ಸೆ.29 ಮತ್ತು 30ರಂದು ಕೊಟ್ಟಮುಡಿಯ ಟರ್ಫ್ ಮೈದಾನದಲ್ಲಿ ಸೂಪರ್8 ಕ್ರಿಕೆಟ್ ಟೂರ್ನಿ
admincoorgdaily

ಮಡಿಕೇರಿ: ಕೊಟ್ಟಮುಡಿಯ ಸ್ಕೋರರ್ಸ್ 360 ಸ್ಪೋರ್ಟ್ಸ್ ಅರೇನಾ ಟರ್ಫ್ ಮೈದಾನದಲ್ಲಿ ಸೂಪರ್ 8ಸ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದೆ.
ಸೆಪ್ಟೆಂಬರ್ 29 ಮತ್ತು 30 ರಂದು ನಡೆಯಲಿರುವ ಈ ಟೂರ್ನಿಯಲ್ಲಿ 4 ಓವರ್ ಪಂದ್ಯ ನಡೆಯಲಿದೆ. ಪ್ರಥಮ ಬಹುಮಾನ 20,000 ರೂ. ಹಾಗೂ ಟ್ರೋಫಿ, ದ್ವಿತೀಯ ಬಹುಮಾನ 10,000 ರೂ. ಹಾಗೂ ಟ್ರೋಫಿ ನೀಡಲಾಗುವುದು.
ಗ್ರೌಂಡ್ ಫೀಸ್ 3,000 ರೂ. ಇದ್ದು, ಮುಂಗಡವಾಗಿ 1,000 ರೂ. ಪಾವತಿಸಬೇಕು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 7337753956 / 8553641671