Kodagu

ಸ್ವಸ್ತಿಕ್ ಯುವ ವೇದಿಕೆಯ 25ನೇ ವರ್ಷದ ಬೆಳ್ಳಿಮಹೋತ್ಸವ: ನೂತನ ಪದಾಧಿಕಾರಿಗಳ ಆಯ್ಕೆ

admincoorgdaily

ಸ್ವಸ್ತಿಕ್ ಯುವ ವೇದಿಕೆಯ 25ನೇ ವರ್ಷದ ಬೆಳ್ಳಿಮಹೋತ್ಸವ: ನೂತನ ಪದಾಧಿಕಾರಿಗಳ ಆಯ್ಕೆ
ಮಡಿಕೇರಿ: ನಗರದ ಬನ್ನಿಮಂಟಪ ರಥಬೀದಿಯ ಸ್ವಸ್ತಿಕ್ ಯುವ ವೇದಿಕೆ 25ನೇ ವರ್ಷದ ಬೆಳ್ಳಿಮಹೋತ್ಸವ ಸಂಭ್ರಮದ ಅಂಗವಾಗಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ವೇದಿಕೆಯ ಅಧ್ಯಕ್ಷರಾಗಿ ಅಂಚೆಮನೆ ಸತೀಶ್ ಕುಟ್ಟಪ್ಪ, ಉಪಾಧ್ಯಕ್ಷರಾಗಿ ಶಿವರಾಜ್ ಹೆಚ್.ಓ., ಪ್ರಧಾನ ಕಾರ್ಯದರ್ಶಿಯಾಗಿ ಸೋನಾಲ್ ಪೂಜಾರಿ ಹಾಗೂ ಖಜಾಂಜಿಯಾಗಿ ಆದಿತ್ಯ ಟಿ.ಡಿ. ಆಯ್ಕೆಯಾಗಿದ್ದಾರೆ.
ಅಲಂಕಾರ ಸಮಿತಿಗೆ ಗಣೇಶ್ ಹೆಚ್.ಪಿ. ಮತ್ತು ಪುನೀತ್ ಭೀಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಗೌರವ ಅಧ್ಯಕ್ಷರಾಗಿ ಸವಿತಾ ರಾಕೇಶ್ ಬಸವರಾಜ್ ಹಾಗೂ ಖಲೀಲ್ ಭಾಷಾ ಅವರು ಆಯ್ಕೆಯಾಗಿದ್ದಾರೆ.

ಸ್ವಸ್ತಿಕ್ ಯುವ ವೇದಿಕೆಯು ಕಳೆದ 25 ವರ್ಷಗಳಿಂದ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಡಿಕೇರಿ ನಗರದಲ್ಲಿ ತನ್ನದೇ ಆದ ಸೇವಾ ಗುರುತನ್ನು ಮೂಡಿಸಿದ್ದು, ಬೆಳ್ಳಿಮಹೋತ್ಸವ ವರ್ಷವನ್ನು ವಿಶೇಷ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ಪದಾಧಿಕಾರಿಗಳು ನಿರ್ಧರಿಸಿದ್ದಾರೆ.