Kodagu

ದಿ. ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿಗೆ ಬಾಳೆಯಡ ಕಿಶನ್ ಪೂವಯ್ಯ ಅವರ "ರಾಜಕೀಯ ಮತ್ತು ಪ್ರಕೃತಿ" ಕೃತಿ ಆಯ್ಕೆ

admincoorgdaily

ದಿ. ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿಗೆ ಬಾಳೆಯಡ ಕಿಶನ್ ಪೂವಯ್ಯ ಅವರ "ರಾಜಕೀಯ ಮತ್ತು ಪ್ರಕೃತಿ" ಕೃತಿ ಆಯ್ಕೆ
ಮಡಿಕೇರಿ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪುರುಷ ಸಾಹಿತಿಗಳಿಗೆ ಮೀಸಲಾಗಿ ಇಟ್ಟಿರುವ  ಪ್ರತಿಷ್ಠಿತ ದತ್ತಿ "ದಿ. ಬಿ.ಎಸ್ ಗೋಪಾಲಕೃಷ್ಣ ದತ್ತಿ ಪ್ರಶಸ್ತಿ"ಗೆ ಜಿಲ್ಲೆಯ ಹಿರಿಯ ಸಾಹಿತಿ ಮತ್ತು ವಕೀಲರಾದ  ಬಾಳೆಯಡ ಕಿಶನ್ ಪೂವಯ್ಯ ರವರು ರಚಿಸಿದ "ರಾಜಕೀಯ ಮತ್ತು ಪ್ರಕೃತಿ"  ಕೃತಿಯು ಪುರಸ್ಕೃತ ಗೊಂಡಿದೆ.

  ಜಿಲ್ಲೆಯ ದೈನಿಕ ಶಕ್ತಿ ಪತ್ರಿಕೆಯ ಸ್ಥಾಪಕ ಸಂಪಾದಕರಾದ ಬಿ.ಎಸ್ ಗೋಪಾಲಕೃಷ್ಣ ರವರ ಹೆಸರಿನಲ್ಲಿ ಅವರ ಪುತ್ರರು ಸ್ಥಾಪಿಸಿರುವ ಈ ದತ್ತಿಯ ತೃತೀಯ ಪ್ರಶಸ್ತಿ ಇದಾಗಿದೆ.
    ಈ ದತ್ತಿ ಪ್ರಶಸ್ತಿಯ ಆಯ್ಕೆಗಾಗಿ ಜಿಲ್ಲೆಯ ಪುರುಷ  ಬರಹಗಾರರು ಸಲ್ಲಿಸಿದ್ದ ಕೃತಿಗಳನ್ನು ಜಿಲ್ಲೆಯ ಹಿರಿಯ ಮೂರು ಸಾಹಿತಿಗಳು ಪ್ರತ್ಯೇಕವಾಗಿ ಪರಿಶೀಲಿಸಿ ನೀಡಿದ ಅಂಕಗಳನ್ನು ಜಿಲ್ಲಾ ಸಮಿತಿ ಒಟ್ಟುಗೂಡಿಸಿ   ಅತಿ ಹೆಚ್ಚು ಅಂಕವನ್ನು ಲೇಖಕರಾದ ಬಾಳೆಯಡ ಕಿಶನ್ ಪೂವಯ್ಯ ರವರ "ರಾಜಕೀಯ ಮತ್ತು ಪ್ರಕೃತಿ"  ಕೃತಿಯ ಪಡೆದುಕೊಂಡಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ತಿಳಿಸಿದ್ದಾರೆ.

     ವಕೀಲರೂ, ನೋಟರಿ ಹಾಗೂ  ಸಾಹಿತಿಯೂ ಆಗಿರುವ ಬಾಳೆಯಡ ಕಿಶನ್ ಪೂವಯ್ಯ ತಮ್ಮ ರಚನಾತ್ಮಕ ಬರಹಗಳ ಮೂಲಕ ಜಿಲ್ಲೆಯ ಜನತೆಗೆ ಪರಿಚಿತರು. ಸಮಾಜದ ಹಿತ ಚಿಂತಕರು, ಹಲವಾರು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಕಿಶನ್ ಪೂವಯ್ಯ ಅವರ ನೇರನುಡಿ, ಜಾತ್ಯಾತೀತ ಮನೋಭಾವ, ಎಲ್ಲ ವರ್ಗದವರೊಂದಿಗೆ ಪ್ರೀತಿಯ ಒಡನಾಟ ಅವರಿಗೆ ಹೆಚ್ಚಿನ ಗೌರವ ತಂದು ಕೊಟ್ಟಿದೆ. 

     ಸಮಾಜದ ಆಗುಹೋಗುಗಳ ಬಗ್ಗೆ ಅನೇಕ ಲೇಖನ ಬರೆದಿರುವ ಇವರು ಸಾಮಾಜಿಕ ಕಳಕಳಿಯ "ವ್ಯಕ್ತಿ ಪರಿಚಯ ಮತ್ತು ಸಾಮಾಜಿಕ ಚಿಂತನೆ" ಎಂಬ ಕೃತಿಯಲ್ಲಿ  ರಾಜಕಾರಣಿಗಳು, ವೈದ್ಯರು, ಚಿತ್ರ ಕಲಾವಿದರು, ಪತ್ರಕರ್ತರು, ಕ್ರೀಡಾಪಟುಗಳು, ಜನ ಪ್ರತಿನಿಧಿಗಳು, ಪೊಲೀಸರು, ಸೈನಿಕರು ಸೇರಿದಂತೆ ವಿವಿಧ ರಂಗಗಳ ಪ್ರಭಾವಿ ವ್ಯಕ್ತಿಗಳ ಸಾಧನೆಗಳ ಕುರಿತು  ಬೆಳಕು ಚೆಲ್ಲಿದ್ದಾರೆ. 

‌      ಕೊಡಗು ಜಿಲ್ಲಾ ವಕೀಲರ ಸಂಘ, ಮಡಿಕೇರಿಯ ಕಾವೇರಿ ಕೊಡವ ಕೇರಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ದಸರಾ ಸಮಿತಿ, ಕಾವೇರಿ ಭಕ್ತ ಮಂಡಳಿ, ಕೂರ್ಗ್ ಹಾಕಿ ಅಸೋಸಿಯೇಷನ್ ನಂತಹ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಇವರು ಬಾಳೆಯಡ ಕುಟುಂಬದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ದಿ. ಬಿ.ಎಸ್ ಗೋಪಾಲಕೃಷ್ಣ ದತ್ತಿಯ ಪ್ರಥಮ ಪ್ರಶಸ್ತಿಯನ್ನು ಜಿಲ್ಲೆಯ ಹಿರಿಯ ಸಾಹಿತಿಗಳಾದ ನಾಗೇಶ್ ಕಾಲೂರು ರವರು ತಮ್ಮ "ಶ್ರೀ ಕಾವೇರಿ ದರ್ಶನಂ - ಸಮಗ್ರ ಕಾವೇರಿ"  ಕೃತಿಗೆ ಪಡೆದುಕೊಂಡಿದ್ದರೆ ದ್ವಿತೀಯ ಪ್ರಶಸ್ತಿಯನ್ನು ಹಿರಿಯ ಸಾಹಿತಿಗಳು ವೈದ್ಯರು ಆದ ಡಾ ಕೆ.ಬಿ. ಸೂರ್ಯಕುಮಾರ್ ರವರು "ವೈದ್ಯ ಕಂಡ ವಿಸ್ಮಯ" ಕೃತಿಗೆ ಪಡೆದುಕೊಂಡಿದ್ದರು.

        ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಸಭೆಯಲ್ಲಿ ತೀರ್ಪುಗಾರರು ಕಳುಹಿಸಿದ  ಅಂಕಿ ಪಟ್ಟಿಯನ್ನು ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ರೇವತಿ ರಮೇಶ್, ಕೋಶಾಧಿಕಾರಿ ಎಸ್ ಎಸ್ ಸಂಪತ್ ಕುಮಾರ್, ಮಾಜಿ ಅಧ್ಯಕ್ಷ ಟಿ.ಪಿ ರಮೇಶ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ವಾಸುರೈ  ರವರು ಉಪಸ್ಥಿತರಿದ್ದ ಸಭೆಯಲ್ಲಿ ಪರಮರ್ಶಿಷಿ ಅಂಕಗಳನ್ನು ಒಟ್ಟುಗೂಡಿಸಿ ಹೆಚ್ಚಿನ ಅಂಕ ಪಡೆದ  ಲೇಖಕರಾದ ಬಾಳೆಯಡ ಕಿಶನ್ ಪೂವಯ್ಯ ರವರ "ರಾಜಕೀಯ ಮತ್ತು ಪ್ರಕೃತಿ"  ಕೃತಿಯ ಪಡೆದುಕೊಂಡಿದೆ.

       ಮುಂದೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗುವುದು. ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶ್ರೀಮತಿ ರೇವತಿ ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.