ಸೋಮವಾರಪೇಟೆ:ಗುಂಡು ಹಾರಿಸಿಕೊಂಡು ದಂಪತಿ ಆತ್ಮಹತ್ಯೆ
admincoorgdaily

ಸೋಮವಾರಪೇಟೆ:ಸೋಮವಾರಪೇಟೆ ತಾಲೂಕಿನ ಕುಂಬಾರಗಡಿಗೆ ಗ್ರಾಮದಲ್ಲಿ ಗುಂಡು ಹಾರಿಸಿಕೊಂಡು ಗಂಡ ಹೆಂಡತಿ ಇಬ್ಬರು ದುರ್ಮರಣಕ್ಕೀಡಾದ ಘಟನೆ ನಡೆದಿದೆ.
ಕನ್ನಿಕಂಡ ಕುಟುಂಬದ ಸುಬ್ಬಯ್ಯ (74) ಮತ್ತು ಭೋಜಮ್ಮ (72) ಮೃತ ದಂಪತಿ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಸ್ಥಳಕ್ಕೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವಿನ ನಿಖರ ಕಾರಣ ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.