Kodagu

ಮೇಕೇರಿಯಲ್ಲಿ ಯಶಸ್ವಿಯಾಗಿ ನಡೆದ ಎಸ್‌ವೈಎಸ್ ಇಸಾಬ ಝ್ವೆಕ್ ಟ್ರೈನಿಂಗ್ ಕ್ಯಾಂಪ್

admincoorgdaily

ಮೇಕೇರಿಯಲ್ಲಿ ಯಶಸ್ವಿಯಾಗಿ ನಡೆದ ಎಸ್‌ವೈಎಸ್ ಇಸಾಬ ಝ್ವೆಕ್ ಟ್ರೈನಿಂಗ್ ಕ್ಯಾಂಪ್
ನಾಪೋಕ್ಲು :ಸುನ್ನಿ ಯುವಜನ ಸಂಘ (ಎಸ್‌ವೈಎಸ್) ಜಿಲ್ಲಾ ಸಮಿತಿಯ ಸಾಂತ್ವನ ವಿಭಾಗವಾದ ಇಸಾಬ ವತಿಯಿಂದ ಮೇಕೇರಿಯಲ್ಲಿ ಝ್ವೆಕ್ ಟ್ರೈನಿಂಗ್ ಕ್ಯಾಂಪ್ ಯಶಸ್ವಿಯಾಗಿ ನಡೆಯಿತು.

ಮೇಕೇರಿಯ ಕಾವೇರಿ ಖಾಸಗಿ ಹೋಂಸ್ಟೇಯಲ್ಲಿ ಎಸ್‌ವೈಎಸ್ ಜಿಲ್ಲಾಧ್ಯಕ್ಷ ಮುನೀರ್ ಮಹ್ಳರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಂಪ್‌ ಅನ್ನು ರಾಜ್ಯ ಕಾರ್ಯದರ್ಶಿ ಅಹ್ಮದ್ ಮದನಿ ಗುಂಡಿಕೆರೆ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ರಾಜ್ಯ ಇಸಾಬ ಉಪಾಧ್ಯಕ್ಷ ಖಲೀಲ್ ಮಾಲಿಕಿ ಮಂಗಳೂರು ಅವರು ಸಾಂತ್ವನದ ಮಹತ್ವ ಹಾಗೂ ಸಾಧ್ಯತೆಗಳ ಕುರಿತು ಮಾತನಾಡಿದರು. ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಸಿದ್ದೀಖ್ ಗೂನಡ್ಕ ಅವರು ಅಪಘಾತ ಹಾಗೂ ಆಘಾತದ ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆಯ ಕುರಿತು ಪ್ರಾಯೋಗಿಕ ತರಬೇತಿ ನೀಡಿದರು. 

ಸಯ್ಯಿದ್ ಮಹ್ದೀ ಅಹ್ಮದ್ ಅಲ್ ಬುಖಾರಿ ಅವರು ಆಶೀರ್ವಚನ ನೀಡಿ, ಸಮಾರೋಪ ದುಆ ನೆರವೇರಿಸಿದರು.
ಇಸಾಬ ತಂಡದ ಸದಸ್ಯರಿಗೆ ಹಗ್ಗಜಗ್ಗಾಟ, ಭಾರದ ಗುಂಡು ಎಸೆತ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

 ಹಗ್ಗಜಗ್ಗಾಟದಲ್ಲಿ ಮಡಿಕೇರಿ ಸರ್ಕಲ್ ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ಗಳಿಸಿದರೆ, ವಿರಾಜಪೇಟೆ ಸರ್ಕಲ್ ದ್ವಿತೀಯ ಹಾಗೂ ಪಾಲಿಬೆಟ್ಟ ಸರ್ಕಲ್ ತೃತೀಯ ಸ್ಥಾನ ಪಡೆದುಕೊಂಡಿತು.

ಕಾರ್ಯಕ್ರಮದಲ್ಲಿ ಮೇಕೇರಿ ಕಾವೇರಿ ಹೋಂಸ್ಟೇ ಮಾಲೀಕ ಪ್ರಕಾಶ್, ಎಸ್‌ಜೆಎಂ ಜಿಲ್ಲಾಧ್ಯಕ್ಷ ಅಬ್ದುಲ್ಲ ಸಖಾಫಿ ಕೊಳಕೇರಿ, ಕಾರ್ಯದರ್ಶಿ ಶಂಸುದ್ದೀನ್ ಅಮ್ಜದಿ, ಎಸ್ ವೈಎಸ್ ಪ್ರಧಾನ ಕಾರ್ಯದರ್ಶಿ ಯಾಕೂಬ್, ಕೋಶಾಧಿಕಾರಿ ಶರೀಫ್,ಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷ ಖಮರುದ್ದೀನ್ ಅನ್ವಾರಿ ಸಖಾಫಿ, ಇಸಾಬ ಉಪಾಧ್ಯಕ್ಷ ಝುಬೈರ್ ಕೂಡಿಗೆ, ಕಾರ್ಯದರ್ಶಿ ಬಶೀರ್ ಕೊಟ್ಟಮುಡಿ, ರಫೀಖ್ ಖಾನ್ ಮೇಕೇರಿ, ಶಾದುಲಿ ಹಾಜಿ ಎಮ್ಮೆಮಾಡು ಸೇರಿದಂತೆ ಎಸ್‌ವೈಎಸ್ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಮತ್ತಿತರರು ಹಲವರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಎಸ್‌ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಕೂಬ್ ಕೊಳಕೇರಿ ಸ್ವಾಗತಿಸಿ, ಕೋಶಾಧಿಕಾರಿ ಶರೀಫ್ ಹೊಸತೋಟ ವಂದಿಸಿದರು.