Kodagu

ಶಿರಂಗಾಲ ಗ್ರಾಮದಲ್ಲಿ ಎಸ್.ವಿ.ನಂಜುಂಡಪ್ಪ ಅವರಿಗೆ ನುಡಿ ನಮನ: ಸಾಮಾಜಿಕ ಸೇವಾ ಕಾರ್ಯಗಳಿಗೆ ಮನ್ನಣೆ ಸಿಗಲಿ: ಅರಮೇರಿ ಸ್ವಾಮೀಜಿ

admincoorgdaily

ಶಿರಂಗಾಲ ಗ್ರಾಮದಲ್ಲಿ ಎಸ್.ವಿ.ನಂಜುಂಡಪ್ಪ ಅವರಿಗೆ ನುಡಿ ನಮನ: ಸಾಮಾಜಿಕ ಸೇವಾ  ಕಾರ್ಯಗಳಿಗೆ ಮನ್ನಣೆ ಸಿಗಲಿ: ಅರಮೇರಿ ಸ್ವಾಮೀಜಿ
ಕುಶಾಲನಗರ: ಸಮಾಜದಲ್ಲಿ ನಿಸ್ವಾರ್ಥ ಮನೋಭಾವದಿಂದ ಕೈಗೊಳ್ಳುವ ಸಾಮಾಜಿಕ ಸೇವಾ ಕಾರ್ಯಗಳು ಹಾಗೂ  ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಕೊಡುಗೆಗಳನ್ನು ನೀಡುವ ವ್ಯಕ್ತಿಗಳನ್ನು ಸಮಾಜ ಗುರುತಿಸಿ ಪ್ರೋತ್ಸಾಹಿಸಬೇಕು
 ಎಂದು ಅರಮೇರಿ- ಕಳಂಚೇರಿ  ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

      ಕುಶಾಲನಗರ ತಾಲ್ಲೂಕಿನ
 ಶಿರಂಗಾಲ ಗ್ರಾಮದಲ್ಲಿ ಏರ್ಪಡಿಸಿದ್ದ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರೂ ಆದ ಸಮಾಜ ಸೇವಕ ಎಸ್.ವಿ.ನಂಜುಂಡಪ್ಪ
ಅವರ ಶ್ರದ್ಧಾಂಜಲಿ ಸಭೆ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ 
ಮಾತನಾಡಿ, ಎಸ್.ವಿ.ನಂಜುಂಡಪ್ಪ ಅವರು ತಮ್ಮ ಸೇವಾ ಕಾರ್ಯಗಳಿಂದ ಗ್ರಾಮ ಪಂಚಾಯ್ತಿಯ ಮಾದರಿ ಅಧ್ಯಕ್ಷರಾಗಿ ಹೊರಹೊಮ್ಮಿದ್ದಾರೆ ಎಂದರು.

     ಸ್ಥಳೀಯ  ಗ್ರಾಮೀಣ  ಜನರ ಅಭಿಲಾಷೆಗೆ ಅನುಗುಣವಾಗಿ ಎಸ್.ವಿ. ನಂಜುಂಡಪ್ಪ ಅವರು ತಮ್ಮ ಶಿರಂಗಾಲ ಗ್ರಾಮದಲ್ಲಿ ಸರ್ಕಾರದ ವತಿಯಿಂದ ಸರ್ಕಾರಿ ಪಿಯೂ ಕಾಲೇಜು ಹಾಗೂ ಸುಸಜ್ಜಿತ  ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡಿಸುವಲ್ಲಿ ವಿಶೇಷ ಪ್ರಯತ್ನ ಮತ್ತು ಕಾಳಜಿ ಹೊಂದಿದ್ದು, ಅವರ ಸಾಮಾಜಿಕ ಸೇವೆಗೆ  ಕೈಗನ್ನಡಿಯಾಗಿದೆ ಎಂದರು.

   ಗ್ರಾಮದ ಸಮಗ್ರ ಅಭಿವೃದ್ಧಿ ಮತ್ತು ಗ್ರಾಮೀಣ ಜನರ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 1970 ರ ದಶಕದ ಅವಧಿಯಲ್ಲಿ 
ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಶಿರಂಗಾಲ ಗ್ರಾಮವನ್ನು ಒಂದು ಆದರ್ಶವಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ 
  ಎಂದು ಅರಮೇರಿ ಸ್ವಾಮೀಜಿ ಹೇಳಿದರು.

 ಕಿರಿಕೊಡ್ಲಿ ಮಠದ
 ಸ್ವಾಮೀಜಿ  ಸದಾಶಿವ ಸ್ವಾಮೀಜಿ ಮಾತನಾಡಿ, ಸದಾ ತಮ್ಮ ಗ್ರಾಮದ ಅಭಿವೃದ್ಧಿಯ ತುಡಿತ ಹೊಂದಿದ್ದ ನಂಜುಂಡಪ್ಪ ಅವರು, ಶಿರಂಗಾಲ ಪದವಿ ಪೂರ್ವ ಕಾಲೇಜಿನ ರೂವಾರಿಯೂ ಆಗಿದ್ದು, ತಮ್ಮನ್ನು ಸಮಾಜದ ಹಲವು ಅಭಿವೃದ್ಧಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದ ಎಸ್.ವಿ.ನಂಜುಂಡಪ್ಪ ಅವರು  ಶಿಕ್ಷಣ ಕ್ಷೇತ್ರಕ್ಕೆ ಮತ್ತು ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸಿದ್ದಾರೆ ಎಂದರು.

  ಮುಳ್ಳೂರು ಮಠದ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಮಾತನಾಡಿ, ಗ್ರಾಮ ಪಂಚಾಯಿತಿಯು ಗ್ರಾಮ ಮಟ್ಟದ ಸ್ಥಳೀಯ
ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರದ ಯೋಜನೆಗಳ ಅನುಷ್ಠಾನದ ಮೂಲಕ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಮೂಲಕ 
ಏಳು ದಶಕಗಳಿಗೂ ಹೆಚ್ಚು ಕಾಲ ತಮ್ಮನ್ನು  ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

   ತೊರೆನೂರು ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ ಹಾಗೂ
ಕಲ್ಲಳ್ಳಿ ರುದ್ರಮುನಿ ಸ್ವಾಮೀಜಿ ಮಾತನಾಡಿದರು. ಸೋಮವಾರಪೇಟೆಯ ವೀರಶೈವ ಸಮಾಜದ ಮುಖಂಡ ಹಾಲಪ್ಪ, ನಂಜಮ್ಮ ನಂಜುಂಡಪ್ಪ,
ಎಸ್.ಎನ್.ಶಶಿ, ಎಸ್.ಎನ್.ವಿಜಯ್, ಸಿ.ಎನ್.ಲೋಕೇಶ್, 
ಹಾಗೂ ಗ್ರಾಮಸ್ಥರು ಇದ್ದರು.