ಕನ್ನಡ ಭಾಷೆಯನ್ನು ವಿಶ್ವದಾದ್ಯಂತ ಪ್ರಸರಿಸುವಲ್ಲಿ ಯುವ ಜನಾಂಗದ ಪಾತ್ರ ಅಪಾರ;ವಾಣಿಜ್ಯ ತೆರಿಗೆ ನಿವೃತ್ತ ಆಯುಕ್ತ ಸಿದ್ದಪ್ಪ ಹೆಳವರಹುಂಡಿ ಅಭಿಮತ
admincoorgdaily

ಕುಶಾಲನಗರ : ಪ್ರತಿಯೊಬ್ಬ ಕನ್ನಡಿಗರು ತಮ್ಮ ಸಂತಸ ಹಾಗೂ ಸಂಕಟಗಳನ್ನು ವ್ಯಕ್ತಪಡಿಸುವ ಮೆದುಳಿನ ಭಾಷೆ ಕನ್ನಡ ಎಂದು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಆಯುಕ್ತ ಸಿದ್ದಪ್ಪ ಹೆಳವರಹುಂಡಿ ಅಭಿಮತ ವ್ಯಕ್ತಪಡಿಸಿದರು.
ಹಾರಂಗಿ ಬಳಿಯ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ 71 ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,
ಕನ್ನಡಿಗರ ಅಂತರಂಗದ ಆತ್ಮಭಾಷೆಯಾಗಿರುವ ಕನ್ನಡ ಭಾಷೆಯನ್ನು ವಿಶ್ವದಾದ್ಯಂತ ಪಸರಿಸುವ ಹಾಗೂ ಕರುನಾಡಿನಲ್ಲಿ ಬೆಳಗಿಸುವ ಕಾಯಕ ಮುಂದಿನ ಜನಾಂಗವಾದ ಇಂದಿನ ವಿದ್ಯಾರ್ಥಿಗಳಲ್ಲಿ ಮೊಳಕೆಯೊಡೆಯಬೇಕು.
ಬ್ರಿಟಿಷರು ಭಾರತ ದೇಶವನ್ನು ಬಿಟ್ಟು ತೊಲಗುವಾಗ ಹೂಡಿದ ತಂತ್ರಗಳಿಂದಾಗಿ ಹರಿದು ಹಂಚಿ ಹೋಗಿದ್ದ ಕನ್ನಡ ಮಾತನಾಡುವ ಪ್ರಾಂತ್ಯಗಳು ಏಕೀಕರಣ ಸಮಿತಿಯ ನಿರಂತರ ಹೋರಾಟದ ಫಲವಾಗಿ ಸಮಗ್ರ ಕರ್ನಾಟಕ ವಾಗಿ ರೂಪುಗೊಂಡಿರುವ
ಸಮಗ್ರ ಕರ್ನಾಟಕವನ್ನು ಎಲ್ಲಾ ರಂಗಗಳಲ್ಲಿ ಅಭಿವೃದ್ಧಿ ಗೊಳಿಸಲು ಇಂದಿನ ವಿದ್ಯಾರ್ಥಿಗಳು ಹಾಗೂ ಯುವ ಜನಾಂಗ ಪಣತೊಡಬೇಕಿದೆ.
ಎಲ್ಲರಿಗೂ ಇನ್ಫೋಸಿಸ್ ಸಂಸ್ಥೆ ಕಟ್ಟಿದ ಅಪ್ಪಟ ಕನ್ನಡಿಗ ದಂಪತಿಗಳಾ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಯವರು ಮಾದರಿಯಾಗಬೇಕಿದೆ ಎಂದು ಸಿದ್ದಪ್ಪ ಕರೆಕೊಟ್ಟರು.
ಮೈಸೂರು ರೇಷ್ಮೆ ಇಲಾಖೆಯ ನಿವೃತ್ತ ಮೇನೇಜರ್ ಪುಟ್ಟಪ್ಪ,
ಜ್ಞಾನಗಂಗಾ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಕೆ.ಸುಧೀರ್, ಸಂಸ್ಥೆಯ ಕಾರ್ಯದರ್ಶಿ ಬಿ.ಎಸ್.ನಿಂಗಪ್ಪ,
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ,
ಸಂಸ್ಥೆಯ ಪ್ರಾಂಶುಪಾಲೆ ಜೆ.ಎ. ಸಂಜನಾ,
ಆಡಳಿತಾಧಿಕಾರಿ ಮರ್ವಿನ್ ಕೊರಿಯಪ್ಪ, ಶಿಕ್ಷಕರಾದ ಭಾಸ್ಕರ್, ದೀಪಾ, ರೇವತಿ, ಜಲಾವತಿ, ಶ್ರೀಕಲ, ಜಿ.ಎಸ್.ಪುನೀತ್ ಇದ್ದರು.
ವಿದ್ಯಾರ್ಥಿ ಗಳಾದ ವಿಷುದ್ಧ ಪ್ರಾರ್ಥಿಸಿದರು.
ತೇಜೋ ತನ್ನಯ್ ನಿರೂಪಿಸಿದರು.
ತನ್ಮಯ್ ಸ್ವಾಗತಿಸಿದರು.
ಶಾಲಾ ಮಕ್ಕಳಿಂದ ಕನ್ನಡ ಗಾಯನ, ವೀರ ಕನ್ನಡಿಗರ ಛದ್ಮ ವೇಶ ಸ್ಪರ್ಧೆ ನಡೆಯಿತು.
ಬಳಿಕ ಯಕ್ಷಗಾನ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.