ಸೋಮವಾರಪೇಟೆ:ದೇವರಾಜಮ್ಮಗೆ ನಾಡೋಜ ಕಮಲ ಹಂಪನಾ ರಾಜ್ಯ ಪ್ರಶಸ್ತಿ
admincoorgdaily

ಸೋಮವಾರಪೇಟೆ:- ಹಿರಿಯ ಹಾಕಿ ಆಟಗಾರ್ತಿ ಹಾಗೂ ತರಬೇತುದಾರರಾದ ಶ್ರೀಮತಿ ದೇವರಾಜಮ್ಮ ರಾಜ್ಯಪ್ರಸ್ತಿಗೆ ಭಾಜನರಾಗಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಜನಪದ ಪರಿಷತ್ ಮಹಿಳಾ ಸಮ್ಮೇಳನದಲ್ಲಿ ರಾಜ್ಯ ವಿಧಾನ ಪರಿಷತ್ ಉಪ ಸಭಾಪತಿ ಹಾಗೂ ಚಲನಚಿತ್ರ ನಟಿ ಶ್ರೀ ಮತಿ ಉಮಾಶ್ರೀ ಕ್ರೀಡಾ ಕ್ಷೇತ್ರದ ಸಾಧನೆಗಾಗಿ ದೇವರಾಜಮ್ಮನವರಿಗೆ ನಾಡೋಜ ಕಮಲ ಹಂಪನಾ ರಾಜ್ಯಪ್ರಶಸ್ತಿ ಪ್ರಧಾನ ಮಾಡಿದರು.
ದೇವರಾಜಮ್ಮ ಮೂಲತಃ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರ ಸಮೀಪದ ಮೆಣಸ ಗ್ರಾಮದವರಾಗಿದ್ದು ,ಕರ್ನಾಟಕ ರಾಜ್ಯ ಹಾಕಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾಗಿ ಸೇವೆಸಲ್ಲಿಸುತಿದ್ದು.ರಾಜ್ಯ ಯುವಜನ ಸೇವಾ ಇಲಾಖೆಯಲ್ಲಿ ಮಹಿಳಾ ಹಾಕಿ ತರಬೇತುದಾರರಾಗಿ ಸೇವೆಸಲ್ಲಿಸಿದ್ದಾರೆ.