ಡೋಂಗಿ ಪರಿಸರವಾದಿಗಳು' ಎಂಬ ಹಣೆಪಟ್ಟಿ ಸರಿಯಲ್ಲ; ಕರ್ನಲ್ ಮುತ್ತಣ್ಣ
admincoorgdaily

ಮಡಿಕೇರಿ: ಪರಿಸರ ರಕ್ಷಣೆಗೆ ಜಿಲ್ಲೆಯ ಜನತೆ ಮತ್ತು ಜನಪ್ರತಿನಿಧಿಗಳು ಒಗ್ಗೂಡಬೇಕು ಎಂದು ಪರಿಸರ ಹಾಗೂ ಆರೋಗ್ಯ ಪ್ರತಿಷ್ಠಾನದ ಕಾರ್ಯದರ್ಶಿ ನಿವೃತ್ತ ಕರ್ನಲ್ ಸಿ.ಪಿ.ಮುತ್ತಣ್ಣ ಮನವಿ ಮಾಡಿದರು.
ಪ್ರಕೃತಿ ಉಳಿದರೆ ಮಾತ್ರ ಮನುಷ್ಯನ ಉಳಿವು ಸಾಧ್ಯ. ಈ ನಿಟ್ಟಿನಲ್ಲಿ ಕೊಡಗಿನ ಪರಿಸರ ಉಳಿಸಲು ಹಲವು ಪರಿಸರವಾದಿಗಳು ಹೋರಾಟ ಮಾಡುತ್ತಿದ್ದಾರೆ. ಆದರೆ ಇತ್ತೀಚಿನ ಕಸ್ತೂರಿ ರಂಗನ್ ವರದಿ ಕುರಿತ ಸಭೆಯಲ್ಲಿ ವರದಿ ಜಾರಿಗೆ ಡೋಂಗಿ ಪರಿಸರವಾದಿಗಳು ಕಾರಣ ಎಂದು ಹಣೆಪಟ್ಟಿ ಕಟ್ಟುವುದು ಸರಿಯಲ್ಲ ಎಂದರು.
ರಾಜಕಾರಣಿಗಳು ವರದಿ ಜಾರಿಯಿಂದಾಗುವ ಆರ್ಥಿಕ ನೆರವು, ಪರಿಣಾಮದ ಬಗ್ಗೆ ಜನರಿಗೆ ಮಾಹಿತಿ ನೀಡದೆ, ರಾಜಕೀಯ ಉಳಿಸಿಕೊಳ್ಳಲು ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಸದಸ್ಯರಾದ ಗೋಪಿನಾಥ್, ಸನ್ನಿ ಸೋಮಯ್ಯ, ಫ್ರ್ಯಾಂಕ್ಲಿನ್ ಇದ್ದರು.