ಸೋಮವಾರಪೇಟೆ: ದಾಖಲೆಯಲ್ಲಿ ಮಾತ್ರ ವೈದ್ಯರು, ರೋಗಿಗಳ ಪಾಲಿಗಿಲ್ಲ ತಜ್ಞರು; ನರಕಕೂಪವಾಗಿರುವ ತಾಲೂಕು ಆಸ್ಪತ್ರೆ
admincoorgdaily

ಸೋಮವಾರಪೇಟೆ:- ದಾಖಲೆಯಲಷ್ಟೇ ವೈದ್ಯರು,ರೋಗಿಗಳ ಪಾಲಿಗಿಲ್ಲದ ತಜ್ಞರು,ನರಕದ ಕೋಪವಾಗಿರುವ ತಾಲೂಕು ಆಸ್ಪತ್ರೆ.
ಪಟ್ಟಣದಲ್ಲಿರುವ ತಾಲೂಕು ಆಸ್ಪತ್ರೆ ರೋಗಿಗಳಪಾಲಿಗೆ ನರಕದಕೋಪವಾಗಿದ್ದು ಜನಸಾಮಾನ್ಯರು ಪರದಾಡುವಂತಾಗಿದೆ.
ಸುತ್ತಮುತ್ತಲ ನೂರಾರು ರೋಗಿಗಳು ದಿನನಿತ್ಯ ಆಸ್ಪತ್ರೆಗೆ ಬರುತ್ತಿದ್ದು ಇಲ್ಲಿ ವೈದ್ಯರುಗಳು ಲಭ್ಯರಿಲ್ಲದೆ ವ್ಯವಸ್ತೆವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ. ಇಲ್ಲಿ ದಾಖಲೆ ಹಾಗೂ ಹೆಸರಿಗಷ್ಟೇ ಏಳೆಂಟು ವೈದ್ಯರುಗಳಿದ್ದಾರೆ ಆದರೆ ದಿನನಿತ್ಯ ಹೊರರೋಗಿಗಳ ವಿಭಾಗದಲ್ಲಿ ಕೇವಲ ಒಬ್ಬರು ಅಥವಾ ಇಬ್ಬರು ವೈದ್ಯರು ಲಭ್ಯವಿದ್ದರೆ ಹೆಚ್ಚು.
ಒಬ್ಬರು ಶಸ್ತ್ರಚಿಕಿತ್ಸೆ,ಇಬ್ಬರು ರಾತ್ರಿ ಪಾಳಿ,ಒಬ್ಬರು ತರಬೇತಿ,ಒಬ್ಬರು ಖಾಸಗಿ ಆಸ್ಪತ್ರೆ, ಇದು ಒಂದು ಕಥೆಯಾದರೆ ಒಬ್ಬರು ಕಿವಿ,ಗಂಟಲು ಮೂಗು,ಮತ್ತೊಬ್ಬರು ಕಣ್ಣಿನ ವೈದ್ಯರು ಈ ಮಹಾನುಭಾವರುಗಳು ಬೇರೆ ರೋಗಿಗಳನ್ನು ಕಣ್ಣೆತ್ತಿಯೂ ನೋಡುವುದಿಲ್ಲ.ಒತ್ತಾಯ ಮಾಡಿದರೆ ಇದು ನಮಗೆ ಸಂಬಂಧಿಸಿದಲ್ಲಾ ಬೇರೆಯವರ ಬಳಿ ಹೋಗಿ ಎಂದು ಕಳುಹಿಸುತ್ತಾರೆ.
ಅದರಲ್ಲೂ ಕಳೆದ ಹಲವು ವರ್ಷಗಳಿಂದ ಇರುವ ಮಹಿಳಾ ವೈದ್ಯೆಯೊಬ್ಬರು ಆಸ್ಪತ್ರೆಗೆ ಬರುವುದೇ ಮಧ್ಯಾನ್ಹ ಹನ್ನೆರಡು ಗಂಟೆಗೆ ಈ ವೈದ್ಯರುಗಳ ನಂಬಿಬಂದ ರೋಗಿಗಳ ಕಥೆ ಹರೋಹರ.
ಆಸ್ಪತ್ರೆಯ ಆಡಳಿತ ಹಾಗೂ ಒಳ ಜಗಳದಿಂದಾಗಿ ಜನಸಾಮಾನ್ಯರು ಪರದಾಡುವಂತಾಗಿದೆ.ಹಿರಿಯ ಅಧಿಕಾರಿಗಳು ಅಸಹಾಯಕರಾಗಿದ್ದಾರೆ.
ಒಂದೆಡೆ ವೈದ್ಯರ ಸಮಸ್ಯೆ ಹೀಗಾದರೆ ಮತ್ತೊಂದೆಡೆ ಕೆಲವು ಔಷಧಿ,ಮಾತ್ರೆಗಳಿಲ್ಲದೆ ಹೊರಗಡೆ ಅಂಗಡಿಯಲ್ಲಿ ಖರೀದಿಸಬೇಕಾದ ಪರಿಸ್ತಿತಿ ನಿರ್ಮಾಣವಾಗಿದೆ.
ಇಲ್ಲಿ ವೈದ್ಯರ ಕೊರತೆ ಇಡೀ ನಿಜ ಆದರೆ ಮಡಿಕೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿರುವ ಕೆಲವು ವೈದ್ಯರನ್ನು ವಾರಕ್ಕೆ ಮೂರು,ನಾಲ್ಕು ದಿನ ಬರುವಂತೆ ತಾತ್ಕಾಲಿಕ ವ್ಯವಸ್ಥೆಯನ್ನಾದರೂ ಮಾಡಬಹುದು ಆದರೆ ಹಿರಿಯ ಅಧಿಕಾರಿಗಳು ಹಾಗೂ ಆಡಳಿತ ವ್ಯವಸ್ಥೆ ಮುಂದಾಗದಿರುವುದು ವಿಪರ್ಯಾಸ.
ಈ ಬಗ್ಗೆ ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳನ್ನು ಪ್ರಶ್ನಿಸಿದರೆ ಸರಿಪಡಿಸುದಾಗಿ ಮಾತ್ರ ಸಿದ್ಧ ಉತ್ತರ ನೀಡುತ್ತಾರೆ.ಒಟ್ಟಿನಲ್ಲಿ ದಿನಾ ಸಾಯುವವರಿಗೆ ಅಳುಕಕರು ಯಾರೂ ಎಂಬಂತಾಗಿದೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆ ಕಥೆ.