ಕುಶಾಲನಗರ ಆನೆಕಾಡು ಬಳಿ ಭೀಕರ ರಸ್ತೆ ಅಪಘಾತ ; ಇಬ್ಬರ ಸಾವು, ಹಲವರು ಗಂಭೀರ
admincoorgdaily

ಕುಶಾಲನಗರ, ಸೆ.20 : ಆನೆಕಾಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 9 ಗಂಟೆ ಸಮಯದಲ್ಲಿ ಕೇರಳ ನೋಂದಣಿಯ ಪಿಕ್ ಅಪ್ ಮತ್ತು ಸ್ವಿಫ್ಟ್ ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು ಹಲವರು ಗಾಯಗೊಂಡು ಕುಶಾಲನಗರದ ಸೈರಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರೆ ಮತ್ತೆ ಕೆಲವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಗೊಂಡವರು ಹಾಗೂ ಮೃತಪಟ್ಟವರು ಹೊಸಕೋಟೆ ಮತ್ತು ಕೊಡಗರಹಳ್ಳಿಯವರು ಎಂದು ತಿಳಿದುಬಂದಿದೆ . ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.