ತಾಮರ ರೆಸಾರ್ಟ್ ನಿಂದ ಕುಂಜಿಲ ಕೆ.ಪಿ ಬಾಣೆ ಸರಕಾರಿ ಶಾಲೆಗೆ ವಾಟರ್ ಫಿಲ್ಟರ್ ಕೊಡುಗೆ
admincoorgdaily

ನಾಪೋಕ್ಲು :ಕಕ್ಕಬೆ ಸಮೀಪದ ಕುಂಜಿಲ ಗ್ರಾಮದ ಕೆ ಪಿ ಬಾಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತಾಮರ ರೆಸಾರ್ಟ್ ವತಿಯಿಂದ ವಾಟರ್ ಫಿಲ್ಟರ್ ಕೊಡುಗೆ ಯಾಗಿ ನೀಡಲಾಯಿತು.
ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ತಾಮರ ರೆಸಾರ್ಟ್ ನ ವ್ಯವಸ್ಥಾಪಕರಾದ ಕಲ್ಯಾಟಂಡ ಗಿರೀಶ್ ಅವರ ನೇತೃತ್ವದಲ್ಲಿ ಶಾಲೆಗೆ ವಾಟರ್ ಫಿಲ್ಟರ್ ಕೊಡುಗೆಯಾಗಿ ನೀಡಿದರು.ತಾಮರ ರೆಸಾರ್ಟ್ ನವರ ಉದಾರ ಸೇವೆಗೆ ಶಾಲೆಯ ಶಿಕ್ಷಕರ ಹಾಗೂ ಎಸ್ ಡಿಎಂಸಿ ಪರವಾಗಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಸವಿತ ಅವರು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭ ರೆಸಾರ್ಟ್ ನ ವ್ಯವಸ್ಥಾಪಕರಾದ ಕಲ್ಯಾಟಂಡ ಗಿರೀಶ್, ಶಾಲೆಯ ಶಿಕ್ಷಕ ವೃಂದ, ರೆಸಾರ್ಟ್ ನ ಸಿಬ್ಬಂದಿಗಳು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.