Kodagu

ಅಪಾಯಕಾರಿ ಸ್ಥಿತಿಯಲ್ಲಿ ಟಿಂಬರ್ ಸಾಗಾಟ: 4 ಲಾರಿಗಳು ಪೊಲೀಸ್ ವಶಕ್ಕೆ

admincoorgdaily

ಅಪಾಯಕಾರಿ ಸ್ಥಿತಿಯಲ್ಲಿ ಟಿಂಬರ್ ಸಾಗಾಟ: 4 ಲಾರಿಗಳು ಪೊಲೀಸ್ ವಶಕ್ಕೆ
1002490438.jpg


ಕುಶಾಲನಗರ:ಅಪಾಯಕಾರಿ ಸ್ಥಿತಿಯಲ್ಲಿ ಟಿಂಬರ್‌ಗಳನ್ನು ಹೇರಿಕೊಂಡು ಸಂಚರಿಸುತ್ತಿದ್ದ 4 ಟಿಂಬರ್ ಲಾರಿಗಳನ್ನು ಕುಶಾಲನಗರ ಸಂಚಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ತೂಕ ಹಾಗೂ ಸಂಪೂರ್ಣ ಲಾರಿಯಿಂದ ಹೊರಕ್ಕೆ ಚಾಚಿದ ರೀತಿಯಲ್ಲಿ ಟಿಂಬರ್‌ಗಳನ್ನು ತುಂಬಿಸಿ ಅಸುರಕ್ಷಿತ ಸಾಗಾಟ ಮಾಡುತ್ತಿರುವುದು ಕಂಡುಬಂದ ಹಿನ್ನಲೆಯಲ್ಲಿ ಕುಶಾಲನಗರ ಪೊಲೀಸ್ ನಿರೀಕ್ಷಕ ಪ್ರದೀಪ್ ಕುಮಾರ್ ನೇತೃತ್ವದಲ್ಲಿ ಮಂಗಳವಾರ ರಾತ್ರಿ ಲಾರಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ವಶಕ್ಕೆ ಪಡೆದ ಲಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.