Kodagu

ಸೋಮವಾರಪೇಟೆ: ಶ್ರೀ ನಾರಾಯಣಗುರು ಸೇವಾ ಸಮಿತಿ ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆ

admincoorgdaily

ಸೋಮವಾರಪೇಟೆ: ಶ್ರೀ ನಾರಾಯಣಗುರು ಸೇವಾ ಸಮಿತಿ ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆ
ಸೋಮವಾರಪೇಟೆ: ಶ್ರೀ ನಾರಾಯಣಗುರು ಸೇವಾ ಸಮಿತಿಯ ಸೋಮವಾರಪೇಟೆ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ತಾಲೂಕಿನಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಸಮಿತಿಯ ಗೌರವ ಅಧ್ಯಕ್ಷರಾಗಿ ಲಕ್ಷ್ಮಣ ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಇಂದಿರಾ ಮೊಣಪ್ಪ, ಉಪಾಧ್ಯಕ್ಷರಾಗಿ ರಾಜಶೇಖರ್, ಪ್ರಧಾನ ಕಾರ್ಯದರ್ಶಿಯಾಗಿ ಹೇಮಂತ್ ಪೂಜಾರಿ, ಸಹ ಕಾರ್ಯದರ್ಶಿಯಾಗಿ ಗಣೇಶ್, ಖಜಾಂಜಿಯಾಗಿ ಸುಮಾ ರವಿ, ಸಂಘಟನಾ ಕಾರ್ಯದರ್ಶಿಯಾಗಿ ಕೆ.ಎನ್. ನಾಗರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.

ಸಲಹೆಗಾರರಾಗಿ ಬಿ.ಎ. ಭಾಸ್ಕರ್, ರಾಘವ ಮತ್ತು ರಮೇಶ್ ಅವರನ್ನು ನೇಮಕ ಮಾಡಲಾಗಿದೆ.

ನಿರ್ದೇಶಕರಾಗಿ ನಿತಿನ್, ರೋಹಿತ್ ಬಿ.ಎಂ., ಉಷಾ ಶೇಷಪ್ಪ, ಪ್ರಕಾಶ್ ಬಿ.ಜಿ., ಯಶೋಧಾ ಚಂದ್ರಶೇಖರ್, ನಾಗರಾಜ್ ಕೆ.ಎನ್., ಧರ್ಮಪ್ಪ ಕೆ.ಬಿ., ದಿನೇಶ್ ಬಿ.ಸಿ., ರಂಜಿತ್ ಬಿ.ವಿ., ವಿನೋದ್ ಜಯರಾಮ್, ತ್ರಿಲೇಶ್, ಶಶಿ ಕುಮಾರ್ ಬಿ.ಆರ್., ಪ್ರಶಾಂತ್ ಬಿ.ಎಂ., ಹರೀಶ್ ಕೋಟ್ಯಾನ್, ದಿವ್ಯಾ ಹರೀಶ್ ಹಾಗೂ ದಿನೇಶ್ ಮಾಲಂಬಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.