Kodagu

ಸೋಮವಾರಪೇಟೆ: ಪತ್ನಿಯನ್ನೇ ಕೊಂದು ಪತಿ ಆತ್ಮಹತ್ಯೆ

admincoorgdaily

ಸೋಮವಾರಪೇಟೆ: ಪತ್ನಿಯನ್ನೇ ಕೊಂದು ಪತಿ ಆತ್ಮಹತ್ಯೆ
ಸೋಮವಾರಪೇಟೆ: ತಾಲೂಕಿನ ಮಾದಾಪುರ ಹೋಬಳಿಯ ಕುಂಬಾರಗಡಿಗೆ ಗ್ರಾಮದಲ್ಲಿ ವೃದ್ಧ ದಂಪತಿ ಗುಂಡೇಟಿಗೆ ಬಲಿಯಾದ ಆಘಾತಕಾರಿ ಘಟನೆ ನಡೆದಿದೆ.

ಕನ್ನಿಕಂಡ ಮನೆತನಕ್ಕೆ ಸೇರಿದ ಸುಬ್ಬಯ್ಯ (76) ಎಂಬವರು ತಮ್ಮ ಪತ್ನಿ ಭೋಜಮ್ಮ (74) ಅವರಿಗೆ ತಮ್ಮ ಬಳಿಯಿದ್ದ ಒಂಟಿ ನಳಿಕೆ ಕೋವಿಯಿಂದ ಗುಂಡು ಹಾರಿಸಿ ಹತ್ಯೆ ಮಾಡಿದ ಬಳಿಕ, ಅದೇ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.