Kodagu

ರಸ್ತೆಗೆ ಕಸ ಎಸೆದು ದರ್ಪ: ಮಹಿಳೆಯಿಂದಲೇ ಸ್ವಚ್ಛ ಮಾಡಿಸಿದ ನಗರಸಭೆ! 1500 ರೂ. ದಂಡ

admincoorgdaily

ರಸ್ತೆಗೆ ಕಸ ಎಸೆದು ದರ್ಪ: ಮಹಿಳೆಯಿಂದಲೇ ಸ್ವಚ್ಛ ಮಾಡಿಸಿದ ನಗರಸಭೆ! 1500 ರೂ. ದಂಡ
ಮಡಿಕೇರಿ: ನಗರದ ಕಾನ್ವೆಂಟ್ ಜಂಕ್ಷನ್‌ನಲ್ಲಿರುವ ಜೆರಾಕ್ಸ್ ಅಂಗಡಿಯ ಕಸವನ್ನು ರಸ್ತೆಗೆ ಎಸೆದು, ಪ್ರಶ್ನಿಸಿದವರಿಗೆ ಧಮಕಿ ಹಾಕಿದ್ದ ಮಹಿಳೆಗೆ ನಗರಸಭೆ ಬಿಸಿ ಮುಟ್ಟಿಸಿದೆ.

ಅಂಗಡಿಯ ಕಸವನ್ನು ರಸ್ತೆಗೆ ಎಸೆದಿದ್ದನ್ನು ಸ್ಥಳೀಯರು ಪ್ರಶ್ನಿಸಿದಾಗ ಮಹಿಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮಕಿ ಹಾಕಿದ್ದರು ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ನಗರಸಭಾ ಉಪಾಧ್ಯಕ್ಷ ಮಹೇಶ್ ಜೈನಿ, ಕೌನ್ಸಿಲರ್ ಅರುಣ್ ಶೆಟ್ಟಿ ಮತ್ತು ಸಿಬ್ಬಂದಿ ಭೂತ್ ರಾಜ್ ಅವರು ಮಹಿಳೆಯಿಂದಲೇ ರಸ್ತೆಗಿದ್ದ ಕಸವನ್ನು ಗುಡಿಸಿ ಸ್ವಚ್ಛ ಮಾಡಿಸಿದ್ದಾರೆ.

ಅಲ್ಲದೆ ನಿಯಮ ಉಲ್ಲಂಘನೆಗಾಗಿ ಮಹಿಳೆಗೆ 1,500 ರೂ. ದಂಡ ವಿಧಿಸಿದ್ದಾರೆ.