆ ಸಲ್ಲಿಸಲಾಯಿತು.            

ಸಭಾ ಕಾರ್ಯಕ್ರಮದಲ್ಲಿ ಮೂರ್ನಾಡುವಿನ ನಕ್ಷತ್ರ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಉಮೇಶ್ ಬಂಗೇರ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ
ಗಜೇಂದ್ರ ಯುವಶಕ್ತಿ ಸಂಘವು ಗಣೇಶೋತ್ಸವಕ್ಕೆ ಮಾತ್ರ ಸೀಮಿತವಾಗದೆ ಕಳೆದ ನಾಲ್ಕು ವರ್ಷಗಳಿಂದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಇಂತಹ ಸಮಾಜಮುಖಿ ಕಾರ್ಯಗಳು ಯುವಪೀಳಿಗೆಯಿಂದ ಮುಂದುವರಿಯಬೇಕೆಂದು ಕಾರ್ಯಕ್ರಮಕ್ಕೆ ಶುಭಕೋರಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರು ಹಾಗೂ ದಾನಿಗಳಾದ ಬಾಚ್ಚೇಟಿರ ಕಮಲು ಮುದ್ದಯ್ಯ, ಗಣೇಶ ಮೂರ್ತಿ ದಾನಿಗಳಾದ ಕಿಗ್ಗಾಲು ಗ್ರಾಮದ ಡಿ.ಟಿ. ಲೀಲಾ ಹಾಗೂ ಉದ್ಯಮಿ ಕಿರಣ್ ರಾಮಚಂದ್ರ ಉಪಸ್ಥಿತರಿದ್ದರು.
ಕಳೆದ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಮೂರ್ನಾಡು ಸರ್ಕಾರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ನಫೀಸತುಲ್ ಮಿಶ್ರಿಯ, ಟಿ.ಎ. ಲಲಿತ, ಎ.ಅತೀರಾ ಹಾಗೂ ಮೂರ್ನಾಡು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಹೆಚ್.ಜಿ. ಜನೀಷಾ ಬೋಜಮ್ಮ, ಬಿ.ಹೆಚ್. ಬೃಂದಾ ಮತ್ತು ಆರ್. ಪುಣ್ಯ ರೆಡ್ಡಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಪ್ರೋತ್ಸಾಹಧನ ವಿತರಿಸಲಾಯಿತು.
ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಷ್ಟ್ರೀಯ ಹಾಕಿ ಕ್ರೀಡಾಪಟು ಮೂರ್ನಾಡಿನ ಎಂ. ಹರ್ಷತ್ ಕುಮಾರ್ ಹಾಗೂ ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಬಲಮುರಿ ಗ್ರಾಮದ ಮುಳುಗು ತಜ್ಞ ಎಂ.ಆರ್. ಬಿಪಿನ್ ಅವರನ್ನು ಶಾಲು ಹೊದಿಸಿ, ಫಲತಾಂಬೂಲ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ದಿವಂಗತ ಜೆ.ಎ. ಮಹೇಶ್ ಹಾಗೂ ದಿವಂಗತ ಬೇಬಿ ಅವರ ಪುತ್ರ ಜಿ.ಎಂ. ಜ್ಞಾನೇಶ್ ಅವರ ಕುಟುಂಬಕ್ಕೆ ಸಂಘದ ವತಿಯಿಂದ ವಿಕಲಚೇತನ ಗೃಹಬಳಕೆ ವಸ್ತುಗಳ ಕಿಟ್ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಜೇಂದ್ರ ಯುವಕ ಸಂಘದ ಅಧ್ಯಕ್ಷ ಸಿ.ಪಿ. ಸುಬ್ರಮಣಿ ವಹಿಸಿದ್ದರು.ನವ ಮಾನ್ಯ ಪ್ರಾರ್ಥಿಸಿ, ಶಿಕ್ಷಕ ರೋಶನ್ ಸ್ವಾಗತಿಸಿ ವಂದಿಸಿದರು.