Kodagu

ಕೊಡಗು ವಿದ್ಯಾಲಯದಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ

admincoorgdaily

ಕೊಡಗು ವಿದ್ಯಾಲಯದಲ್ಲಿ  ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ
ಮಡಿಕೇರಿ, ಸೆಪ್ಟೆಂಬರ್ 10-: ಮಡಿಕೇರಿಯ ಕೊಡಗು ವಿದ್ಯಾಲಯದಲ್ಲಿ ಪ್ಲೇಹೋಮ್, ಕಿಂಡರ್‌ಗಾರ್ಟನ್ ಹಾಗೂ 1ನೇ ತರಗತಿಯ ಪುಟಾಣಿ ಮಕ್ಕಳು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು , ಸಡಗರದಿಂದ ಆಚರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ಮೊಣ್ಣಂಡ ಶೋಭಾ ಸುಬ್ಬಯ್ಯ, ಪ್ರಾಂಶುಪಾಲರಾದ ಸುಮಿತ್ರಾ ಕೆ.ಎಸ್., ಆಡಳಿತ ಮುಖ್ಯಸ್ಥರಾದ ರವಿ ಪಿ. ಹಾಗೂ ಸಂಯೋಜಕಿ ಭಾರತಿ ಕೆ.ಕೆ. ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ಲೇಹೋಮ್‌ನಿಂದ 1ನೇ ತರಗತಿಯವರೆಗಿನ ಮಕ್ಕಳು ಶ್ರೀಕೃಷ್ಣ ಹಾಗೂ ರಾಧೆಯ ವೇಷಭೂಷಣಗಳಲ್ಲಿ ಕಂಗೊಳಿಸಿ, ನೃತ್ಯ, ರ‍್ಯಾಂಪ್ ವಾಕ್ ಹಾಗೂ ಶ್ರೀಕೃಷ್ಣನ ಕುರಿತಾದ ಸುಮಧುರ ಗೀತೆಗಳ ಮೂಲಕ ಎಲ್ಲರ ಗಮನ ಸೆಳೆದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ ಕಾಳಿಂಗ ಮರ್ಧನದ ನೃತ್ಯ ಹಾಗೂ ಭಕ್ತ ಕನಕದಾಸರ ‘ಕನಕನ ಕಿಂಡಿ’ ಕುರಿತ ನಾಟಕವನ್ನು ಮಕ್ಕಳು ಮನೋಜ್ಞವಾಗಿ ಪ್ರದರ್ಶಿಸಿದರು. ಮುಖ್ಯ ಅತಿಥಿ ಮೊಣ್ಣಂಡ ಶೋಭಾ ಸುಬ್ಬಯ್ಯ, ಮಕ್ಕಳ ಪ್ರತಿಭೆಯನ್ನು ಶ್ಲಾಘಿಸಿ, ಶ್ರೀಕೃಷ್ಣ ಜನ್ಮಾಷ್ಟಮಿಯ ಮಹತ್ವ ಹಾಗೂ ಶ್ರೀಕೃಷ್ಣನ ಜೀವನ ಸಂದೇಶಗಳನ್ನು ವಿವರಿಸಿದರು.

ವಿದ್ಯಾರ್ಥಿಗಳಾದ ಗ್ರಹಿತ್, ಯುಧ್ವಿತಾ ಹಾಗೂ ಮೋಕ್ಷ್, ಶ್ಲೋಕ ಪಠಣದ ಮೂಲಕ ಗಮನ ಸೆಳೆದರು.   ವಿದ್ಯಾರ್ಥಿಗಳಾದ ಜಾನ್ವಿ ಸಿ. ಹಾಗೂ ಸಮವೇದ್ ಕೆ.ಎಸ್. ನಿರೂಪಿಸಿದರು. ರಿಯಾ ಜೈನ್ ಶ್ರೀಕೃಷ್ಣ ಜನ್ಮಾಷ್ಟಮಿಯ ಮಹತ್ವ ಕುರಿತು ಮಾತನಾಡಿದರು.

ಶಮಿಕ್ ಇಬ್ರಾಹಿಂ ಸ್ವಾಗತಿಸಿ, ಶಿಕ್ಷಕಿ ರಾಜೇಶ್ವರಿ ಮುಖ್ಯ ಅತಿಥಿಯ ಪರಿಚಯವನ್ನು ಮಾಡಿದರು.   ವಿದ್ಯರ್ಥಿನಿ ಬಿನಿಷಾ ಬೋಪಣ್ಣ ಎಂ. ವಂದಿಸಿದರು. ಪುಟಾಣಿ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು.