Kodagu

ಮಾಂದಲಪಟ್ಟಿಯಲ್ಲಿ ಅತಿವೇಗದ ಚಾಲನೆ - ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಜೀಪ್ ಚಾಲಕನಿಗೆ ದಂಡ

admincoorgdaily

ಮಾಂದಲಪಟ್ಟಿಯಲ್ಲಿ ಅತಿವೇಗದ ಚಾಲನೆ - ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಜೀಪ್ ಚಾಲಕನಿಗೆ ದಂಡ
ಮಡಿಕೇರಿ:ಮಾಂದಲ್‌ಪಟ್ಟಿ ರಸ್ತೆಯಲ್ಲಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ಜೀಪ್ ಚಲಾಯಿಸಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಸಿದ ಚಾಲಕನಿಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ದಂಡ ವಿಧಿಸಿದ್ದಾರೆ.
ಸಾರ್ವಜನಿಕರೊಬ್ಬರು ಈ ಅಜಾಗರೂಕ ಚಾಲನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ವಾಹನದ ನೋಂದಣಿ ಸಂಖ್ಯೆ ಆಧರಿಸಿ ಚಾಲಕನನ್ನು ಪತ್ತೆ ಹಚ್ಚಿದ ಪೊಲೀಸರು, ಅಜಾಗರೂಕ ಮತ್ತು ಅಪಾಯಕಾರಿ ಚಾಲನೆ (Reckless / Dangerous Driving) ಅಡಿ *ರೂ.1000 ದಂಡ* ವಿಧಿಸಿದ್ದಾರೆ.

ಈ ಕುರಿತು ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದ್ದು, "ನಿಮ್ಮ ಸುರಕ್ಷತೆ, ನಮ್ಮ ಕರ್ತವ್ಯ. ತುರ್ತು ಸಂದರ್ಭದಲ್ಲಿ 112 ಕರೆ ಮಾಡಿ" ಎಂದು ಮನವಿ ಮಾಡಿದೆ. ಅತಿವೇಗದ ಚಾಲನೆ ಅಪಾಯಕಾರಿ, ನಿಯಮ ಪಾಲಿಸಿ ಎಂದು ಎಚ್ಚರಿಕೆ ನೀಡಿದೆ.