Kodagu

ಸೂರ್ಲಬ್ಬಿ ಅಪ್ರಾಪ್ತೆ ಹತ್ಯೆ ಪ್ರಕರಣ: ಅಪರಾಧಿ ಪ್ರಕಾಶ್‌ಗೆ ಮರಣದಂಡನೆ

admincoorgdaily

ಸೂರ್ಲಬ್ಬಿ ಅಪ್ರಾಪ್ತೆ ಹತ್ಯೆ ಪ್ರಕರಣ: ಅಪರಾಧಿ ಪ್ರಕಾಶ್‌ಗೆ ಮರಣದಂಡನೆ
ಮಡಿಕೇರಿ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಸೂರ್ಲಬ್ಬಿ ಅಪ್ರಾಪ್ತ ಬಾಲಕಿ ಹತ್ಯೆ ಪ್ರಕರಣದಲ್ಲಿ ಓಂಕಾರಪ್ಪ ಅಲಿಯಾಸ್ ಪ್ರಕಾಶ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿ ಮಡಿಕೇರಿಯ ಮೂರನೇ ಅಪರ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

2024ರ ಮೇ 9ರಂದು ಸೂರ್ಲಬ್ಬಿ ಗ್ರಾಮದಲ್ಲಿ ಈ ಭೀಭತ್ಸ ಹತ್ಯೆ ನಡೆದಿತ್ತು. ತಾನು ಪ್ರೀತಿಸುತ್ತಿದ್ದ ಅಪ್ರಾಪ್ತ ಬಾಲಕಿಯ ತಲೆ ಕಡಿದು ಹತ್ಯೆ ಮಾಡಿದ್ದ ಆರೋಪ ಪ್ರಕಾಶ್ ಮೇಲೆ ಇತ್ತು.

ಘಟನೆ ನಡೆದು ಎರಡು ವರ್ಷ ಆರು ತಿಂಗಳ ಬಳಿಕ ಶಿಕ್ಷೆ ಪ್ರಕಟವಾಗಿದೆ. ಮೂರನೇ ಅಪರ ಜಿಲ್ಲಾ ಮತ್ತು ಸತ್ರ ಸ್ಪೆಷಲ್ ಕೋರ್ಟ್ ನ್ಯಾಯಾಧೀಶರು ಮಹತ್ತರ ತೀರ್ಪು ಪ್ರಕಟಿಸಿದ್ದಾರೆ.