Sports News

ಸುಂಟಿಕೊಪ್ಪ: ದಸರಾ ಕ್ರಿಕೆಟ್ ಪಂದ್ಯಾವಳಿ, ಟೀಮ್ ಅರ್ಜುನ ನೂತನ ಸಮಿತಿ ರಚನೆ

admincoorgdaily

ಸುಂಟಿಕೊಪ್ಪ: ದಸರಾ ಕ್ರಿಕೆಟ್ ಪಂದ್ಯಾವಳಿ, ಟೀಮ್ ಅರ್ಜುನ ನೂತನ ಸಮಿತಿ ರಚನೆ
ಸುಂಟಿಕೊಪ್ಪ (ಕೂರ್ಗ್ ಡೈಲಿ): ದಸರಾ ಪ್ರಯುಕ್ತ ಟೀಮ್ ಅರ್ಜುನ ಆಯೋಜಿಸುತ್ತಿರುವ ಪ್ರಥಮ ವರ್ಷದ ಕ್ರಿಕೆಟ್ ಪಂದ್ಯಾವಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಅಧ್ಯಕ್ಷರಾಗಿ ಮಹಮ್ಮದ್ ಆಲಿ ಕೆ.ಎ. ಉಪಾಧ್ಯಕ್ಷರಾಗಿ ಹರ್ಷತ್, ಪ್ರಧಾನ ಕಾರ್ಯದರ್ಶಿಯಾಗಿ ಶಿವರಾಜು (ಜೂಚು), ಸಹ ಕಾರ್ಯದರ್ಶಿಯಾಗಿ ಅಯ್ಯಪ್ಪ, ಖಜಾಂಜಿಯಾಗಿ ಸಚಿನ್ ಸಿ.ಎ., ಸಹ ಖಜಾಂಜಿಯಾಗಿ ಪ್ರವೀಣ್ ಆಯ್ಕೆಯಾಗಿದ್ದಾರೆ.

ಕ್ರೀಡಾ ಕಾರ್ಯದರ್ಶಿಗಳಾಗಿ ಸಂಶಾದ್, ಕೇಶವ, ಮೈದಾನದ ಉಸ್ತುವಾರಿಗಳಾಗಿ ಪ್ರಜ್ವಲ್, ಸ್ವಾಮಿ, ಅವಿನಾಶ್, ವೇದಿಕೆ ಅಲಂಕಾರದ ಉಸ್ತುವಾರಿಗಳಾಗಿ ಇಬ್ರಾಹಿಂ, ಜಗತ್ (ಚಿಟ್ಟೆ), ದರ್ಶನ್, ಆರಿಫ್ ಅವರನ್ನು ನೇಮಿಸಲಾಗಿದೆ. ಸಲಹೆಗಾರರಾಗಿ ಜಸ್ಟಿನ್, ಈಶ್ವರ್, ಪ್ರಶಾಂತ್ (ಗೋಪು), ಪ್ರವೀಣ್ (ತೋಕು) ಹಾಗೂ ಸದಸ್ಯರಾಗಿ ನವೀನ, ಅಭಿ, ಕೃತಿಕ್, ಸಚಿನ್, ಸಹದ್, ವಿಪಿನ್ (ಕುಟ್ಟ) ಕಾರ್ಯನಿರ್ವಹಿಸಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಶಿವರಾಜು (ಜೂಚು) ತಿಳಿಸಿದ್ದಾರೆ.