State News

ಜಮ್ಮಡ ಪ್ರೀತ್ ಅಪ್ಪಯ್ಯ ಅವರಿಗೆ ಸನ್ಮಾನ

admincoorgdaily

ಜಮ್ಮಡ ಪ್ರೀತ್ ಅಪ್ಪಯ್ಯ ಅವರಿಗೆ ಸನ್ಮಾನ
ಬೆಂಗಳೂರು, ಸೆ.09: ಕೊಡಗಿನ ಹೆಮ್ಮೆಯ ಪರ್ವತಾರೋಹಿ ಮತ್ತು ಶೂಟರ್ ಜಮ್ಮಡ ಪ್ರೀತ್ ಅಪ್ಪಯ್ಯ ಅವರನ್ನು ಇಂಧನ ಸಚಿವ ಕೆ.ಜೆ. ಜಾರ್ಜ್ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರವಾಗಿ ಬೆಂಗಳೂರಿನಲ್ಲಿ ಸನ್ಮಾನಿಸಿದರು.

ಸೆವೆನ್ ಸಮ್ಮಿಟ್‌ಗಳ ಪೈಕಿ ಮೂರು ಶಿಖರ ಏರಿರುವ ಪ್ರೀತ್ ಅವರು, 2023ರಲ್ಲಿ ಆಫ್ರಿಕಾದ ಕಿಲಿಮಂಜಾರೊ (5,895 ಮೀ), 2024ರಲ್ಲಿ ಯುರೋಪಿನ ಎಲ್ಬ್ರಸ್ (5,642 ಮೀ) ಹಾಗೂ 2026ರ ಆಗಸ್ಟ್ 15ರಂದು ಆಸ್ಟ್ರೇಲಿಯಾದ ಕೊಸಿಯಸ್ಕೊ (2,228 ಮೀ) ಶಿಖರಗಳನ್ನು ಯಶಸ್ವಿಯಾಗಿ ಏರಿದ್ದಾರೆ.

ಇದಲ್ಲದೆ ಶೂಟಿಂಗ್‌ನಲ್ಲಿ ಎಸ್‌ಎಐ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಎರಡು ಚಿನ್ನದ ಪದಕ ಸೇರಿದಂತೆ ಹಲವು ಬೆಳ್ಳಿ-ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಈ ಸಂದರ್ಭದಲ್ಲಿ ಸಚಿವ ಕೆ.ಜೆ. ಜಾರ್ಜ್ ಅವರು, ಪ್ರೀತ್ ಅವರ ಸಾಧನೆ ಯುವಜನತೆಗೆ ಸ್ಫೂರ್ತಿ ಎಂದು ಶ್ಲಾಘಿಸಿದರು. ಪೊನ್ನಣ್ಣ ಅವರು ಮುಖ್ಯಮಂತ್ರಿಗಳ ಪರವಾಗಿ ಶುಭ ಹಾರೈಸಿ, ರಾಜ್ಯಕ್ಕೆ ಕೀರ್ತಿ ತರುವ ಕ್ರೀಡಾಪಟುಗಳಿಗೆ ಸರ್ಕಾರದ ಬೆಂಬಲ ಮುಂದುವರಿಯಲಿದೆ ಎಂದರು.