Kodagu

ಸುಂಟಿಕೊಪ್ಪ:ಬಸ್ ಡಿಕ್ಕಿ, ಬಾಲಕಿ ಮೃತ್ಯು

admincoorgdaily

ಸುಂಟಿಕೊಪ್ಪ:ಬಸ್ ಡಿಕ್ಕಿ, ಬಾಲಕಿ ಮೃತ್ಯು
ಸುಂಟಿಕೊಪ್ಪ:
KSRTC ಬಸ್ ಡಿಕ್ಕಿಯಾಗಿ ಅಸ್ಸಾಂ ಮೂಲದ ಕಾರ್ಮಿಕ ದಂಪತಿಯ 7ವರ್ಷ ಪ್ರಾಯದ ಪುತ್ರಿ ಜೀವ ತೆತ್ತಿರುವ ಘಟನೆ 
ಇಂದು ಬೆಳಿಗ್ಗೆ 11.45 ರ ಸಮಯದಲ್ಲಿ ಸುಂಟಿಕೊಪ್ಪ KEB ಸಮೀಪದಲ್ಲಿ ನಡೆದಿದೆ.

ಮೂಲತಃ ಅಸ್ಸಾಂ ರಾಜ್ಯದವರಾಗಿರುವ ಸಿರಾಜು ರೆಹಮಾನ್ ಮತ್ತು ಜಹನಾರ್ ದಂಪತಿ ಕೂಲಿ ಕೆಲಸಕ್ಕಾಗಿ ಬಂದವರು ಸುಂಟಿಕೊಪ್ಪ ಹೊಸ ಬಡಾವಣೆಯಲ್ಲಿ ನೆಲೆಸಿದ್ದರು. ಇಂದು ಬೆಳಿಗ್ಗೆ 11.45 ರ ಸಮಯದಲ್ಲಿ ಹೆದ್ದಾರಿ ಬದಿಯ ಅಂಗಡಿಯಿಂದ ಮಿಠಾಯಿ ಖರೀದಿಸಿದ್ದಾಳೆ. ನಂತರ ರಸ್ತೆ ದಾಟುಲೆಂದು ಒಂದೆರಡು ಹೆಜ್ಜೆ ಹಾಕುತ್ತಿದ್ದ ಸಂದರ್ಭ 
ಕುಕ್ಕೆ ಸುಬ್ರಮಣ್ಯ ಕಡೆಗೆ ತೆರಳುತ್ತಿದ್ದ KSRTC ಬಸ್  ಬಾಲಕಿಗೆ ಡಿಕ್ಕಿಯಾಗಿದೆ. ಕೂಡಲೇ ಸ್ಥಳೀಯರು ಮತ್ತು ಪೊಲೀಸ್ ಸಿಬ್ಬಂದಿಗಳು ಗಾಯಗೊಂಡ  ಬಾಲಕಿಯನ್ನು ಸುಂಟಿಕೊಪ್ಪ ಸರಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆ ಮಡಿಕೇರಿಗೆ ಆಂಬುಲೆನ್ಸ್ ಮೂಲಕ ಸಾಗಿಸುತ್ತಿದ್ದಾಗ, ಇನ್ನೇನು ಆಸ್ಪತ್ರೆ ತಲುಪಬೇಕೆನ್ನುವಷ್ಟರಲ್ಲಿ ಬಾಲಕಿಯ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಬಸ್ ಚಾಲಕನ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗಿದೆ.