Kodagu

ಮಾದಾಪುರ ಸರ್ಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಪಾಲಾಕ್ಷ ಅವರಿಗೆ ಬೀಳ್ಕೊಡುಗೆ

admincoorgdaily

ಮಾದಾಪುರ ಸರ್ಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಪಾಲಾಕ್ಷ ಅವರಿಗೆ ಬೀಳ್ಕೊಡುಗೆ
ಸೋಮವಾರಪೇಟೆ, ಸೆ.6: ತಾಲ್ಲೂಕಿನ ಮಾದಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ
ಆಗಸ್ಟ್ 2026 ರಲ್ಲಿ ಸೇವಾ ನಿವೃತ್ತಿ ಹೊಂದಿದ 
  ಮುಖ್ಯ ಶಿಕ್ಷಕ ಪಾಲಾಕ್ಷ ಅವರಿಗೆ ಶಾಲೆಯಲ್ಲಿ
ಭಾವಪೂರ್ಣ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಗೌರವ ಸಮರ್ಪಣೆ:
ನಿವೃತ್ತ ಮುಖ್ಯ ಶಿಕ್ಷಕ ಪಾಲಾಕ್ಷ ದಂಪತಿಯನ್ನು ಶಾಲೆಯ ವತಿಯಿಂದ ಹಾಗೂ ಗ್ರಾಮಸ್ಥರ ವತಿಯಿಂದ ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಅತ್ಯಂತ ವಿಜೃಂಭಣೆಯಿಂದ ಸನ್ಮಾನಿಸಲಾಯಿತು.

ಸೇವೆಯ ಸ್ಮರಣೆ: ಪಾಲಾಕ್ಷ ಅವರು ಮುಖ್ಯ ಶಿಕ್ಷಕರಾಗಿ ಮಾದಾಪುರ ಶಾಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆ, ಶಿಸ್ತು ಮತ್ತು ವಿದ್ಯಾರ್ಥಿಗಳ ಮೇಲಿನ ಅವರ ಮಮತೆಯನ್ನು ಕಾರ್ಯಕ್ರಮದಲ್ಲಿ ನೆನೆಸಿಕೊಳ್ಳಲಾಯಿತು.

ಮಾದಾಪುರ ಶ್ರೀಮತಿ ಡಿ.ಚನ್ನಮ್ಮ ಪಿಯೂ ಕಾಲೇಜಿನ
ಪ್ರಾಂಶುಪಾಲ ಸಿ.ಜಿ.
ಮಂದಪ್ಪ ಮಾತನಾಡಿ, ಮುಖ್ಯ ಶಿಕ್ಷಕ ಪಾಲಾಕ್ಷ ಅವರು ಶಾಲಾಭಿವೃದ್ಧಿ  ಹಾಗೂ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿರುವುದರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲೆಗೆ ಉತ್ತಮ ಫಲಿತಾಂಶ ಲಭಿಸಿದೆ.
ಶಿಕ್ಷಕರು ಉತ್ತಮವಾಗಿ ಅನನ್ಯ ಸೇವೆ ಸಲ್ಲಿಸಿದಾಗ ಸಮಾಜ ಗೌರವಿಸುತ್ತದೆ
 ಎಂದರು.

ಶುಭ ಹಾರೈಕೆ: 
ತಾಲ್ಲೂಕು ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ 
ಸೋಮಯ್ಯ ಮಾತನಾಡಿ,
ಅವರ ನಿವೃತ್ತ ಜೀವನವು ಸುಖ, ಶಾಂತಿ, ನೆಮ್ಮದಿ ಮತ್ತು ಆರೋಗ್ಯದಿಂದ ಕೂಡಿರಲಿ ಎಂದು  ಹಾರೈಸಿದರು.

 ಸನ್ಮಾನಕ್ಕೆ ಪ್ರತಿಕ್ರಿಯಿಸಿದ ನಿವೃತ್ತ ಮುಖ್ಯ ಶಿಕ್ಷಕ ಪಾಲಾಕ್ಷ ಮಾತನಾಡಿ, ತಮ್ಮ ಸೇವಾವಧಿಯಲ್ಲಿ ಶಾಲೆಯ ಪ್ರಗತಿಗೆ ಸಹಕರಿಸಿದ ಶಿಕ್ಷಕರು, ಎಸ್ ಡಿ ಎಂ ಸಿ ಸದಸ್ಯರು ಹಾಗೂ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.

ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಆರ್.
ರತ್ನಕುಮಾರ್ , ತಾಲ್ಲೂಕು ಸರ್ಕಾರಿ ನೌಕರರ ಅಧ್ಯಕ್ಷ ಪ್ರದೀಪ್, ನಿರ್ದೇಶಕ ಯಶವಂತಕುಮಾರ್,
 ಗೋಣಿಮರೂರು 
ಸರ್ಕಾರಿ ಪ್ರೌಢಶಾಲೆಯ
ಮುಖ್ಯ ಶಿಕ್ಷಕ ಎಚ್.ಬಿ.ತಳವಾರ್,
ಮಾತನಾಡಿದರು.
ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷ  ಮಾದಪ್ಪ, ಕಡಗದಾಳು ಸರ್ಕಾರಿ ಪ್ರೌಢಶಾಲೆಯ
ಮುಖ್ಯ ಶಿಕ್ಷಕಿ ಸಿ.ಸಿ. ಡೈಸಿ, ಪ್ರೌಢಶಾಲಾ  ಮುಖ್ಯ ಶಿಕ್ಷಕರಾದ ಟಿ.ಜಿ.ಪ್ರೇಮಕುಮಾರ್, ಬಸವರಾಜ್, ಚಂದ್ರಚಾರ್,
ಮಾದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಗಣಪತಿ, ಸಿ ಆರ್ ಪಿ ಟಿ.ಈ.ಮಂಜುನಾಥ್,
ಎಸ್ ಜೆ ಎಂ ಬಾಲಿಕಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ
ಮಾರಪ್ಪ,
ಬೇಲೂರಿನ ಉಪನ್ಯಾಸಕ
ಧರ್ಮೇಗೌಡ, ನಿವೃತ್ತ ಮುಖ್ಯ ಶಿಕ್ಷಕರಾದ ಶಿವಶಂಕರ್, ಬೀರೇಗೌಡ, ಪ್ರೌಢಶಾಲಾ ನಿವೃತ್ತ ಶಿಕ್ಷಕ ಆರ್.ಟಿ.ಅಂಟರದಾನಿ,
 ಇತರರು ಇದ್ದರು.
 ಶಿಕ್ಷಕ ಎ.ಎಂ.ಭರತ್ ನಿರ್ವಹಿಸಿದರು.
ಮಾದಾಪುರ ಕ್ಲಸ್ಟರ್  ವ್ಯಾಪ್ತಿಯ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ಎಸ್.ಡಿ.ಎಂ.ಸಿ,ಸದಸ್ಯರು, ಪೋಷಕರು, ಪ್ರೌಢಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಸಿಬ್ಬಂದಿ  ಇದ್ದರು.

    ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ ಹಾಗೂ ಸುತ್ಯಾರ್ಹ ಸೇವೆ ಸಲ್ಲಿಸಿ ನಿವೃತ್ತರಾದ ಮುಖ್ಯ ಶಿಕ್ಷಕ ಪಾಲಾಕ್ಷ ಮತ್ತು ಅವರ ಪತ್ನಿ ಪಲ್ಲವಿ
ಅವರಿಗೆ ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಗೌರವ ಪೂರ್ವಕವಾಗಿ ಗೌರವ ವಂದನೆ ಸಲ್ಲಿಸಿದರು.