Kodagu

ಸುಂಟಿಕೊಪ್ಪ: ಅಪಾಯಕಾರಿ ರೀಲ್ ಚಿತ್ರೀಕರಣ - ವಾಹನ ಮಾಲೀಕನಿಗೆ 2 ಸಾವಿರ ದಂಡ

admincoorgdaily

ಸುಂಟಿಕೊಪ್ಪ: ಅಪಾಯಕಾರಿ ರೀಲ್ ಚಿತ್ರೀಕರಣ - ವಾಹನ ಮಾಲೀಕನಿಗೆ 2 ಸಾವಿರ ದಂಡ
ಸುಂಟಿಕೊಪ್ಪ: ಕೊಡಗು ಜಿಲ್ಲೆಯ ಕೆದಕಲ್ ಬಳಿ ಚಲಿಸುತ್ತಿದ್ದ ವಾಹನದ ಎರಡು ಬದಿಯ ಬಾಗಿಲಿನಿಂದ ದೇಹ ಹೊರಹಾಕಿ ರೀಲ್‌ಗಾಗಿ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ದೃಶ್ಯ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಪೊಲೀಸರು ಪ್ರಕರಣ ಪತ್ತೆ ಹಚ್ಚಿ 2,000 ರೂ. ದಂಡ ವಿಧಿಸಿದ್ದಾರೆ.

ಕೊಡಗು ಜಿಲ್ಲಾ ಪೊಲೀಸ್ ಹಾಗೂ ಸುಂಟಿಕೊಪ್ಪ ಪೊಲೀಸ್ ಠಾಣೆ ವತಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. KA45 M 3607 ನಂಬರಿನ ವಾಹನದಲ್ಲಿ ಈ ರೀತಿ ಅಪಾಯಕಾರಿ ಚಿತ್ರೀಕರಣ ನಡೆಸಲಾಗಿತ್ತು.