Kodagu

ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ 61ನೇ ಪುಣ್ಯಸ್ಮರಣೆ : ಮಹಾನ್ ಯೋಧನ ಸಾಹಸ ಯುವ ಸಮೂಹಕ್ಕೆ ಪ್ರೇರಣಾದಾಯಕ : ನಿವೃತ್ತ ಏರ್ ಮಾರ್ಷಲ್ ಕೊಡಂದೇರ ನಂದಾ ಕಾರ್ಯಪ್ಪ ಅಭಿಮತ

admincoorgdaily

ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ 61ನೇ ಪುಣ್ಯಸ್ಮರಣೆ : ಮಹಾನ್ ಯೋಧನ ಸಾಹಸ ಯುವ ಸಮೂಹಕ್ಕೆ ಪ್ರೇರಣಾದಾಯಕ : ನಿವೃತ್ತ ಏರ್ ಮಾರ್ಷಲ್ ಕೊಡಂದೇರ ನಂದಾ ಕಾರ್ಯಪ್ಪ ಅಭಿಮತ
ಮಡಿಕೇರಿ ಸೆ.7 : ಭಾರತ-ಪಾಕ್ ನಡುವಿನ 1965ರ ಯುದ್ಧದಲ್ಲಿ ಶತ್ರು ರಾಷ್ಟ್ರದ ಯುದ್ಧ ವಿಮಾನವನ್ನು ಹೊಡೆದುರುಳಿಸಿ ಬಲಿದಾನಗೈದ ಸಾಹಸಿ ಕೊಡಗಿನ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ 61ನೇ ಪುಣ್ಯಸ್ಮರಣಾ ಕಾರ್ಯಕ್ರಮ ಕೊಡವ ಮಕ್ಕಡ ಕೂಟ, ಅಜ್ಜಮಾಡ ಒಕ್ಕ (ಕುಟುಂಬಸ್ಥರು) ಹಾಗೂ ಸ್ವಾ.ಲೀ ಅಜ್ಜಮಾಡ ದೇವಯ್ಯ ಟ್ರಸ್ಟ್ ನ ಸಹಯೋಗದಲ್ಲಿ ಮಡಿಕೇರಿಯಲ್ಲಿ ನಡೆಯಿತು.
ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದ ಬಳಿಯ ಸ್ಕ್ವಾ.ಲೀ. ದೇವಯ್ಯ ವೃತ್ತದಲ್ಲಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸುವ ಮೂಲಕ ವೀರ ಸೇನಾನಿಗೆ ಗೌರವ ಅರ್ಪಿಸಲಾಯಿತು.

ಸ್ಕ್ವಾ.ಲೀ.ಅಜ್ಜಮಾಡ ದೇವಯ್ಯ ಅವರ ಭವ್ಯ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ನಿವೃತ್ತ ಏರ್ ಮಾರ್ಷಲ್ ಕೊಡಂದೇರ ನಂದಾ ಕಾರ್ಯಪ್ಪ ಅವರು ಮಹಾನ್ ಯೋಧನ ಸಾಹಸ ಮತ್ತು ರಾಷ್ಟ್ರ ಮಾಡಿದ ಬಲಿದಾನದ ಕುರಿತು ಸ್ಮರಣೆಯ ಮೂಲಕ ಯುವ ಸಮೂಹದಲ್ಲಿ ಪ್ರೇರಣೆಯನ್ನು ತುಂಬಬೇಕೆAದು ಕರೆ ನೀಡಿದರು.

ಸ್ಕ್ವಾ.ಲೀ.ದೇವಯ್ಯ ಅವರು ರಾಷ್ಟ್ರ ರಕ್ಷಣೆೆಗಾಗಿ ಯುದ್ಧ ವಿಮಾನದಲ್ಲಿ ಶತ್ರು ರಾಷ್ಟ್ರ ಪಾಕಿಸ್ತಾನದ ವಿರುದ್ಧ ವೀರೋಚಿತ ಹೋರಾಟವನ್ನು ನಡೆಸಿದರು. ಅವರು 1965 ರಲ್ಲಿ ಹುತಾತ್ಮರಾದರೂ ಸುಮಾರು 23 ವರ್ಷಗಳ ಬಳಿಕ ವಿಚಾರ ಜಗತ್ತಿನ ಅರಿವಿಗೆ ಬಂದಿತು. ಬಳಿಕ ಭಾರತ ಸರ್ಕಾರ ಅವರಿಗೆ ಮರಣೋತ್ತರ "ಮಹಾವೀರ ಚಕ್ರ"ವನ್ನು ಪ್ರದಾನ ಮಾಡಿತು ಎಂದರು.

 ಭಾರತೀಯ ವಾಯುದಳದ ನಾನ್ ಕಮೀಷನ್ಡ್ ಆಫೀಸರ್, ರಾಡಾರ್ ಮತ್ತು ಮಿಸೈಲ್ ಇನ್‌ಸ್ಟçಕ್ಟರ್ ಮುಂಜಾಂದಿರ ರಾಜ ಅಪ್ಪಯ್ಯ ಅವರು ಮಾತನಾಡಿ, 1965ರ ಇಂಡೋ ಪಾಕ್ ಯುದ್ಧದ ಸಂದರ್ಭ, ಸ್ಕ್ವಾ.ಲೀ.ಅಜ್ಜಮಾಡ ದೇವಯ್ಯ ಅವರು, ಶತ್ರುರಾಷ್ಟ್ರ ಪಾಕಿಸ್ತಾನ ಅಂದಿನ ಕಾಲಘಟ್ಟದಲ್ಲಿ ಹೊಂದಿದ್ದ ಅತ್ಯಾಧುನಿಕ ಯುದ್ಧ ವಿಮಾನವನ್ನು,  ತಾವು ಚಾಲನೆ ಮಾಡುತ್ತಿದ್ದ ಯುದ್ಧ ವಿಮಾನ ಅದಕ್ಕಿಂತ ಕೆಳ ಮಟ್ಟದ್ದಾದರು, ಅದನ್ನು ಲೆಕ್ಕಿಸದೆ ತಮ್ಮ ಚಾಕಚಕ್ಯತೆ, ಅಸಾಮಾನ್ಯ ಸಾಹಸ, ದೃಢನಿಶ್ಚಯಗಳ ಮೂಲಕ ಹೊಡೆದುರುಳಿಸುವ ಮೂಲಕ ಸಾಹಸ ಮೆರೆÉದಿದ್ದರು. ಆದರೆ, ಈ ವಿಚಾರ ಸಾಕಷ್ಟು ವರ್ಷಗಳ ಕಾಲ ಬೆಳಕಿಗೆ ಬಂದಿರಲಿಲ್ಲ, ನಂತರ ಅಂದಿನ ದಿನಗಳಲ್ಲಿ ಯುದ್ಧದಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನಿ ಸೈನ್ಯದ ಅಧಿಕಾರಿಯ ಮೂಲಕ ಬೆಳಕಿಗೆ ಬಂದಿತ್ತೆಂದು ತಿಳಿಸಿದರು.

 ಇಂತಹ ಮಹಾನ್ ಯೋಧನ ಪ್ರತಿಮೆಯನ್ನು ಕೊಡವ ಮಕ್ಕಡ ಕೂಟ ಸಾಕಷ್ಟು ಪರಿಶ್ರಮದಿಂದ ಅಜ್ಜಮಾಡ ಕುಟುಂಬಸ್ಥರು ಮತ್ತಿತರರ ಸಹಕಾರದೊಂದಿಗೆ ಸ್ಥಾಪನೆ ಮಾಡಿರುವುದು ಶ್ಲಾಘನೀಯವೆಂದರು.
ನಗರದ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ.ರಾಘವ ಬಿ. ಅವರು ಮಾತನಾಡಿ, ಸ್ಕ್ವಾ.ಲೀ.ಅಜ್ಜಮಾಡ ದೇವಯ್ಯ ಅವರ ಪುಣ್ಯ ದಿನ ಎನ್ನುವುದಕ್ಕೂ ಮಿಗಿಲಾಗಿ, ಈ ದಿನ ತ್ಯಾಗ, ಬಲಿದಾನಗಳ ದಿನವೇ ಆಗಿದೆ.

 ಸ್ಕ್ವಾಲೀ.ದೇವಯ್ಯ ಅವರ ಸಾಹಸ, ರಾಷ್ಟ್ರ ರಕ್ಷಣೆಯೆಡೆಗಿನ ಅಚಲ ನಿರ್ಧಾರಗಳು ಇಂದಿನ ಯುವ ಸಮೂಹಕ್ಕೆ ಸ್ಫೂರ್ತಿಯನ್ನು ನೀಡಲಿದೆ ಎಂದು ತಿಳಿಸಿದರು.
ಭಾರತ ಮಾತೆಗೆ ಸ್ಕ್ವಾಲೀ.ದೇವಯ್ಯ ಅವರಂತಹ ವೀರ ಯೋಧರನ್ನು ನೀಡಿದ ಕೊಡಗಿನ ಪುಣ್ಯ ಭೂಮಿ, ಇಲ್ಲಿನ ಪರಿಸರಕ್ಕೆ ನಾವೆಲ್ಲರು ಚಿರ ಋಣಿಗಳಾಗಬೇಕೆಂದು ಕರೆ ನೀಡಿದ ಅವರು, ಇಲ್ಲಿನ ಯುವ ಸಮೂಹ ದೇಶ ಸೇವೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಉತ್ಸುಕವಾಗಬೇಕೆಂದರು.

ಕಾವೇರಿ ಮೂಲ ಸ್ವರೂಪ ಸಂರಕ್ಷಣಾ ಸಮಿತಿಯ ಪದಾಧಿಕಾರಿ ಉಳ್ಳಿಯಡ ಎಂ.ಪೂವಯ್ಯ ಅವರು ಮಾತನಾಡಿ, ಸ್ಕ್ವಾ.ಲೀ.ದೇವಯ್ಯ ಅವರ ಸಾಹಸ ಮತ್ತು ಬಲಿದಾನಗಳ ಹಿನ್ನೆಯಲ್ಲಿ ಅವರಿಗೆ ಸೇವಾ ಪದಕಗಳಲ್ಲಿ ಮೊದಲನೆಯದಾದ ಪರಮ ವೀರ ಚಕ್ರವನ್ನೆ ಮರಣೋತ್ತರವಾಗಿ ಪ್ರದಾನ ಮಾಡಬೇಕಾಗಿತ್ತು. ರಾಷ್ಟçದೆಡೆಗಿನ ಅವರ ಅಚಲ ನಿಷ್ಠೆ, ದೇಶಪ್ರೇಮ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು ಅವರು ಮಾತನಾಡಿ, ಕೊಡಗು ಜಿಲ್ಲೆಯ ಪ್ರತಿ ಶಾಲೆಗಳಲ್ಲಿನ ಮಕ್ಕಳಿಗೆ, ಕೊಡಗಿನ ನೆಲದ ವೀರ ಯೋಧರ ಸಾಹಸಗಾಥೆಯನ್ನು, ಅವರ ಬದುಕಿನ ವಿವರಗಳನ್ನು ಒದಗಹಿಸುವ ಮೂಲಕ, ದೇಶ ಪ್ರೇಮದ ಬಗ್ಗೆ ಅರಿವನ್ನು ಮೂಡಿಸುವ ಕೆಲಸವಾಗಬೇಕು ಎಂದರು.

 ವಾಯುದಳದ ಜೂನಿಯರ್ ವಾರಂಟ್ ಆಫೀಸರ್ ಬಾಳೆಯಡ ಮಂದಪ್ಪ ಅವರು ಮಾತನಾಡಿ, ಇಂಡೋ- ಪಾಕ್ ಯುದ್ಧದ ಸಂದರ್ಭ ತಮ್ಮೊಂದಿಗೆ ಶತ್ರು ರಾಷ್ಟ್ರದ ಮೇಲೆ ನಡೆದ ದಾಳಿಯ ಹಂತದಲ್ಲಿ ಸ್ಕ್ವಾ.ಲೀ.ದೇವಯ್ಯ ಅವರು, ತಮ್ಮೊಂದಿಗೆ ದಾಳಿಗಿಳಿದಿದ್ದ ಇತರ 11 ಯುದ್ಧ ವಿಮಾನಗಳು ಹಿಂದಿರುವಂತೆ ನೋಡಿಕೊಂಡುದಲ್ಲದೆ,  ತಮ್ಮ ಯುದ್ಧ ವಿಮಾನಕ್ಕೆ ಹಾನಿಯಾಗಿದ್ದರು, ಅದನ್ನು ಲೆಕ್ಕಿಸದೆ ಶತ್ರು ರಾಷ್ಟçದ ಯುದ್ಧ ವಿಮಾನವನ್ನು ಕೆಡವಿದರು. ಆ ಯುದ್ಧದಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನದ ವಾಯು ಸೇನೆಯ ಅಧಿಕಾರಿ ಅಂಜತ್ ಖಾನ್ ಅವರನ್ನು ಬಿಬಿಸಿ ಸುದ್ದಿವಾಹಿನಿ ಹಲ ವರ್ಷಗಳ ಬಳಿಕ ಸಂದರ್ಶನ ನಡೆಸಿದ ಹಂತದಲ್ಲಿ ಅವರು, ಸ್ಕ್ವಾ.ಲೀ.ದೇವಯ್ಯ ಅವರ ಸಾಹಸವನ್ನು ಜಗತ್ತಿಗೆ ತಿಳಿಸಿದ್ದರು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರು ಕೊಡಗಿನ ಇಬ್ಬರು ಮಹಾವೀರ ಚಕ್ರವನ್ನು ಪಡೆದಿದ್ದಾರೆ. ಸ್ಕ್ವಾ ಲೀ. ಅಜ್ಜಮಾಡ ದೇವಯ್ಯ ಅವರ ಬಲಿದಾನದ ಬಳಿಕ 23 ವರ್ಷಗಳ ನಂತರ ಮರಣೋತ್ತರವಾಗಿ ಅವರಿಗೆ ಮಹಾವೀರ ಚಕ್ರವನ್ನು 1988ರಲ್ಲಿ ಪ್ರದಾನ ಮಾಡಲಾಗಿತ್ತು. ಕೊಡಗಿನವರೇ ಆದ ಲೆ.ಜ.ಪುಟ್ಟಿಚಂಡ ಗಣಪತಿ ಅವರು ಇದೇ ಗೌರವವನ್ನು ಪಡೆದ ಮತ್ತೊಬ್ಬರಾಗಿದ್ದಾರೆ ಎಂದು ತಿಳಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ, ಡಿವೈಎಸ್‌ಪಿ ಪಿ.ಎ.ಸೂರಜ್, ಕೊಡಗು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ವಿಶೇಷ ಅಧಿಕಾರಿ ಪ್ರೊ.ಮೇಚಿರ ರವಿಶಂಕರ್ ನಾಣಯ್ಯ, ಕೊಡಗು ವಿದ್ಯಾಲಯ ಶಾಲೆಯ ಎನ್‌ಸಿಸಿ ಅಧಿಕಾರಿ ಮೇಜರ್ ದಾಮೋದರ್ ಗೌಡ ಐ., ಮಡಿಕೇರಿ ಕೊಡವ ಸಮಾಜದ ಆಡಳಿತ ಮಂಡಳಿ ಉಪಾಧ್ಯಕ್ಷ ಕೇಕಡ ವಿಜು ದೇವಯ್ಯ, ಕಾರ್ಯದರ್ಶಿ ಬೊಪ್ಪಂಡ ಸರಳ ಕರುಂಬಯ್ಯ, ಜಂಟಿ ಕಾರ್ಯದರ್ಶಿ ನಂದಿನೆರವಂಡ ದಿನೇಶ್, ನಿರ್ದೇಶಕರುಗಳಾದ ಮೂವೆರ ಜಯರಾಂ, ಶಾಂತೆಯಂಡ ವಿಶಾಲ್ ಕಾರ್ಯಪ್ಪ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯ ಚೊಟ್ಟೆಯಂಡ ಸಂಜು ಕಾವೇರಪ್ಪ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು, ಜಿಲ್ಲಾ ಸ್ಥಾನಿಕ ಆಯುಕ್ತ ಹೆಚ್.ಆರ್.ಮುತ್ತಪ್ಪ, ಕೊಡವ ಮಕ್ಕಡ ಕೂಟದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ಸಾಹಿತಿ ಬೊಜ್ಜಂಗಡ ಡಾ.ಅವನಿಜ ಸೋಮಯ್ಯ, ಅಜ್ಜಮಾಡ ಒಕ್ಕದ ಬೆಳ್ಯಪ್ಪ, ಅಜ್ಜಮಾಡ ಕಾರ್ಯಪ್ಪ, ಅಜ್ಜಮಾಡ ಬೋಪಯ್ಯ, ಅಜ್ಜಮಾಡ ಚಂಗಪ್ಪ, ಅಜ್ಜಮಾಡ ಮಂಜುನಾಥ್, ಮಹೇಶ್, ಅಜ್ಜಮಾಡ ಅಯ್ಯಣ್ಣ, ಅಜ್ಜಮಾಡ ಜಗತ್, ಅಜ್ಜಮಾಡ ಸುಮನ್, ಅಜ್ಜಮಾಡ ದೀಕ್ಷ, ಅಜ್ಜಮಾಡ ಅನಿಕಾ, ದಾನಿಗಳಾದ ಉಳ್ಳಿಯಡ ನಂದಾ ನಂಜಪ್ಪ, ಮಾದೇಟಿರ ಟಿ.ಪ್ರಕಾಶ್ ತಿಮ್ಮಯ್ಯ, ನಿವೃತ್ತ ಲೆ.ಕರ್ನಲ್ ಮುಲ್ಲೇರ ಕಾವೇರಪ್ಪ, ಮಾಜಿ ಸೈನಿಕರ ಸಂಘದ ಮಡಿಕೇರಿ ಅಧ್ಯಕ್ಷ ಪಾನಿಕುಟ್ಟಿರ ಕುಟ್ಟಪ್ಪ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಸುಬೇದಾರ್ ಮೇಜರ್ ನಾಟೋಳಂಡ ಸುರೇಶ್ ಸೋಮಯ್ಯ, ಮಾಜಿ ಸೈನಿಕರ ಸಂಘದ ಜಂಟಿ ಕಾರ್ಯದರ್ಶಿ ಸುಬೇದಾರ್ ಮೇಜರ್ ವಾಸಪ್ಪ, ಕುಟ್ಟಂಡ ನಂದ ಮಾದಪ್ಪ, ಮಾದೆಯಂಡ ಕೆ.ನಾಚಪ್ಪ, ಕನ್ನಂಡ ಸುರೇಶ್, ಕೂಪದಿರ ಮುತ್ತಣ್ಣ, ತೊತ್ತಿಯಂಡ ಗಣಪತಿ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಕೆ.ಎಂ.ಬಿ.ಗಣೇಶ್, ಸಮಾಜ ಸೇವಕ ಮಂಡೇಪAಡ ರತನ್ ಕುಟ್ಟಯ್ಯ, ಮಣವಟ್ಟಿರ ಚಿಣ್ಣಪ್ಪ, ನಾಪೋಕ್ಲು ಕೊಡವ ಸಮಾಜದ ಪ್ರಧಾನ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ, ಸೈನಿಕರ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ಆರ್.ಶೆಟ್ಟಿ, ಕೊಡವ ಮಕ್ಕಡ ಕೂಟದ ಸದಸ್ಯರು, ನಿವೃತ್ತ ಯೋಧರು, ಅಭಿಮಾನಿಗಳು, ಸೇರಿದಂತೆ ಅಜ್ಜಮಾಡ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅಯ್ಯಪ್ಪಗೆ ಉಡುಗೊರೆ:

ವೀರ ಸೇನಾನಿಯ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಪ್ರತಿವರ್ಷ ಅಚ್ಚುಕಟ್ಟಾಗಿ ಆಚರಿಸುವ ಮೂಲಕ ದೇಶಭಕ್ತಿ ಮತ್ತು ಸೇನಾ ಪರಂಪರೆಯ ಕುರಿತು ಯುವ ಸಮೂಹದಲ್ಲಿ ಸ್ಫೂರ್ತಿಯನ್ನು ತುಂಬುತ್ತಿರುವ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಕಾರ್ಯವನ್ನು ಶ್ಲಾಘಿಸಿ ನಿವೃತ್ತ ಏರ್ ಮಾರ್ಷಲ್ ಕೊಡಂದೇರ ನಂದಾ ಕಾರ್ಯಪ್ಪ ಅವರು ಏರ್ ಫೋರ್ಸ್ ಲಾಂಛನದ ಬ್ಯಾಡ್ಜ್ ನ್ನು ಉಡುಗೊರೆಯಾಗಿ ನೀಡಿ ಗೌರವಿಸಿದರು.