ಪೊನ್ನಂಪೇಟೆಯಲ್ಲಿ ಚೂರಿ ಇರಿತ;ಓರ್ವನಿಗೆ ಗಂಭೀರ ಗಾಯ,ಆಸ್ಪತ್ರೆಗೆ ದಾಖಲು
admincoorgdaily

ಪೊನ್ನಂಪೇಟೆ; ಮಧ್ಯದ ಅಂಗಡಿಯವೊಂದರಲ್ಲಿ ಪರಸ್ಪರ ಜಗಳ ಏರ್ಪಟ್ಟು ಓರ್ವನಿಗೆ ದೇಹದ ಆರು ಭಾಗಗಳಿಗೆ ಚೂರಿ ಇರತಕ್ಕೆ ಒಳಗಾದ ಘಟನೆ ಇಂದು ಸಂಜೆ ನಡೆದಿದೆ.
ದೀಪು (46) ಎಂಬುವನಿಗೆ ಗಂಭೀರ ಗಾಯಗೊಳಗಾಗಿ ಪ್ರಥಮ ಚಿಕಿತ್ಸೆ ಗೋಣಿಕೊಪ್ಪಲು ಆಸ್ಪತ್ರೆಯಲ್ಲಿ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಗೆ ರವಾನಿಸಲಾಗಿದೆ ಎಂದು ಹೇಳಲಾಗಿದೆ.
ಇಂದು ಸಂಜೆ ಮಧ್ಯದ ಅಂಗಡಿಯಲ್ಲಿ ಹರಿಹರ ಗ್ರಾಮದ ಎಂ.ಕಾಳಪ್ಪ ಹಾಗೂ ತುಚುಮಕೇರಿಯ ಸಿ.ದೀಪು ಎಂಬುವರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ಏರ್ಪಟ್ಟು, ಕಾಳಪ್ಪ ತನ್ನ ಬಳಿ ಇರಿಸಿಕೊಂಡಿದ್ದ ಚಾಕುವಿನಿಂದ ಸಿ.ದೀಪು ಎಂಬುವರ ಹಣೆ ಹೊಟ್ಟೆ,ತೋಳು ಹಾಗೂ ಬೆನ್ನಿನ ಭಾಗಕ್ಕೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ ಎಂದು ಹೇಳಲಾಗಿದೆ.
ಪೊಲೀಸರು ಪ್ರಕರಣದ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.