Kodagu

ವಿನಾಯಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

admincoorgdaily

ವಿನಾಯಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
ವಿರಾಜಪೇಟೆ:
 ವಿರಾಜಪೇಟೆ ಪಟ್ಟಣದ ವಿನಾಯಕ್  ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವು ಜರುಗಿತು.ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರಾದ ಜಯಕುಮಾರಿಯವರು ದೀಪ ಬೆಳಗಿಸುವ ಮೂಲಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು  ಪ್ರಾರಂಭಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು,
 ಶಿಕ್ಷಕರ ದಿನಾಚರಣೆ ಮತ್ತು ಶಿಕ್ಷಕರ ಮಹತ್ವದ ಕುರಿತು ನಮ್ಮ ದೇಶದ ಖ್ಯಾತ ಶಿಕ್ಷಣ ತಜ್ಞ ಡಾ .ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವಾದ ಸೆಪ್ಟಂಬರ್ ಐದರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತೇವೆ .ಶಿಕ್ಷಕರು ನಮ್ಮ ಜೀವನದ ದೀಪ ಸ್ತಂಭದಂತವರು. ಜೀವನದ ಮೌಲ್ಯ ನಮ್ಮಲ್ಲಿ ಜ್ಞಾನ ಶಿಸ್ತು ಆತ್ಮವಿಶ್ವಾಸ ಉತ್ತಮ ಮಾನವೀಯ ಗುಣಗಳು ಹಾಗೂ ಸಂವಿಧಾನಿಕ ತತ್ವಗಳನ್ನು ಕಲಿಸುವಲ್ಲಿ ಶಿಕ್ಷಕರು ನಿರಂತರವಾಗಿ ಶ್ರಮಿಸುತ್ತಾರೆ. ಶಿಕ್ಷಕರಿಗೆ ಗೌರವ ನೀಡಬೇಕು. ಕಲಿಕೆಯಲ್ಲಿ ಶ್ರದ್ಧೆ ತೋರಿ ಒಳ್ಳೆಯ ವಿದ್ಯಾರ್ಥಿಗಳಾಗಿ ನಡೆದುಕೊಳ್ಳುವುದೇ ಅವರಿಗೆ ನೀಡುವ ಅತ್ಯುತ್ತಮ ಉಡುಗೊರೆ ಎಂದು ತಿಳಿಸಿದರು.

 ಶಾಲೆಯ ಶಿಕ್ಷಕ ವೃಂದದವರಿಗೆ ಹೂಗುಚ್ಚ ಸಿಹಿಯನ್ನು ನೀಡಿ ವೇದಿಕೆಗೆ ಗೌರವಪೂರ್ವಕವಾಗಿ ಸ್ವಾಗತಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಶಿಕ್ಷಕಿಯರಿಗೆ ಆಟೊಟ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು.
 ಕಾರ್ಯಕ್ರಮದಲ್ಲಿ  ಮುಖ್ಯೋಪಾಧ್ಯಾಯನಿಯ ರು, ಶಿಕ್ಷಕಿಯರು ,ಪೋಷಕರು, ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
 ನಮಿತಾ ಪಿ ಡಿ ನಿರೂಪಿಸಿ, ಹಸೀಬ ಎಂ ಯು ಸ್ವಾಗತಿಸಿ, ಅಸಿಮ್ ಕೆ ಎಚ್ ವಂದಿಸಿದರು.