Kodagu

ವಿರಾಜಪೇಟೆಯಲ್ಲಿ ನ.27ರಂದು ಎಸ್‌ವೈಎಸ್ ಅಸ್ಸುನ್ನ -ತಾತ್ವಿಕ ಸಮ್ಮೇಳನ ಹಾಗೂ ಸಯ್ಯಿದ್ ಅಲಿ ಬಾಫಖೀ ತಂಙಳ್ ಸಂಸ್ಮರಣೆ

admincoorgdaily

ವಿರಾಜಪೇಟೆಯಲ್ಲಿ ನ.27ರಂದು ಎಸ್‌ವೈಎಸ್ ಅಸ್ಸುನ್ನ -ತಾತ್ವಿಕ ಸಮ್ಮೇಳನ ಹಾಗೂ ಸಯ್ಯಿದ್ ಅಲಿ ಬಾಫಖೀ ತಂಙಳ್ ಸಂಸ್ಮರಣೆ
ನಾಪೋಕ್ಲು :ಸುನ್ನಿ ಯುವಜನ ಸಂಘ (ಎಸ್‌ವೈಎಸ್)ವಿರಾಜಪೇಟೆ ಝೋನ್ ಸಮಿತಿಯ ವತಿಯಿಂದ ಅಸ್ಸುನ್ನ ತಾತ್ವಿಕ ಸಮ್ಮೇಳನ ಹಾಗೂ ಸಯ್ಯಿದ್ ಅಲಿ ಬಾಫಖೀ ತಂಙಳ್ ಸಂಸ್ಮರಣೆ ಕಾರ್ಯಕ್ರಮವು ನವೆಂಬರ್ 27ರಂದು ಶುಕ್ರವಾರ ಸಂಜೆ ವಿರಾಜಪೇಟೆ ಪೊಲೀಸ್ ಠಾಣೆಯ ಸಮೀಪದಲ್ಲಿರುವ ಸೀನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ಅಂದು ಸಂಜೆ 6.30ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಪ್ರಖ್ಯಾತ ವಾಗ್ಮಿ ಅಬ್ದುಲ್ ವಹ್ಹಾಬ್ ಸಖಾಫಿ ಮಂಬಾಡ್ ಭಾಗವಹಿಸಿ ಧಾರ್ಮಿಕ ಪ್ರಭಾಷಣ ಮಾಡಲಿದ್ದಾರೆ.

ಸಯ್ಯಿದ್ ಮಹ್ದಿ ಅಹ್ಮದ್ ಅಲ್ ಬುಖಾರಿ ಅವರು ಪ್ರಾರ್ಥನೆಗೆ ನೇತೃತ್ವ ವಹಿಸಲಿದ್ದಾರೆ.

ಎಸ್‌ವೈಎಸ್ ವಿರಾಜಪೇಟೆ ಝೋನ್ ಅಧ್ಯಕ್ಷ ಹಂಝ ಮದನಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಶೈಖುನಾ ಅಶ್ರಫ್ ಅಹ್ಸನಿ ಉದ್ಘಾಟಿಸಲಿದ್ದಾರೆ.

ಈ ತಾತ್ವಿಕ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಎಸ್‌ವೈಎಸ್ ವಿರಾಜಪೇಟೆ ಝೋನ್ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಶಿಹಾಬ್ ತಂಙಳ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.