Kodagu

ತ್ರಿಭಾಷಾ ಸಾಹಿತಿ ವಿ.ಎಸ್.ರಾಮಕೃಷ್ಣ ದತ್ತಿ ಉಪನ್ಯಾಸ ಕಾರ್ಯಕ್ರಮ

admincoorgdaily

ತ್ರಿಭಾಷಾ ಸಾಹಿತಿ ವಿ.ಎಸ್.ರಾಮಕೃಷ್ಣ ದತ್ತಿ ಉಪನ್ಯಾಸ ಕಾರ್ಯಕ್ರಮ
ಕುಶಾಲನಗರ, ಸೆ.9 : 
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು (ಕ.ಸಾ.ಪ.) ಹಾಗೂ  
ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ
 ಕುಶಾಲನಗರ ಕನ್ನಡ ಭಾರತಿ ಪ್ರಥಮ ದರ್ಜೆ‌ ಕಾಲೇಜಿನಲ್ಲಿ ಮಂಗಳವಾರ (ಸೆ.8 ರಂದು ) ತ್ರಿಭಾಷಾ ಸಾಹಿತಿ ದಿ.ವಿ.ಎಸ್.ರಾಮಕೃಷ್ಣ ಅವರ 
 ದತ್ತಿ ಕಾರ್ಯಕ್ರಮದಲ್ಲಿ ಸಾಹಿತಿ ದಿವಂಗತ ವಿ.ಎಸ್.ರಾಮಕೃಷ್ಣ ಅವರ ಬದುಕು- ಬರಹ ಹಾಗೂ ಕೃತಿಗಳ ಕುರಿತು ದತ್ತಿ  ಕಾರ್ಯಕ್ರಮ ನಡೆಯಿತು.

    ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರಬಾಬು ಮಾತನಾಡಿ, ಕೊಡಗಿನ ತ್ರಿಭಾಷಾ ಸಾಹಿತಿ ವಿ.ಎಸ್.ರಾಮಕೃಷ್ಣ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿರುವ ಕೊಡಗುಗೆಗಳನ್ನು ಇಂದಿನ ಉವ ಪೀಳಿಗೆಗೆ ಪರಿಚಯ ಮಾಡಿಕೊಡಬೇಕಾಗಿದೆ. 
 ಈ ದಿಸೆಯಲ್ಲಿ ಸಾಹಿತಿ ವಿ.ಎಸ್.ರಾಮಕೃಷ್ಣ ಅವರ  
ವಿ.ಎಸ್.ರಾಮಕೃಷ್ಣ ಅವರ ಹೆಸರನ್ನು 
ಶಾಶ್ವತವಾಗಿ ಉಳಿಸಲು ಅವರ ಹೆಸರಿನಲ್ಲಿ ಸ್ಮಾರಕವಾಗಿ
 ಕುಶಾಲನಗರ ಪಟ್ಟಣದ ಗುಂಡೂರಾವ್ ಬಡಾವಣೆಯಲ್ಲಿ ಹಲವು ವೈವಿಷ್ಠ್ಯತೆಗಳೊಂದಿಗೆ
 ಸುಸಜ್ಜಿತ ಸಾರ್ವಜನಿಕ ಗ್ರಂಥಾಲಯ ಸ್ಥಾಪಿಸುವ  ಮೂಲಕ ಅವರ ಹೆಸರನ್ನು
ಚಿರಸ್ಥಾಯಿಯಾಗಿ ಉಳಿಸಬೇಕಾಗಿದೆ. ಇದರ  ಹೊಣೆಗಾರಿಕೆಯನ್ನು  ಕನ್ನಡ ಸಾಹಿತ್ಯ ಪರಿಷತ್ತು ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ವಿದ್ಯಾರ್ಥಿಗಳು ವಿ.ಎಸ್.ರಾಮಕೃಷ್ಣ ಅವರ ಕೃತಿಗಳನ್ನು ಅಧ್ಯಯನ ಮಾಡುವ ಮೂಲಕ ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಬೇಕು. ಹಾಗೆಯೇ, ವಿದ್ಯಾರ್ಥಿಗಳು
ಗ್ರಂಥಾಲಯ ಬಳಕೆ ಮಾಡಿಕೊಂಡು
ಸಾಹಿತ್ಯ, ಕಲೆ, ಸಂಸ್ಕ್ರತಿ ಅಭಿರುಚಿಯುಳ್ಳ 
ಪುಸ್ತಕಗಳ ಅಧ್ಯಯನದೊಂದಿಗೆ ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳುವುದು ಅತ್ಯಗತ್ಯ. ಸಾಹಿತ್ಯವು  ವ್ಯಕ್ತಿತ್ವ ವಿಕಸನಕ್ಕೆ, ಸೃಜನಶೀಲತೆ ಹೆಚ್ಚಿಸಲು ಮತ್ತು ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ನೆರವಾಗುತ್ತದೆ ಎಂದು ನಾಗೇಂದ್ರಬಾಬು ಹೇಳಿದರು.

   ಸಾಹಿತಿ ದಿವಂಗತ ವಿ.ಎಸ್.ರಾಮಕೃಷ್ಣ ಅವರ ಬದುಕು- ಬರಹ ಹಾಗೂ ಕೃತಿಗಳ ಕುರಿತು ಮಾತನಾಡಿದ
ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷ
ಟಿ.ಜಿ.ಪ್ರೇಮಕುಮಾರ್,
  ಕೊಡಗಿನಲ್ಲಿ ಗದ್ಯ, ಕಾವ್ಯ ರಚನೆ ಮೂಲಕ ಸಾಹಿತ್ಯ ಕೃಷಿ ಮಾಡಿರುವ ತ್ರಿಭಾಷಾ ಸಾಹಿತಿಯಾಗಿರುವ
ವಿ.ಎಸ್.ರಾಮಕೃಷ್ಣ 
ಕೊಡಗಿನ ಮೇರು ಸಾಹಿತಿಯಾಗಿ ರೂಪುಗೊಂಡು ಯುವ ಸಾಹಿತಿಗಳಿಗೆ ಉತ್ತಮ‌ ಮಾರ್ಗದರ್ಶನ ನೀಡುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು  ಬಣ್ಣಿಸಿದರು.

ವಿ.ಎಸ್.ರಾಮಕೃಷ್ಣ ಅವರು  ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 'ಜೀವನ ದರ್ಶನ' ಕುರಿತು
 ಸ್ವತಂತ್ರ ಭಾನು ಎಂಬ  ಕಾವ್ಯವನ್ನು ಬೋಗ ಷಟ್ಪದಿಯಲ್ಲಿ ಬರೆಯುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಆಯಾಮ ತಂದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ.  6 ದಶಕಗಳಿಗೂ ಹೆಚ್ಚು ಕಾಲ ಕೊಡಗಿನ ನೆಲ- ಜಲ, ಪ್ರಕೃತಿ- ಪರಿಸರ,  ಕಲೆ- ಸಂಸ್ಕ್ರತಿ ಹಾಗೂ ಸಾಹಿತ್ಯದ ಮೂಲಕ ಕೊಡಗು ಜಿಲ್ಲೆಯ ಬಗ್ಗೆ ಪರಿಚಯ ಮಾಡಿರುವ ಹೆಗ್ಗಳಿಕೆ ವಿ.ಎಸ್.ರಾಮಕೃಷ್ಣ ಅವರಿಗೆ ಸಲ್ಲುತ್ತದೆ ಎಂದರು.

 1994 ರಲ್ಲಿ ಕುಶಾಲನಗರದಲ್ಲಿ ನಡೆದ 4 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ
   ತ್ರಿಭಾಷಾ ಸಾಹಿತಿ ವಿ.ಎಸ್.ರಾಮಕೃಷ್ಣ ಅವರು
ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾಗಿ ಹಾಗೂ ಕೂಡಿಗೆಯಲ್ಲಿ ಶಿಕ್ಷಕರ ಬೇಸಿಕ್ ತರಬೇತಿ ಕೇಂದ್ರದಲ್ಲಿ
(ಈಗಿನ ಡಯಟ್ ಸಂಸ್ಥೆ) ಪ್ರಿನ್ಸಿಪಾಲರಾಗಿ ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ. ಸಾಹಿತಿ ವಿ.ಎಸ್.ರಾಮಕೃಷ್ಣ
 ಬದುಕು ಮತ್ತು ಬರಹ ಹಾಗೂ ಅವರ ಕೃತಿಗಳ ಬಗ್ಗೆ ಇಂದಿನ ಯುವಜನಾಂಗಕ್ಕೆ ಪರಿಚಯಿಸುವ ದಿಸೆಯಲ್ಲಿ ಅವರ ಸಮಗ್ರ ಸಾಹಿತ್ಯದ ಕುರಿತು  ಶಾಶ್ವತವಾಗಿ ದಾಖಲಾಗಿ ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸುವ ದಿಸೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಗ್ರಂಥ ಹೊರತರಲು ಸಂಘಟಿತ ಪ್ರಯತ್ನ ಅಗತ್ಯವಿದೆ ಎಂದು ಪ್ರೇಮಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

   ಸಾಹಿತಿ ವಿ.ಎಸ್.ರಾಮಕೃಷ್ಣ ಅವರ ಬರವಣಿಗೆಯ ಶೈಲಿ ಮತ್ತು ಪ್ರಭಾವ ಸರಳ  ಮತ್ತು ಸ್ಪಷ್ಟ ಭಾಷೆಯು ಇವರ ಬರವಣಿಗೆಯ ಶೈಲಿಯು ಅತ್ಯಂತ ಗಂಭೀರ ವಿಷಯಗಳನ್ನೂ ಸಾಮಾನ್ಯ ಜನರಿಗೂ ತಲುಪಿಸುವಷ್ಟು ಸರಳ ಮತ್ತು ಆಕರ್ಷಕವಾಗಿರುತ್ತದೆ ಎಂದು ಪ್ರೇಮಕುಮಾರ್ ಹೇಳಿದರು.

  ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ವಕೀಲರಾದ ಆರ್.ಕೆ.ನಾಗೇಂದ್ರಬಾಬು ಅವರು ಸಾಹಿತಿ ವಿ.ಎಸ್.ರಾಮಕೃಷ್ಣ ಅವರ ಹೆಸರಿನಲ್ಲಿ ಗ್ರಂಥಾಲಯವನ್ನು ಸೂಕ್ತ ಜಾಗದಲ್ಲಿ ವಿನೂತನ ಮಾದರಿಯಲ್ಲಿ ಆರಂಭಿಸಲು ನಾಗರಿಕರ ಪರವಾಗಿ
 ಸ್ಥಳೀಯ ಪುರಸಭೆಯೊಂದಿಗೆ ವ್ಯವಹರಿಸುವುದಾಗಿ ತಿಳಿಸಿದರು.
 ಕುಶಾಲನಗರ ಪಟ್ಟಣದ ಕಲಾಭವನಕ್ಕೆ ತೆರಳುವ ರಸ್ತೆಗೆ ಸಾಹಿತಿ ವಿ.ಎಸ್.ರಾಮಕೃಷ್ಣ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು  ಈಗಾಗಲೇ 
ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮನವಿ ಸಲ್ಲಿಸಿದ್ದು, ಇದು ಇನ್ನಷ್ಟೇ ಕಾರ್ಯರೂಪಕ್ಕೆ ಬರಲಿದೆ ಎಂದರು.

  ಕಾರ್ಯಕ್ರಮ
ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ
ಕೆ.ಎಸ್.ರುದ್ರಪ್ಪ, ಸಾಹಿತ್ಯ ಅಭಿರುಚಿಯಿಂದ ವಿದ್ಯಾರ್ಥಿಗಳ
ಜ್ಞಾನ ವೃದ್ಧಿ, ಮಾನಸಿಕ ನೆಮ್ಮದಿ, ಸೃಜನಶೀಲತೆ, ಕ್ರಿಯಾಶೀಲತೆ ಹಾಗೂ
ಸಂಸ್ಕೃತಿ ಅರಿವಿನಂತಹ
ಪ್ರಯೋಜನಗಳು ಲಭಿಸುತ್ತವೆ.
 ವಿದ್ಯಾರ್ಥಿಗಳು ನಾಡು- ನುಡಿ,
ಭಾಷೆ ಸಾಹಿತ್ಯ , ಸಂಸ್ಕ್ರತಿ ಹಾಗೂ ಪರಂಪರೆ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವ ಮೂಲಕ ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಬೇಕು ಎಂದರು.

   ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಸಿ.ದಿನೇಶ್, 
ಸಾಹಿತಿ ದಿ.ವಿ.ಎಸ್.ರಾಮಕೃಷ್ಣ ಅವರ ಪುತ್ರ ವಿ.ಆರ್.ದಿನೇಶ್,
ತಾಲ್ಲೂಕು ಕಸಾಪ
ತಾಲ್ಲೂಕು ಕ.ಸಾ.ಪ. ಸಮಿತಿ ಸದಸ್ಯ ಎಂ.ಎನ್.ಕಾಳಪ್ಪ,
ಕೋಶಾಧಿಕಾರಿ ಕೆ.ವಿ.ಉಮೇಶ್ ,
ಎಸ್.ಬಿ.ಐ.ಬ್ಯಾಂಕ್ ನ ನಿವೃತ್ತ ಹಿರಿಯ ವ್ಯವಸ್ಥಾಪಕಿ ಸೂದನ ರತ್ನಾವತಿ, ಸಾಹಿತಿ ಲೀಲಾಕುಮಾರಿ ತೊಡಿಕಾನ , ಉಪನ್ಯಾಸಕರು ಇದ್ದರು.
ಉಪನ್ಯಾಸಕಿ ಬಿ.ಜಿ.ಸ್ಮಿತಾ
ನಿರ್ವಹಿಸಿದರು.
ಉಪನ್ಯಾಸಕಿ  ಸುಮಯ ತಬಸಮ್
ಸ್ವಾಗತಿಸಿದರು.
ಉಪನ್ಯಾಸಕಿ  ಎ.ದರ್ಶಿನಿ
 ವಂದಿಸಿದರು.
ಸನ್ಮಾನ : ಇದೇ ವೇಳೆಯಲ್ಲಿ 
ಉಪನ್ಯಾಸ ನೀಡಿದ 
ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷ
ಟಿ.ಜಿ.ಪ್ರೇಮಕುಮಾರ್ ಹಾಗೂ 
 ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರಬಾಬು ಅವರನ್ನು ತಾಲ್ಲೂಕು ಕಸಾಪ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.