Kodagu

ಮರಗೋಡು ನಲ್ಲಿ ರೈತರಿಗೆ ಮಣ್ಣಿನ ಪರೀಕ್ಷೆ, ಕೀಟ ರೋಗ ನಿರ್ವಹಣೆ ತರಬೇತಿ

admincoorgdaily

ಮರಗೋಡು ನಲ್ಲಿ ರೈತರಿಗೆ ಮಣ್ಣಿನ ಪರೀಕ್ಷೆ, ಕೀಟ ರೋಗ ನಿರ್ವಹಣೆ ತರಬೇತಿ
ಸಿದ್ದಾಪುರ:
 ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಮಂಡ್ಯದ ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆಯ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಸಂಪರ್ಕ ಕಾರ್ಯಕ್ರಮದ ಅಂಗವಾಗಿ ಮಾರಗೋಡು ನ ವಿವೇಕಾನಂದ ಯುವಕರ ಸಂಘದ ಸಭಾಂಗಣದಲ್ಲಿ ರೈತರಿಗೆ ಮಣ್ಣಿನ ಆರೋಗ್ಯ ಹಾಗೂ ಬೆಳೆ ನಿರ್ವಹಣೆ ಕುರಿತು ತರಬೇತಿ ಶುಕ್ರವಾರ ನೀಡಲಾಯಿತು.

ಡಾ. ರಮ್ಯಾ ಅವರು ಮಣ್ಣಿನ ಪ್ರಮುಖ ಪೋಷಕಾಂಶಗಳ ಮಹತ್ವ, ಮಣ್ಣಿನ ಪರೀಕ್ಷೆಯ ಅಗತ್ಯತೆ ಹಾಗೂ ವೈಜ್ಞಾನಿಕವಾಗಿ ಮಣ್ಣಿನ ಮಾದರಿ ಸಂಗ್ರಹಿಸುವ ವಿಧಾನ ಕುರಿತು ಮಾಹಿತಿ ನೀಡಿದರು
 ಮಡಿಕೇರಿ ಘಟಕದ ವಿಸ್ತರಣಾಧಿಕಾರಿ ಡಾ. ಲತಾ ಅವರು ಬೆಳೆಗಳಲ್ಲಿನ ಕೀಟ–ರೋಗಗಳ ಗುರುತಿಸುವಿಕೆ, ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಸಮಗ್ರ ಕೀಟರೋಗ ನಿರ್ವಹಣೆ ಕುರಿತು ರೈತರಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ರೈತರು ಸಕ್ರಿಯವಾಗಿ ಪಾಲ್ಗೊಂಡು ಕೃಷಿ ಸಂಬಂಧಿತ ಸಮಸ್ಯೆಗಳ ಕುರಿತು ತಜ್ಞರಿಂದ ಸಲಹೆ ಹಾಗೂ ಪರಿಹಾರಗಳನ್ನು ಪಡೆದುಕೊಂಡರು.