ತುರ್ತು ಚಿಕಿತ್ಸಾ ನಿರ್ವಹಣೆ ಕುರಿತು ವಿಶೇಷ ಉಪನ್ಯಾಸ
admincoorgdaily

ಮಡಿಕೇರಿ ಸೆ.08:-ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಆಸ್ಪತ್ರೆಯ ಸಭಾಂಗಣದಲ್ಲಿ ತಲೆ ಮತ್ತು ಬೆನ್ನುಮೂಳೆಯ ಗಾಯಗಳು, ಪಾಶ್ರ್ವವಾಯು ಹಾಗೂ ಅಪಸ್ಮಾರದ ತುರ್ತು ನಿರ್ವಹಣೆ ಕುರಿತು ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ.ಲೋಕೇಶ್ ಎ.ಜೆ., ಆರ್‍ಎಂಒ ಡಾ.ಅಭಿನಂದನ್ ಬಿ.ವಿ. ಹಾಗೂ ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರವೀಣ್ ಕುಮಾರ್ ಕೆ. ಅವರ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಿತು.
ಬೆಂಗಳೂರಿನ ಸರ್ಜಾಪುರ ರಸ್ತೆಯ ಸ್ಪರ್ಶ್ ಆಸ್ಪತ್ರೆಯ ಕನ್ಸಲ್ಟೆಂಟ್ ನ್ಯೂರೋಸರ್ಜನ್ ಡಾ. ನಿಹಾಲ್ ಅಹಮದ್ ಅವರು ಉಪನ್ಯಾಸ ನೀಡಿದರು.
ಉಪನ್ಯಾಸವು ಅತ್ಯಂತ ಮಾಹಿತಿ ಪೂರ್ಣವಾಗಿದ್ದು, ಸಂವಾದಾತ್ಮಕ ರೀತಿಯಲ್ಲಿ ನಡೆದ ಕಾರಣ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಇಂಟರ್ನ್‍ಗಳಿಗೆ ತುರ್ತು ಪರಿಸ್ಥಿತಿಗಳಲ್ಲಿ ತ್ವರಿತ ಮತ್ತು ಸೂಕ್ತ ನಿರ್ಧಾರ ಕೈಗೊಳ್ಳಲು ಬಹಳ ಉಪಯುಕ್ತವಾಯಿತು.
ಕಾರ್ಯಕ್ರಮವು ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರಿಗೆ ತುರ್ತು ನರರೋಗ ಪ್ರಕರಣಗಳ ನಿರ್ವಹಣೆಯಲ್ಲಿ ಆತ್ಮವಿಶ್ವಾಸ ಹೆಚ್ಚಿಸುವಂತಹ ಮಹತ್ವದ ಶೈಕ್ಷಣಿಕ ಅನುಭವವಾಗಿ ಮೂಡಿಬಂದಿತು.