Kodagu

ಬೇತು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹಳೇ ವಿದ್ಯಾರ್ಥಿಯಿಂದ ಲೇಖನ ಸಾಮಗ್ರಿ ವಿತರಣೆ

admincoorgdaily

ಬೇತು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹಳೇ ವಿದ್ಯಾರ್ಥಿಯಿಂದ ಲೇಖನ ಸಾಮಗ್ರಿ ವಿತರಣೆ
ವರದಿ :ಝಕರಿಯ ನಾಪೋಕ್ಲು 

ನಾಪೋಕ್ಲು :ನಾಪೋಕ್ಲು ಬಳಿಯ ಬೇತು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ  ಶಾಲೆಯ ಹಳೇ ವಿದ್ಯಾರ್ಥಿ ಕೆ.ವಿ.ರವಿ ಓಂಕಾರ್ ಅವರು ನೋಟು ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ಕೊಡುಗೆಯಾಗಿ ವಿತರಿಸಿದರು.

ಈ ಸಂದರ್ಭ ಶಾಲೆಯ ಮುಖ್ಯಶಿಕ್ಷಕಿ ಬಿ.ಪಿ.ಮಮತ, ಸಹ ಶಿಕ್ಷಕಿ ಬಿ.ಬಿ.ಸಾವಿತ್ರಿ,ಫ್ರೆಂಡ್ಸ್ ಗ್ರೂಪ್ ನ ಮೋನಿಷ್, ಶ್ರೀಧರ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.