Kodagu

ಚೇಲಾವರ ಜಲಪಾತ, ಕಬ್ಬೆ ಬೆಟ್ಟಕ್ಕೆ ತೆರಳುವ ಪ್ರವಾಸಿಗರ ಶುಲ್ಕ ವಸೂಲಿ ಟೋಲ್ ಗೇಟ್ ಉದ್ಘಾಟನೆ

admincoorgdaily

ಚೇಲಾವರ ಜಲಪಾತ, ಕಬ್ಬೆ ಬೆಟ್ಟಕ್ಕೆ ತೆರಳುವ ಪ್ರವಾಸಿಗರ ಶುಲ್ಕ ವಸೂಲಿ ಟೋಲ್ ಗೇಟ್ ಉದ್ಘಾಟನೆ
ನಾಪೋಕ್ಲು :ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಾದ ಚೇಲಾವರ ಜಲಪಾತ ಹಾಗೂ ಕಬ್ಬೆ ಬೆಟ್ಟಗಳಿಗೆ ಆಗಮಿಸುವ ಪ್ರವಾಸಿಗರಿಂದ ಶುಲ್ಕ ವಸೂಲಿ ಮಾಡುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಟೋಲ್ ಗೇಟ್‌ನ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಚೇಲಾವರ ಗ್ರಾಮದ ಪೊನ್ನೋಲ ಶಾಲೆಯ ಸಮೀಪದ ಪ್ರಯಾಣಿಕರ ಬಸ್ ತಂಗುದಾಣದ   ಮುಂಭಾಗದಲ್ಲಿ ಸ್ಥಾಪಿಸಲಾಗಿರುವ ಟೋಲ್ ಗೇಟ್ ಅನ್ನು ನಡಿಕೇರಿಯಂಡ ಚಿಣ್ಣಪ್ಪ ಹಾಗೂ ಕುಟುಂಬಸ್ಥರು ಉದ್ಘಾಟಿಸಿದರು.

ಕಾರ್ಯಕ್ರಮದ ಅಂಗವಾಗಿ ಅರ್ಚಕರಾದ ಕಿರ್ತೇಶ್  ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿತು.

ಈ ಸಂದರ್ಭ ನರಿಯಂದಡ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರಾದ ಕೋಡಿರ ವಿನೋದ್ ನಾಣಯ್ಯ,ಮಾಜಿ ಸದಸ್ಯ ಮುಂಡಿಯೋಳಂಡ ಪ್ರವೀಣ್ ಈರಪ್ಪ, ಮಂಜುಳಾ,ನರಿಯಂದಡ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರುಗಳು,ಪೊನ್ನೋಲ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಗ್ರಾಮದ ಪ್ರಮುಖರು ಹಾಜರಿದ್ದರು.

ವರದಿ :ಝಕರಿಯ ನಾಪೋಕ್ಲು