ಅ.17ರಂದು ತೀರ್ಥೋದ್ಭವ: ರಾತ್ರಿ 7.50ಕ್ಕೆ ತೀರ್ಥ ರೂಪಿಣಿಯಾಗಲಿರುವ ಮಾತೆ ಕಾವೇರಿ
admincoorgdaily

ಭಾಗಮಂಡಲ:ತಲಕಾವೇರಿ ಜಾತ್ರಾ ಮಹೋತ್ಸವದ ವೇಳಾಪಟ್ಟಿ ಪ್ರಕಟವಾಗಿದ್ದು, ಈ ಬಾರಿಯ ಪವಿತ್ರ ತೀರ್ಥೋದ್ಭವ ಅಕ್ಟೋಬರ್ 17ರ ಶನಿವಾರ ರಾತ್ರಿ 7.50ಕ್ಕೆ ಮೇಷ ಲಗ್ನದಲ್ಲಿ ನಡೆಯಲಿದೆ.
ಭಾಗಮಂಡಲದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2026ರ ತುಲಾ ಸಂಕ್ರಮಣ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳ ದಿನಾಂಕ ಘೋಷಿಸಲಾಗಿದೆ.
ಸೆ.27ರ ಭಾನುವಾರ ಬೆಳಗ್ಗೆ 8.45ಕ್ಕೆ ಭಗಂಡೇಶ್ವರ ದೇವಾಲಯದಲ್ಲಿ ತುಲಾ ಲಗ್ನದಲ್ಲಿ ಪ್ರತ್ಯೇಕ ಅಕ್ಷಿ, ಅ.5ರ ಸೋಮವಾರ ಬೆಳಗ್ಗೆ 10.35ಕ್ಕೆ ವೃಷಭ ಲಗ್ನದಲ್ಲಿ ಆಜ್ಞಾ ಮುಹೂರ್ತ, ಅ.15ರ ಗುರುವಾರ ಮಧ್ಯಾಹ್ನ 12.35ಕ್ಕೆ ಧನು ಲಗ್ನದಲ್ಲಿ ಅಕ್ಷಯ ಪಾತ್ರೆ ಹಾಗೂ ಸಂಜೆ 6.03ಕ್ಕೆ ಮೀನ ಲಗ್ನದಲ್ಲಿ ಕಾಣಿಕೆ ಡಬ್ಬಿ ಪೂಜೆ ನಡೆಯಲಿದೆ.
ಪ್ರಮುಖ ಆಕರ್ಷಣೆಯಾದ ತೀರ್ಥೋದ್ಭವ ಅ.17ರಂದು ತಲಕಾವೇರಿಯಲ್ಲಿ ರಾತ್ರಿ 7.50ಕ್ಕೆ ನೆರವೇರಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.