Kodagu

ಪಾರಣೆಯಲ್ಲಿ ಕ್ರೀಡಾ ಹಬ್ಬ-2026: ಕೈಲ್ ಮೂಹೂರ್ತ ಕ್ರೀಡಾಕೂಟದಲ್ಲಿ ಶಾಸಕ ಪೊನ್ನಣ್ಣ ಭಾಗಿ

admincoorgdaily

ಪಾರಣೆಯಲ್ಲಿ ಕ್ರೀಡಾ ಹಬ್ಬ-2026: ಕೈಲ್ ಮೂಹೂರ್ತ ಕ್ರೀಡಾಕೂಟದಲ್ಲಿ ಶಾಸಕ ಪೊನ್ನಣ್ಣ ಭಾಗಿ
ಮಡಿಕೇರಿ:ಮಡಿಕೇರಿ ತಾಲೂಕಿನ ಪಾರಣೆ ಗ್ರಾಮದಲ್ಲಿ ಆಯೋಜನೆಗೊಂಡಿದ್ದ ಪಾರಣೆ ಕ್ರೀಡಾ ಹಬ್ಬ-2026ರ ಅಂತರ್ ಗ್ರಾಮಾಂತರ ಕೈಲ್ ಮೂಹೂರ್ತ ಕ್ರೀಡಾಕೂಟದಲ್ಲಿ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಶ್ರೀ ಎ.ಎಸ್. ಪೊನ್ನಣ್ಣ ಅವರು ಭಾಗವಹಿಸಿದರು.

ಕ್ರೀಡಾಕೂಟಕ್ಕೆ ಶುಭ ಕೋರಿ ಮಾತನಾಡಿದ ಶಾಸಕರು, ಇತ್ತೀಚಿನ ದಿನಗಳಲ್ಲಿ ಕೊಡಗಿನ ಕ್ರೀಡಾಪಟುಗಳು ದೇಶ ಮಾತ್ರವಲ್ಲದೆ ವಿಶ್ವಮಟ್ಟದಲ್ಲಿ ಉತ್ತಮ ಹೆಸರು ಗಳಿಸುತ್ತಿದ್ದು, ಅನೇಕ ಪದಕಗಳನ್ನು ತಮ್ಮ ಮುಡಿಗೇರಿಸಿಕೊಳ್ಳುತ್ತಿದ್ದಾರೆ. ಕೊಡಗಿನ ಜನತೆ ಬಾಲ್ಯದಿಂದಲೇ ಕ್ರೀಡೆಯಲ್ಲಿ ಆಸಕ್ತಿ ಹೊಂದಿದವರಾಗಿದ್ದು, ಇಂತಹ ಕ್ರೀಡಾಕೂಟಗಳು ಪ್ರತಿಯೊಬ್ಬರ ಪ್ರತಿಭೆಯನ್ನು ಅನಾವರಣಗೊಳಿಸಲು ಸಹಕಾರಿಯಾಗಿದೆ. ಕ್ರೀಡಾಪಟುಗಳು ಕ್ರೀಡೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಲ್ಲಿ ಅವರ ಭವಿಷ್ಯವನ್ನು ರೂಪಿಸುವಲ್ಲಿ ಇಂತಹ ಕ್ರೀಡೆಗಳು ಸಹಕಾರಿಯಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಾರಣೆ ಕೇಂದ್ರ ಕ್ರೀಡಾ ಮಂಡಳಿ ಅಧ್ಯಕ್ಷ ಎಂ. ಸಾಬು ದೇವಯ್ಯ, ವಲಯ ಅಧ್ಯಕ್ಷ ದಿಲೀಪ್, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಬೋಳಂಡ ಶೇರಿ ಗಿರೀಶ್, ವಿಎಸ್ಎಸ್ಎನ್ ಅಧ್ಯಕ್ಷ ಪೂವಯ್ಯ ಮುತ್ತಪ್ಪ, ಸುರೇಶ್, ಕೌಶಿಕ್ ಕುಟ್ಟಯ್ಯ, ಕೋಡಿರ ವಿನೋದ್ ನಾಣಯ್ಯ, ಉದಯ್ ಮಾದಪ್ಪ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.