Kodagu

ಸುಂಟಿಕೊಪ್ಪ ವಾಹನ ಚಾಲಕರ ಸಂಘದಿಂದ ಅದ್ಧೂರಿಯ ಆಯುಧ ಪೂಜೆ ಸಮಾರಂಭ

admincoorgdaily

ಸುಂಟಿಕೊಪ್ಪ ವಾಹನ ಚಾಲಕರ ಸಂಘದಿಂದ ಅದ್ಧೂರಿಯ ಆಯುಧ ಪೂಜೆ ಸಮಾರಂಭ
ಸುಂಟಿಕೊಪ್ಪ; ವಾಹನ ಚಾಲಕರ ಸಂಘದಿಂದ ಮಂಗಳವಾರ ಅದ್ದೂರಿಯಿಂದ ಆಯುಧ ಪೂಜೆಯನ್ನು ಆಚರಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಡಾ: ಮಂತರ್ ಗೌಡರವರು 
ವಾಹನ ನಿಲ್ದಾಣಕ್ಕೆ ಮೇಲ್ಚಾವಣಿ ನಿರ್ಮಿಸುವ ಕಾಮಗಾರಿ  ಪ್ರಗತಿಯಲ್ಲಿದ್ದು ಕೆಲವು ತಾಂತ್ರಿಕ ಕಾರಣಗಳನ್ನು ಸರಿಪಡಿಸಿಕೊಂಡು ಶೀಘ್ರದಲ್ಲೇ ಲೋಕಾರ್ಪಣೆ ಮಾಡಿಲಾಗುವುದು ಎಂದರು.

ಈಗಾಗಲೇ ಮೇಲ್ಚಾವಣಿ ಕಾಮಗಾರಿಯು ರೂ.40 ಲಕ್ಷ ವೆಚ್ಚದಲ್ಲಿ ಆರಂಭಿಕ ಹಂತದಲ್ಲಿದ್ದು, ಇನ್ನೂ ಹೆಚ್ಚು ಅನುದಾನ ಬೇಕಾಗುವ ನಿರೀಕ್ಷೆ ಇದೆ. ಈ ಅನುದಾನವನ್ನು ತಾನು ಭರಿಸುವುದಾಗಿ ಹೇಳಿದ ಅವರು ಕಾಮಗಾರಿಯನ್ನು ಆದಷ್ಟು ಶೀಘ್ರವಾಗಿ ಮುಕ್ತಾಯ ಗೊಳಿಸಲು ಕ್ರಮ ವಹಿಸಲಾಗುವುದು ಎಂದರು. 
ಸಮಾರಂಭವನ್ನು ಉದ್ಘಾಟಿಸಿದ  ಕೊಡಗು ಜಿಲ್ಲಾಡಳಿತದ ಕಾನೂನು ಸಲಹೆಗಾರರಾದ ಎ. ಲೋಕೇಶ್‌ಕುಮಾರ್,  
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್, 
ಜಿ.ಪಂ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಮಾಜಿ ಸದಸ್ಯರುಗಳಾದ ಪಿ.ಎಂ. ಲತೀಫ್, ಬಿ.ಬಿ. ಭಾರತೀಶ್, ಗ್ರಾ. ಪಂ.ಮಾಜಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್, ಉದ್ಯಮಿ ಎಡಿಕೇರಿ 
ಪ್ರಸನ್ನ ಹಾಗೂ ಇತರೆ ಗಣ್ಯರು
ಮಾತನಾಡಿದರು.
ವೇದಿಕೆಯಲ್ಲಿ ಉದ್ಯಮಿಗಳಾದ ಆಶಾ ಟೋಮಿ,  ವಿಲಿಯಂ, , ವಿ. ಎಸ್.ಎಸ್.ಎನ್. ಬ್ಯಾಂಕ್ ಅಧ್ಯಕ್ಷ ಜೆರ್ಮಿ ಡಿಸೋಜ,   ಸಂಘದ ಅಧ್ಯಕ್ಷ ಕೆ.ವಿ. ಕಿಟ್ಟಣ್ಣ ರೈ, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎ.ಎಂ. ಶರೀಫ್ ಮತ್ತಿತರರು ಇದ್ದರು. 

ಸಭಾ ಕಾರ್ಯಕ್ರಮದ ಮೊದಲಿಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು  
 ವಿ. ಎಸ್.ಎಸ್.ಎಸ್.ಎನ್. ಬ್ಯಾಂಕ್ ಉಪಾಧ್ಯಕ್ಷ ಪಟ್ಟೆಮನೆ ಉದಯಕುಮಾರ್, ಕೆದಕಲ್ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಸಂಜು ಪೊನ್ನಪ್ಪ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಡಾ.ಮಂತರ್‌ಗೌಡರವರನ್ನು   ಸಂಘದ ಅಧ್ಯಕ್ಷ ಕೆ.ವಿ. ಕಿಟ್ಟಣ್ಣ ರೈ ಹಾಗೂ  ಪದಾಧಿಕಾರಿಗಳು ಶಾಲುಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು. 

ಸಮಾರಂಭದಲ್ಲಿ ಶಾಸಕ ಡಾ: ಮಂತರ್ ಗೌಡರವರು ಚಲನಚಿತ್ರ ನಿರ್ದೇಶಕಿ  ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ರೋಶ್ನಿ ರಾಂಪುರಂ (ಗುರುಮ) ರವರನ್ನು ಸನ್ಮಾನಿಸಿ ಗೌರವಿಸಿದರು. 
ದಿನದ ಅಂಗವಾಗಿ ನೃತ್ಯ ಮತ್ತು ರಸ ಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.