Kodagu

ಸೋಮವಾರಪೇಟೆ: 121ನೇ ಕೂರ್ಗ್ ಓಪನ್ ಗಾಲ್ಫ್ ಚಾಂಪಿಯನ್‌ಶಿಪ್ - ಎಚ್.ಎಲ್.ಸಂಜಯ್ ಚಾಂಪಿಯನ್

admincoorgdaily

ಸೋಮವಾರಪೇಟೆ: 121ನೇ ಕೂರ್ಗ್ ಓಪನ್ ಗಾಲ್ಫ್ ಚಾಂಪಿಯನ್‌ಶಿಪ್ - ಎಚ್.ಎಲ್.ಸಂಜಯ್ ಚಾಂಪಿಯನ್
ಸೋಮವಾರಪೇಟೆ: ಬೇಳೂರು ಕ್ಲಬ್ ವತಿಯಿಂದ ಬೇಳೂರು ಗಾಲ್ಫ್ ಮೈದಾನದಲ್ಲಿ ಆಯೋಜಿಸಿದ್ದ 121ನೇ ವರ್ಷದ ಕೂರ್ಗ್ ಓಪನ್-ಹ್ಯಾಂಡಿಕ್ಯಾಪ್ ಗಾಲ್ಫ್ ಚಾಂಪಿಯನ್‌ಶಿಪ್ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಎರಡು ದಿನಗಳ ಕಾಲ ನಡೆದ ಈ ಟೂರ್ನಿಯಲ್ಲಿ 84 ಸ್ಪರ್ಧಾಳುಗಳು ಭಾಗವಹಿಸಿದ್ದರು.

ಓಪನ್ ವಿಭಾಗದಲ್ಲಿ ಮಡಿಕೇರಿಯ ಎಚ್.ಎಲ್.ಸಂಜಯ್ ಪ್ರಥಮ ಸ್ಥಾನ ಪಡೆದರೆ, ಚಿಕ್ಕಮಗಳೂರಿನ ಶ್ರೀನಿವಾಸ್ ಆರ್ ದ್ವಿತೀಯ ಸ್ಥಾನ ಪಡೆದರು. ಹ್ಯಾಂಡಿಕ್ಯಾಪ್ ವಿಭಾಗದಲ್ಲಿ ಸೋಮವಾರಪೇಟೆಯ ಎಂ.ಎ.ಶ್ರೀಕಾಂತ್ ಪ್ರಥಮ, ಮಡಿಕೇರಿಯ ದೈವಿಕ್ ಸಂಜಯ್ ದ್ವಿತೀಯ.

ಇತರೆ ವಿಭಾಗಗಳ ಫಲಿತಾಂಶ:
- ಸ್ಟೇಬಲ್ ಫೋರ್ಡ್ ಓಪನ್: ವಿರಾಜಪೇಟೆ ಅಪ್ಪಣ್ಣ - ಪ್ರಥಮ, ಎನ್.ಎಸ್.ಅನಿಲ್ - ದ್ವಿತೀಯ
- ಸ್ಟೇಬಲ್ ಫೋರ್ಡ್ ಹ್ಯಾಂಡಿಕ್ಯಾಪ್: ಮೈಸೂರಿನ ನಂದನ್ ಕೆ - ಪ್ರಥಮ, ಶಶಿಕುಮಾರ್ - ದ್ವಿತೀಯ
- ಡಬಲ್ಸ್: ಶ್ರೀನಿವಾಸ್ ಆರ್ & ಸಿ.ಟಿ.ಮಂದಣ್ಣ ಜೋಡಿ - ಪ್ರಥಮ
- ಹಿರಿಯರ ವಿಭಾಗ: ಸಂಜಯ್ ಸಿಕ್ಕಾ - ಪ್ರಥಮ
- ಮಹಿಳಾ ವಿಭಾಗ: ಮಡಿಕೇರಿಯ ಮೃಣಾಲಿನಿ - ಪ್ರಥಮ, ಬೆಂಗಳೂರಿನ ಅನುರಾಧಾ - ದ್ವಿತೀಯ

ವಿಜೇತರಿಗೆ ಬೇಳೂರು ಕ್ಲಬ್ ಅಧ್ಯಕ್ಷ ಆನಂದ್ ಬಸಪ್ಪ, ಕಾರ್ಯದರ್ಶಿ ಪವನ್ ಮುತ್ತಪ್ಪ, ಮರ್ಕರ ಡೌನ್ಸ್ ಗಾಲ್ಫ್ ಕ್ಲಬ್ ಅಧ್ಯಕ್ಷ ಮುತ್ತು ಕಾರ್ಯಪ್ಪ ಸೇರಿದಂತೆ ಕ್ಲಬ್ ಪದಾಧಿಕಾರಿಗಳು ಬಹುಮಾನ ವಿತರಿಸಿದರು.

ಪ್ರತಿ ವರ್ಷ ಬೇಳೂರು ಬಾಣೆಯಲ್ಲಿ ಗಾಲ್ಫ್ ಕ್ರೀಡಾಕೂಟ ಆಯೋಜಿಸಿ ಕ್ರೀಡಾಸಕ್ತರಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಅಧ್ಯಕ್ಷ ಆನಂದ್ ಬಸಪ್ಪ ತಿಳಿಸಿದರು.