Kodagu

ಸೋಮವಾರಪೇಟೆ; ತಾಯಿಯನ್ನೇ ಕೊಂದ ಮಗನಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ವಿಧಿಸಿದ ಮಡಿಕೇರಿ ಕೋರ್ಟ್

admincoorgdaily

ಸೋಮವಾರಪೇಟೆ; ತಾಯಿಯನ್ನೇ ಕೊಂದ ಮಗನಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ವಿಧಿಸಿದ ಮಡಿಕೇರಿ ಕೋರ್ಟ್
ಮಡಿಕೇರಿ: ತಾಯಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಡಿಕೇರಿಯ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ಪ್ರಕರಣದ ಸಾರಾಂಶ:

ಸೋಮವಾರಪೇಟೆ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಶಾಂತಳ್ಳಿ ಗ್ರಾಮದ ಬಸವನಕಟ್ಟೆ ಎಂಬಲ್ಲಿ ವಾಸವಿರುವ ಅಪರಾಧಿ ಎಸ್.ಎಸ್. ಸುರೇಶನು ಅವಿವಾಹಿತನಾಗಿದ್ದು, ತನ್ನ ತಂದೆ ದಿವಂಗತ ಸುಬ್ಬಯ್ಯನವರಿಗೆ ಬರುತ್ತಿದ್ದ ನಿವೃತ್ತಿ ವೇತನದ ವಿಚಾರದಲ್ಲಿ ತನ್ನೊಂದಿಗೆ ವಾಸವಿದ್ದ ತಾಯಿ 56 ವರ್ಷದ ಕಾವೇರಿಯವರೊಂದಿಗೆ ಮನಸ್ತಾಪ ಹೊಂದಿದ್ದನು.

ದಿನಾಂಕ: 31-05-2024 ರಂದು ರಾತ್ರಿ 10.30 ಗಂಟೆಗೆ ಸೋಮವಾರಪೇಟೆ ತಾಲೂಕು ಶಾಂತಳ್ಳಿ ಗ್ರಾಮದ ಬಸವನಕಟ್ಟೆಯಲ್ಲಿರುವ ತನ್ನ ವಾಸದ ಮನೆಯಲ್ಲಿ ಕಾವೇರಿಯವರನ್ನು ಸೌದೆ ಕೋಲಿನಿಂದ ಹೊಡೆದು ಕೊಲೆ ಮಾಡಿ, ನಂತರ ತನ್ನ ತಾಯಿಯು ಜಾರಿಬಿದ್ದು ಸಾವನ್ನಪ್ಪಿರುವುದಾಗಿ ದೂರು ನೀಡಿದ್ದು, ತನಿಖೆ ಕೈಗೊಂಡ ಪೊಲೀಸರು ವೈದ್ಯರು ಮೃತದೇಹವನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೂರು ನೀಡಿದ್ದು, ತನಿಖೆ ಕೈಗೊಂಡ ಪೊಲೀಸರು ವೈದ್ಯರು ಮೃತದೇಹವನ್ನು ಪರೀಕ್ಷಿಸಿ ಮೃತಪಟ್ಟಿರುವುದು ಅಪರಾಧಿ ಹೇಳಿದಂತೆ ಮೃತಳು ಜಾರಿ ಬಿದ್ದು ಗಾಯಗೊಂಡಿರುವುದು ನೀಡಿದ ವರದಿ ಹಾಗೂ ತನಿಖೆಯಿಂದ ಅಪರಾಧಿ  ಹೊಡೆದು ಗಾಯಗೊಳಿಸಿ ಅದರಿಂದ ಆಕೆ ಸತ್ತು ಹೋದದ್ದು ಮತ್ತು ಆರೋಪಿತನೇ ದೋಷಿ ಎಂದು  ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಸೋಮವಾರಪೇಟೆ ಪೊಲೀಸ್ ನಿರೀಕ್ಷಕರಾದ ಮುದ್ದುಮಾದೇವರವರು ಆರೋಪಿ ಎಸ್.ಎಸ್. ಸುರೇಶನ ವಿರುದ್ಧ ಕೊಲೆ ಮಾಡಿರುವ ಅಪರಾಧಕ್ಕಾಗಿ ಸಂಪೂರ್ಣ ತನಿಖೆ ಕೈಗೊಂಡು, ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆಯು ಮಾನ್ಯ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಮಡಿಕೇರಿ ಇಲ್ಲಿ ನಡೆದಿದ್ದು, ಪ್ರಾಸಿಕ್ಯೂಷನ್ ಪರ ಹಾಜರು ಪಡಿಸಿದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಅಪರಾಧಿ ಎಸ್.ಎಸ್. ಸುರೇಶನು ಮೇಲೆ ಹೇಳಿದ ಕೃತ್ಯವೆಸಗಿರುವುದು ನಿಸ್ಸಂಶಯವಾಗಿ ಸಾಬೀತಾಗಿದೆ ಎಂದು ಮಾನ್ಯ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಮಮ್ಮಾಜ್ ಇವರು ಅಪರಾಧಿ ಎಸ್.ಎಸ್. ಸುರೇಶನಿಗೆ ಕಾವೇರಿಯವರನ್ನು ಕೊಲೆ ಮಾಡಿರುವ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಹಾಗೂ ರೂ.50,000/- ದಂಡವನ್ನು ವಿಧಿಸಿ ತೀರ್ಪು ನೀಡಿರುತ್ತಾರೆ.

ಮೇಲ್ಕಂಡ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ಸರ್ಕಾರಿ ಅಭಿಯೋಜಕರಾದ ಶ್ರೀ ದೇವೇಂದ್ರ ಎನ್.ಹೆಚ್. ರವರು ಸಾಕ್ಷಿದಾರರ ವಿಚಾರಣೆಯನ್ನು ನಡೆಸಿ ವಾದ ಮಂಡಿಸಿರುತ್ತಾರೆ.