Kodagu

ಮಕ್ಕಳನ್ನು ಸಂಸ್ಕಾರದಿಂದ ಬೆಳೆಸುವಲ್ಲಿ ತಾಯಿ, ಅಂಗನವಾಡಿ ಶಿಕ್ಷಕಿಯ ಪಾತ್ರ ಪ್ರಮುಖ; ಶ.ಗ.ನಯನತಾರಾ

admincoorgdaily

ಮಕ್ಕಳನ್ನು ಸಂಸ್ಕಾರದಿಂದ ಬೆಳೆಸುವಲ್ಲಿ ತಾಯಿ, ಅಂಗನವಾಡಿ ಶಿಕ್ಷಕಿಯ ಪಾತ್ರ ಪ್ರಮುಖ; ಶ.ಗ.ನಯನತಾರಾ
ಶನಿವಾರಸಂತೆ : ಮಕ್ಕಳನ್ನು ಮಮತೆ, ವಾತ್ಸಲ್ಯ, ಸಂಸ್ಕಾರಗಳಿಂದ ಬೆಳೆಸುವಲ್ಲಿ ತಾಯಿ ಮತ್ತು ಅಂಗನವಾಡಿ ಶಿಕ್ಷಕಿಯ ಪಾತ್ರ ಮಹತ್ವವಾದುದು ಎಂದು ಸಾಹಿತಿ ಶ.ಗ.ನಯನತಾರಾ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಗುಂಡೂರಾವ್ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ನಡೆದ ಮಕ್ಕಳ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಅಂಗನವಾಡಿಯಲ್ಲಿ ಶಿಕ್ಷಕಿಯ ಪ್ರಾಮಾಣಿಕತೆಯ ಪರಿಶ್ರಮದಲ್ಲಿ ಕಲಿಯುವ ಪುಟ್ಟ ಮಕ್ಕಳೇ ಭವಿಷ್ಯದ ಭರವಸೆಯಾಗಿದ್ದು; ಜನ್ಮ ನೀಡಿದಾಕೆ ಮೊದಲ ಅಮ್ಮನಾದರೇ ಅಂಗನವಾಡಿ ಶಿಕ್ಷಕಿ ಎರಡನೇ ಅಮ್ಮನಾಗುತ್ತಾರೆ.ಕನ್ನಡದ ಓಂನಾಮ ಮನೆಯೊಳಗಿನಿಂದ ಮಾತೆಯಿಂದಲೇ ಆರಂಭವಾಗಬೇಕು ಎಂದರು. 

   ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸೋಮವಾರಪೇಟೆ ತಾಲೂಕು  ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಸಾವಿತ್ರವ್ವ, 
ದೇಶದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂರವರ ಜನ್ಮದಿನವನನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ.ಮಕ್ಕಳು ಆರೋಗ್ಯವಂತರಾಗಿ ಸದೃಢವಾಗಿ ಬೆಳೆಯುವಂತೆ ಮಾಡುವಲ್ಲಿ ಪೋಷಕರ ಪಾತ್ರವೂ ಮುಖ್ಯವಾಗಿದೆ ಎಂದರು.

  ಅಂಗನಾಡಿ ಕೇಂದ್ರದ ಶಿಕ್ಷಕಿ ಚಂದ್ರಲೇಖಾ ಮಾತನಾಡಿ, ಮಕ್ಕಳ ಕಲಿಕೆಯೊಂದಿಗೆ ಸರ್ವಾಂಗೀಣ ಪ್ರಗತಿ ಅಂಗನವಾಡಿಯಲ್ಲೇ ಆರಂಭವಾಗುತ್ತದೆ.ಮಕ್ಕಳ ದೈಹಿಕ-ಬೌದ್ಧಿಕ ಬೆಳವಣಿಗೆ ಪರೀಕ್ಷಿಸುವ ಮೈಲಿಗಲ್ಲಾಗಿರುವ ಅಂಗನವಾಡಿಗಳನ್ನು ಸರ್ಕಾರ ಮುಚ್ಚಬಾರದು ಎಂದು ಕಳಕಳಿಯ ಮನವಿ ಮಾಡಿದರು.

 ಗುಂಡೂರಾವ್ ಬಡಾವಣೆ ಅಂಗನವಾಡಿ ಶಿಕ್ಷಕಿ ಧನಲಕ್ಷ್ಮಿ  ಪ್ರಾಸ್ತವಿಕ  ನುಡಿಯಾಡಿದರು ಅಂಗನವಾಡಿ .ಶಿಕ್ಷಕಿಯರಾದ ಎಂ.ಎಂ.ಪದ್ಮಾ , ಶ್ರೀಮತಿ, ಸಹಾಯಕಿ ಕೈರುನ್ನೀಸಾ, ಪೋಷಕರು ಹಾಜರಿದ್ದರು.

ಧನಲಕ್ಷ್ಮಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.ಚಂದ್ರಲೇಖಾ ವಂದಿಸಿದರು.

ಕೇಂದ್ರದಲ್ಲಿ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ ಏರ್ಪಡಿಸಿದ್ದು ವನದೇವತೆಯ ವೇಷಧಾರಿ ಮಗು ಸನಾ ಪ್ರಥಮ, ವೈದ್ಯ ವೇಷಧಾರಿ ಯದುವೀರ ಶೆಟ್ಟಿ ದ್ವಿತೀಯ, ಪೊಲೀಸ್ ಹಾಗೂ ಶ್ರೀಕಷ್ಣ ನ ಪಾತ್ರಧಾರಿಗಳಾದ ಮಹಮ್ಮದ್ ಶಯನ್ ಮತ್ತು ಭುವನ್ ಶೆಟ್ಟಿ ತೃತೀಯ ಸ್ಥಾನ ಗಳಿಸಿ ಬಹುಮಾನ ಪಡೆದರು.ಭಾಗವಹಿಸಿದ ಮಕ್ಕಳೆಲ್ಲರಿಗೂ ಸಮಾಧಾನಕರ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.