ಮಡಿಕೇರಿ ಯುವ ದಸರಾದಲ್ಲಿ ಸೌoದರ್ಯ ನಡಿಗೆಯ ಮೋಡಿ
admincoorgdaily

ಮಡಿಕೇರಿ; ಈ ಬಾರಿ ಮಡಿಕೇರಿ ಯುವ ದಸರಾದಲ್ಲಿ ಕೊಡಗಿನ ಯುವ ಮಾಡೆಲ್ ಗಳು ಸೌoದರ್ಯ ನಡಿಗೆಯ ಕಾರ್ಯಕ್ರಮ ನೀಡಲಿದ್ದಾರೆ.
ಯುವ ದಸರಾ ಅಧ್ಯಕ್ಷ ಕವನ್ ಕೊತ್ತೊಳಿ ಸಹಕಾರದಲ್ಲಿ
ಸೋಮವಾರಪೇಟೆ ಮೂಲದ ಬೆಂಗಳೂರಿನಲ್ಲಿ ನೆಲಸಿರುವ ಅಮ್ಮಜೀರ ಅರ್ಪಿತಾ ಧರ್ಮಪ್ಪ ಅವರ ನಿರ್ದೇಶನಡಲ್ಲಿ ಅಕ್ಟೋಬರ್ 18 ರಂದು ಭಾನುವಾರ ಸಂಜೆ 7 ಗಂಟೆಗೆ ಯುವ ದಸರಾದಲ್ಲಿ ಕೊಡಗು ವಾಗ್ ಬ್ಯಾನರ್ ನಡಿಯಲ್ಲಿ ಈ ಸೌoದರ್ಯ ನಡಿಗೆ ಕಾರ್ಯಕ್ರಮ ಆಯೋಜಿತ ಆಗಿದೆ.
ಕೊಡಗು ಜಿಲ್ಲೆಯ ವಿವಿದೆಡೆಗಳ ರೂಪದರ್ಶಿಯರು ಸಾಂಪ್ರದಾಯಿಕ ಉಡುಗೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.