Kodagu

ಬಿಎಸ್‌ಇ ದಕ್ಷಿಣ ವಲಯ ಮಟ್ಟದ II ಟಿ20 ಕ್ರಿಕೆಟ್‌ಗೆ ಕೊಡಗು ವಿದ್ಯಾಲಯದ ಮೂವರು ವಿದ್ಯಾರ್ಥಿಗಳು ಆಯ್ಕೆ

admincoorgdaily

ಬಿಎಸ್‌ಇ ದಕ್ಷಿಣ ವಲಯ ಮಟ್ಟದ  II ಟಿ20 ಕ್ರಿಕೆಟ್‌ಗೆ ಕೊಡಗು ವಿದ್ಯಾಲಯದ ಮೂವರು ವಿದ್ಯಾರ್ಥಿಗಳು ಆಯ್ಕೆ
ಮಡಿಕೇರಿ; ಕೊಡಗು ವಿದ್ಯಾಲಯದ ಮೂವರು ಪ್ರತಿಭಾವಂತ ಕ್ರಿಕೆಟ್ ಆಟಗಾರರು ಸಿಬಿಎಸ್‌ಇ ದಕ್ಷಿಣ ವಲಯ ಮಟ್ಟದ II ಟಿ20 ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಪುಣೆಯ ಲೋನಾವಾಳದ ಸಿಂಹ್ನಗಢ ಪಬ್ಲಿಕ್ ಸ್ಕೂಲ್‌ನಲ್ಲಿ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 2ರವರೆಗೆ ನಡೆದ ಸಿಬಿಎಸ್‌ಇ ದಕ್ಷಿಣ ವಲಯ–II ಟಿ20 ಕ್ರಿಕೆಟ್ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಕ್ರೀಡಾ ಪ್ರತಿಭೆಯನ್ನು ಮೆರೆದಿದ್ದಾರೆ.

8ನೇ ತರಗತಿಯ   ಆಲ್ವಿನ್ ಟಿ. ಪಿ. ಅವರು ಅಂಡರ್–14 ತಂಡಕ್ಕೆ ವೇಗದ ಬೌಲರ್ ಆಗಿ ಆಯ್ಕೆಯಾಗಿದ್ದಾರೆ. 9ನೇ ತರಗತಿಯ ಆದಿತ್ಯ ಕೆ. ಎಂ. ಅವರು ಅಂಡರ್–17 ತಂಡಕ್ಕೆ ಎಡಗೈ ಆರಂಭಿಕ ಬ್ಯಾಟರ್ ಆಗಿ ಹಾಗೂ ಅದೇ ತರಗತಿಯ ದೇವಾವೃತ್ ಡಿ. ಬಿ. ಅವರು ಲೆಗ್ ಸ್ಪಿನ್ನರ್ ಆಗಿ ಆಯ್ಕೆಯಾಗಿದ್ದಾರೆ.

ಆಯ್ಕೆಯಾದ ವಿದ್ಯಾರ್ಥಿಗಳು ಅಕ್ಟೋಬರ್ 15ರಿಂದ 22ರವರೆಗೆ ನಡೆಯಲಿರುವ ವಿಶೇಷ ತರಬೇತಿ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಅಕ್ಟೋಬರ್ 24ರಿಂದ 30ರವರೆಗೆ ತಮಿಳುನಾಡಿನ ಮಧುರೈಯಲ್ಲಿ ನಡೆಯಲಿರುವ ಸಿಬಿಎಸ್‌ಇ ರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ದಕ್ಷಿಣ ವಲಯ–II ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು  ಕೊಡಗು ವಿದ್ಯಾಲಯದ   ಪ್ರಾಂಶುಪಾಲರಾದ   ಕೆ. ಎಸ್. ಸುಮಿತ್ರಾ   ತಿಳಿಸಿದ್ದಾರೆ.