Kodagu

ಕುಶಾಲನಗರದ ರಾಧಾಕೃಷ್ಣ ಬಡಾವಣೆಯಲ್ಲಿ ಕಳ್ಳತನ: 3 ಕೆಜಿ ಬೆಳ್ಳಿ, 5 ಸಾವಿರ ನಗದು ಕಳವು

admincoorgdaily

ಸಾಂದರ್ಭಿಕ ಚಿತ್ರ
ಕುಶಾಲನಗರ: ರಾಧಾಕೃಷ್ಣ ಬಡಾವಣೆಯಲ್ಲಿ ಕಳ್ಳತನ ಪ್ರಕರಣ ನಡೆದಿದೆ.
ಚಿಕ್ಕೋ ಬ್ಯಾಂಕ್ ನ ನಿವೃತ್ತ ನೌಕರ ಪುಟ್ಟಸ್ವಾಮಿ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಪುಟ್ಟಸ್ವಾಮಿ ಅವರು 15 ದಿನಗಳ ಹಿಂದೆ ಸಂಬಂಧಿಕರ ಮನೆಗೆ ಬೆಂಗಳೂರಿಗೆ ತೆರಳಿದ್ದರು. ಇದನ್ನೇ ಹೊಂಚು ಹಾಕಿದ್ದ ಕಳ್ಳರು, ಮನೆಯ ಹಿಂಬದಿಯ ಬಾಗಿಲಿನಿಂದ ಒಳನುಗ್ಗಿ ಮನೆಯನ್ನೆಲ್ಲ ಶೋಧಿಸಿ ಕಳ್ಳತನ ಮಾಡಿದ್ದಾರೆ.

ಕಳ್ಳರು ಮನೆಯಲ್ಲಿದ್ದ ಸುಮಾರು 3 ಕೆಜಿ ಬೆಳ್ಳಿ ಹಾಗೂ 5 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ. ಮನೆಗೆ ವಾಪಸ್ ಬಂದಾಗ ಕಳ್ಳತನ ಬೆಳಕಿಗೆ ಬಂದಿದೆ.

ಈ ಕುರಿತು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.