Kodagu

ಸೋಮವಾರಪೇಟೆ: ಸೋಮೇಶ್ವರ ದೇವಾಲಯದಲ್ಲಿ 21ನೇ ವರ್ಷದ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ

admincoorgdaily

ಸೋಮವಾರಪೇಟೆ: ಸೋಮೇಶ್ವರ ದೇವಾಲಯದಲ್ಲಿ 21ನೇ ವರ್ಷದ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ
ಸೋಮವಾರಪೇಟೆ:ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ 21ನೆ ವರ್ಷದ ಶರನ್ನವ ರಾತ್ರಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು.

 ಸೋಮೇಶ್ವರ ದೇವಾಲಯದ ಶಕ್ತಿ ಪಾರ್ವತಿ ಸನ್ನಿಧಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶ್ರದ್ಧಾಭಕ್ತಿಯಿಂದ ಶರನ್ನವ ರಾತ್ರಿ ಉತ್ಸವ ಆರಂಭಗೊಂಡಿತು. ಇಲ್ಲಿನ ಆನೆಕೆರೆಯಲ್ಲಿ ಗಂಗಾಪೂಜೆಯೊಂದಿಗೆ ಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಾಲಯಕ್ಕೆ ತರಲಾಯಿತು.

ದೇವಾಲಯದ ಅರ್ಚಕ ಚಿತ್ರಕುಮಾರ ಭಟ್ ಪುರೋಹಿತ್ವದಲ್ಲಿ ಧಾರ್ಮಿಕ ವಿಧಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು.
ಸಂಜೆ ಶಕ್ತಿಪಾರ್ವತಿ ದೇವಿಗೆ ಹೂವಿನ ಅಲಂಕಾರದೊಂದಿಗೆ. ಲಲಿತಸಹಸ್ರನಾಮ,ಕುಂಕುಮಾರ್ಚನೆ,ರಂಗಪೂಜೆ, ಆವರಿನೋಟ್ಸವ ಹಾಗೂ ಉತ್ಯಾಲೋತ್ಸವ ದ ನಂತರ ಮಹಾಮಂಗಳಾರತಿ,ಪ್ರಸಾದ ವಿನಿಯೋಗ ನೆರವೇರಿತು.