Kodagu

ಸೋಮವಾರಪೇಟೆ ತಾಲೂಕು ಶ್ರೀ ನಾರಾಯಣ ಗುರು ಸೇವಾ ಸಮಿತಿ ವಾರ್ಷಿಕ ಮಹಾಸಭೆ ಯಶಸ್ವಿ

admincoorgdaily

ಸೋಮವಾರಪೇಟೆ ತಾಲೂಕು ಶ್ರೀ ನಾರಾಯಣ ಗುರು ಸೇವಾ ಸಮಿತಿ ವಾರ್ಷಿಕ ಮಹಾಸಭೆ ಯಶಸ್ವಿ
ಸೋಮವಾರಪೇಟೆ: ಸೋಮವಾರಪೇಟೆ ತಾಲೂಕು ಶ್ರೀ ನಾರಾಯಣ ಗುರು ಸೇವಾ ಸಮಿತಿಯ ವಾರ್ಷಿಕ ಮಹಾಸಭೆಯು ಅಲೋಕ್ ಫ್ಯಾಮಿಲಿ ಹಾಲ್‌ನಲ್ಲಿ ಸಂಘದ ಅಧ್ಯಕ್ಷರಾದ ಬಿ.ಆರ್. ಚಂದ್ರಹಾಸ್ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಸಮುದಾಯದ ಅರ್ಚಕರಾದ ನಿತಿನ್ ಅವರು ಶ್ರೀ ನಾರಾಯಣ ಗುರುಗಳಿಗೆ ಪೂಜೆ ಸಲ್ಲಿಸಿದರು. ನಂತರ ಸರ್ವರೂ ಪೂಜೆ ಸಲ್ಲಿಸಿದರು.

ಸಂಘದ ಸದಸ್ಯರು ಮಾತನಾಡಿ, ಸಂಘದ ಅಭಿವೃದ್ಧಿ ಮತ್ತು ಏಳಿಗೆಗೆ ಸಂಬಂಧಿಸಿದಂತೆ ಸಂಘಕ್ಕೆ ನಿವೇಶನವಿದ್ದರೂ, ಆ ನಿವೇಶನದಲ್ಲಿ ಸಮುದಾಯ ಭವನ ನಿರ್ಮಾಣದ ಕನಸು ಈಡೇರುತ್ತಿಲ್ಲ. ಅನೇಕ ವರ್ಷಗಳಿಂದ ಈ ಚರ್ಚೆ ನಡೆಯುತ್ತಿದ್ದರೂ ಯಾವುದೇ ಫಲಿತಾಂಶ ಸಿಗುತ್ತಿಲ್ಲ. ಈ ಬಾರಿಯಾದರೂ ಈ ಆಡಳಿತ ಮಂಡಳಿಯ ಪ್ರಮುಖ ಕೆಲಸ ಸಮುದಾಯ ಭವನ ನಿರ್ಮಾಣ ಮಾಡುವುದಾಗಬೇಕು ಮತ್ತು ನಮ್ಮ ಜನಾಂಗದವರನ್ನು ಒಟ್ಟುಗೂಡಿಸುವ ಕೆಲಸ ಆಗಬೇಕು ಎಂಬಿತ್ಯಾದಿ ಉತ್ತಮ ಸಲಹೆ-ಸಹಕಾರ ನೀಡಿದರು.

ನಂತರ ಅಧ್ಯಕ್ಷರಾದ ಚಂದ್ರಹಾಸ್ ಅವರು ಮಾತನಾಡಿ, "ನಾನು ಆರೋಗ್ಯ ಸಮಸ್ಯೆಯಿಂದ ಇರುವುದರಿಂದ ಅಧ್ಯಕ್ಷರಾಗಿ ಮುಂದುವರೆಯಲು ಕಷ್ಟ. ಹಾಗಾಗಿ ನೂತನ ಆಡಳಿತ ಮಂಡಳಿ ರಚನೆ ಮಾಡಿದರೆ ಒಳ್ಳೆಯದು. ನಾನು ಯಾವಾಗಲೂ ಸಂಘದ ಜೊತೆಗೆ ನಿಲ್ಲುತ್ತೇನೆ" ಎಂದರು.

ಪ್ರಧಾನ ಕಾರ್ಯದರ್ಶಿ ಇಂದಿರಾ ಮೊಣಪ್ಪ ಸ್ವಾಗತಿಸಿದರು. ವಾರ್ಷಿಕ ಲೆಕ್ಕಪತ್ರ ವರದಿಯನ್ನು ಖಜಾಂಚಿ ರಮೇಶ್ ಅವರು ಮಂಡಿಸಿದರು. ಯಶೋಧ ಚಂದ್ರಶೇಖರ್ ಪ್ರಾರ್ಥಿಸಿದರು.

ಮೃತಪಟ್ಟ ಸಂಘದ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸುಂದರ್, ಹಾಗೂ ಸಮಿತಿಯ ಸದಸ್ಯರು, ಮಾಜಿ ಅಧ್ಯಕ್ಷರು, ನಿರ್ದೇಶಕರು ಹಾಜರಿದ್ದರು.

ಬಿ.ಎ. ಭಾಸ್ಕರ್ ಕಾರ್ಯಕ್ರಮ ನಿರ್ವಹಿಸಿದರು.